ಕುಷ್ಠ ರೋಗ ನಿವಾರಣೆಗೆ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ

ಹುಳಿಯಾರು:

        ಕುಷ್ಠರೋಗಕ್ಕೆ ಆರೋಗ್ಯ ಇಲಾಖೆಯಲ್ಲಿ ಉಚಿತವಾಗಿ ಔಷಧೋಪಚಾರಗಳಿದ್ದು ಕುಷ್ಠ ರೋಗ ನಿವಾರಣೆಗೆ ಸಾರ್ವಜನಿಕರು ಕೈ ಜೋಡಿಸುವಂತೆ ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರಿಕ್ಷಕರಾದ ವೆಂಕಟರಾನಯ್ಯನವರು ತಿಳಿಸಿದರು.

        ಹುಳಿಯಾರಿನ ಜ್ಞಾನ ಜ್ಯೋತಿ ಆಂಗ್ಲ ಶಾಲೆಯಲ್ಲಿ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ಕುಷ್ಠರೋಗವು ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುವ ಸಾಂಕ್ರಾಮಿಕ ರೋಗ. ಕುಷ್ಠರೋಗವು ಪಾರಂಪರ್ಯವಲ್ಲ, ಯಾರು ಕುಷ್ಠರೋಗಿಗಳಾಗಿ ಹುಟ್ಟುವುದಿಲ್ಲ ಎಂದರಲ್ಲದೆ ಕುಷ್ಠರೋಗಿಯ ಕಫ ಉಗುಳಿನ ಮೂಲಕ ಹೋರಬಂದು ಗಾಳಿಯ ಮೂಲಕ ಆರೋಗ್ಯವಂತನ ಶರೀರವನ್ನು ಪ್ರವೇಶಿಸುತ್ತದೆ. ಈ ರೋಗವು ಯಾರಿಗಾದರೂ ಯಾವ ವಯಸ್ಸಿನಲ್ಲಾದರು ಭೇದಭಾವವಿಲ್ಲದೆ ಹರಡಬಹುವುದು. ಆದ್ದರಿಂದ ಯಾವುದೇ ಬಿಳಿಯ ಮಚ್ಚೆಗಳು ನಿಮ್ಮ ದೇಹದಲ್ಲಿ ಕಂಡು ಬಂದರೆ ಆರೋಗ್ಯ ಇಲಾಖೆಗೆ ತಿಳಿಸಿ ಎಂದರು.

          ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಬಿ.ಕೆ.ಮಂಜುನಾಥ್ ಮಾತನಾಡಿ ಕುಷ್ಠರೋಗ ಪ್ರಚಾರಾಂದೋಲನ ಕಾರ್ಯಕ್ರಮವು ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮವನ್ನು ಪತ್ತೆ ಹಚ್ಚಿದ ಆಶಾ ಕಾರ್ಯಕರ್ತೆಯರಿಗೆ ಪೋತ್ಸಾಹ ಧನವಾಗಿ 250 ರುಪಾಯಿಗಳನ್ನು ಮತ್ತು ಗುಣಮುಖವಾದ ರೋಗಿಗೆ 400 ರೂಗಳನ್ನು ಹಾಗೂ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು 8 ಸಾವಿರ ರೂಗಳನ್ನು ಸರ್ಕಾರ ನೀಡಿ ಕುಷ್ಠರೋಗ ನಿವಾರಣೆಗೆ ಎಡೆಮುರಿ ಕಟ್ಟಲು ಹೊರಟಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಕುಷ್ಠರೋಗದ ಚಿಕಿತ್ಸೆಯಿದ್ದಲ್ಲಿ ಗುರುತಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿಸಿ ಕೊಳ್ಳುವ ಮುಖಾಂತರ ಕುಷ್ಠರೋಗ ನಿವಾರಣೆಗೆ ಸಹಕರಿಸಿ ಎಂದರು.

         ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಶಾ ಕಾರ್ಯಕರ್ತೆಯಾದ ಶೋಭಾ, ಜ್ಞಾನಜ್ಯೇತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಸುಧಾ ಹಾಗೂ ಸ್ಥಳಿಯ ಅಂಗನವಾಡಿ ಕಾರ್ಯಕರ್ತೆಯಾದ ಪೂರ್ಣಿಮಾ ಹಾಜರಿದ್ದರು.

         ನಾಗರತ್ನಮ್ಮನವರು ಸ್ವಾಗತಿಸಿದರು, ಶಿಕ್ಷಕಿ ಮಧುರವರು ವಂದಿಸಿದರು. ಕಾರ್ಯಕ್ರಮದಲ್ಲಿ ಜ್ಞಾನಜ್ಯೇತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕ ವೃಂದದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link