ಬಡ ಜನತೆಗೆ ಹೆಚ್ಚು ನೆರವಾಗಿ : ಡಿ ಕೆ ಶಿವಕುಮಾರ್

ಚಳ್ಳಕೆರೆ

      ಕಳೆದ 75 ದಿನಗಳ ನಂತರ ರಾಜ್ಯದಲ್ಲಿ ಕೊರೋನಾ ವೈರಾಣು ನಿಯಂತ್ರಿಸುವ ಕಾರ್ಯದಲ್ಲಿ ಕಾಂಗ್ರೆಸ್ ಪಕ್ಷ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದು, ಇದರಲ್ಲಿ ಪಾಲ್ಗೊಂಡ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಶಾಸಕರು ಹಾಗೂ ಎಲ್ಲಾ ಹಂತದ ಚುನಾಯಿತ ಜನ ಪ್ರತಿನಿಧಿಗಳಿಗೆ ಕೃತಜ್ಞತೆ ಅರ್ಪಿಸುವುದಾಗಿ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

       ಅವರು, ಭಾನುವಾರ ಇಲ್ಲಿನ ಶಾಸಕ ಭವನದಲ್ಲಿ ಅಧಿಕಾರ ಪದಗ್ರಹಣ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ನಡೆಸಿದ ವಿಡಿಯೋ ಕಾನ್ಪರೆನ್ಸ್‍ನಲ್ಲಿ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸಿ ಸಾರ್ವಜನಿಕರನ್ನು ಜಾಗೃತಿಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗಕ್ಕೆ ತುತ್ತಾಗದಂತೆ ಜಾಗ್ರತೆ ವಹಿಸಿದೆ. ಪಕ್ಷದ ಶಾಸಕ ಮಿತ್ರರು ಹಾಗೂ ಅನೇಕ ಹಿರಿಯ ಮುಖಂಡರು ಬಡ ಜನರಿಗೆ ಆಹಾರ, ದವಸ ಧಾನ್ಯ, ಇನ್ನಿತರೆ ಪದಾರ್ಥಗಳನ್ನು ನೀಡುವ ಮೂಲಕ ಬಡವರ ಕಷ್ಟಕ್ಕೆ ನೆರವಾಗಿದ್ಧಾರೆ.

       ಮುಂಬರುವ ದಿನಗಳಲ್ಲೂ ಸಹ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಇಂತಹ ಸಮಯದಲ್ಲಿ ಮುನ್ನುಗ್ಗಿ ಬಡ ಜನರಿಗೆ ಸಹಾಯ ಮಾಡಬೇಕಾಗಿ ವಿನಂತಿಸಿದರು. ಜೂನ್ 14ರಂದು ತಾವು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ನಂತರ ಪಕ್ಷದ ಸಂಘಟನೆಗೆ ಎಲ್ಲಾ ಹಂತದಲ್ಲೂ ಕಾರ್ಯನಿರ್ವಹಿಸುವುದಾಗಿ ತಿಳಿಸಿದರಲ್ಲದೆ, ಪಕ್ಷವನ್ನು ಮುನ್ನಡೆಸಲು ಎಲ್ಲರ ಸಹಕಾರ ಕೇಳಿದರು. ಕಾಂಗ್ರೆಸ್ ಪಕ್ಷ ಕಳೆದ ನೂರಾರು ವರ್ಷಗಳಿಂದ ಜನತೆಯ ಸಂಕಷ್ಟಗಳಿಗೆ ನೆರವಾಗಿದೆ ಎಂದರು.

       ಪಕ್ಷದ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ರವಿಕುಮಾರ್ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಗ್ರಾಮ, ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಿದ್ದಲ್ಲದೆ, ಎಲ್ಲಾ ಹಂತದ ಕಡುಬಡವರಿಗೆ ನೆರವು ನೀಡಲಾಗಿದೆ ಎಂದರು.

        ಶಾಸಕ ಟಿ.ರಘುಮೂರ್ತಿ ನೂರಾರು ಕಾರ್ಯಕರ್ತರೊಂದಿಗೆ ಶಿವಕುಮಾರ್ ಮಾತುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಎಸ್.ಎಚ್.ಸೈಯದ್, ಟಿ.ಪ್ರಭುದೇವ್, ಪಿ.ತಿಪ್ಪೇಸ್ವಾಮಿ, ಕಿರಣ್‍ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಫೇಸ್ವಾಮಿ, ಆರ್.ಪ್ರಸನ್ನಕುಮಾರ್, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಪ್ರಕಾಶ್, ವಿರೂಪಾಕ್ಷಿ, ಮಲ್ಲಿಕಾರ್ಜುನ್, ಸುಮಭರಮಣ್ಣ, ಆರ್.ಮಂಜುಳಾ, ಸಿ.ಕವಿತಾಬೋರಣ್ಣ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link