ನಗರವನ್ನು ಗುಡಿಸಲು ಮುಕ್ತ ನಗರವನ್ನಾಗಿಸಲು ಸಹಕರಿಸಿ

ಚಳ್ಳಕೆರೆ

          ಪ್ರಸ್ತುತ ನಗರಸಭೆಯ ವತಿಯಿಂದ ವಸತಿ ಯೋಜನೆಯ ಅರ್ಜಿಗಳನ್ನು ಡಿ.15 ರಿಂದ ವಿತರಣೆ ಮಾಡುತ್ತಿದ್ದು, ಈ ಪ್ರಕ್ರಿಯೆ ಡಿ.30ರ ತನಕ ಮುಂದುವರೆಯಲಿದ್ದು ಅರ್ಜಿಗಳ ವಿತರಣೆಯ ಕೌಂಟರ್‍ನಲ್ಲಿಯೇ ಭರ್ತಿ ಮಾಡಿದ ಅರ್ಜಿಗಳನ್ನು ಸಹ ಸ್ವೀಕರಿಸಲಾಗುವುದು. ಅರ್ಜಿಗಳ ಸ್ವೀಕಾರದ ನಂತರ ಸದರಿ ಅರ್ಜಿಗಳನ್ನು ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ರಚಿತವಾಗುವ ಆಶ್ರಯ ಸಮಿತಿಗೂ ಸಹ ಮಂಡಿಸಲಾಗುವುದು ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ಧಾರೆ.

            ವಸತಿ ಯೋಜನೆಯ ಬಗ್ಗೆ ಕೆಲವು ವ್ಯಕ್ತಿಗಳು ಅನಗತ್ಯ ಗೊಂದಲಗಳನ್ನು ಉಂಟು ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ್ಯಾರೂ ಯಾವುದೇ ರೀತಿಯ ಅಪಪ್ರಚಾರಗಳಿಗೆ ಕಿವಿಗೊಡದೆ ವಸತಿ ಯೋಜನೆಯಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳ ವಿತರಣೆ ಹಾಗೂ ಪರಿಶೀಲನೆ ಪಾರದರ್ಶಕವಾಗಿದ್ದು, ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ನಗರಸಭೆ ಆಡಳಿತ ಜಾಗೃತಿ ವಹಿಸಲಿದೆ.

           ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ನಗರದ ನಿವೇಶನ ರಹಿತರಿಗೆ 5250 ಮನೆಗಳನ್ನು ವಿತರಿಸಲು ರಾಜ್ಯ ಸರ್ಕಾರದಿಂದ ವಿಶೇಷ ಅನುಮತಿಯನ್ನು 30 ಅಕ್ಟೋಬರ್ 2017ರಂದು ಪಡೆದು ನಗರಸಭೆಯ ನಿಯಮಾವಳಿಗಳ ಪ್ರಕಾರ ಅರ್ಜಿಗಳ ವಿತರಣೆ ನಡೆಯುತ್ತಿದೆ.

           ಈ ಹಿಂದೆ 7020 ಅರ್ಜಿಗಳ ಬಂದಿದ್ದು, ಪರಿಶೀಲನೆ ಮಾಡಲಾಗಿ 1360 ಅರ್ಜಿಗಳು ಮಾತ್ರ ಆರ್ಹವಾಗಿರುತ್ತವೆ. ನಗರ ಆಶ್ರಯ ಸಮಿತಿಗೆ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಿದ್ದು, ಪ್ರಸ್ತುತ ನಗರಸಭೆ ಕೌನ್ಸಿಲ್ ರಚನೆಯಾಗದ ಹಿನ್ನೆಲೆಯಲ್ಲಿ ನಗರ ಆಶ್ರಯ ಸಮಿತಿ ಅಸ್ಥಿತ್ವದಲ್ಲಿಲ್ಲ. ಆದರೆ, ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿದ್ದು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನ ಪರಿಷತ್ ಸದಸ್ಯರು, ನಗರಸಭಾ ಅಧ್ಯಕ್ಷರು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‍ರು ಸದಸ್ಯರಾಗಿದ್ದು, ನಗರಸಭೆಯ ಪೌರಾಯುಕ್ತರು ಸಹ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

             ನಾಲ್ಕು ಜನ ಆಶ್ರಯ ಸಮಿತಿ ಸದಸ್ಯರನ್ನು ಸಹ ನೇಮಕ ಮಾಡಬಹುದಾಗಿರುತ್ತಾರೆ. ಪ್ರಸ್ತುತ ಜಿಲ್ಲಾಧಿಕಾರಿಗಳು ನಗರಸಭೆಯ ಆಡಳಿತಾಧಿಕಾರಿಯಾಗಿದ್ದು, ಅವರೂ ಆಶ್ರಯ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ. ನಗರಸಭೆಯ ಕೌನ್ಸಿಲ್ ಇನ್ನೂ ರಚನೆಯಾಗದೇ ಇರುವುದರಿಂದ ಮೇಲ್ಕಂಡ ಎಲ್ಲಾ ಅಧಿಕಾರಿಗಳು ಸಹ ವಸತಿ ಯೋಜನೆ ಫಲಾನುಭವಿಗಳನ್ನು ಗುರುತಿಸಲು ಅಧಿಕಾರ ಹೊಂದಿರುತ್ತಾರೆ.

              ನಗರಸಭೆ ಕೌನ್ಸಿಲ್ ಅಸ್ಥಿತ್ವಕ್ಕೆ ಬಂದಲ್ಲಿ ನಗರಸಭೆ ಆಶ್ರಯ ಸಮಿತಿ ಸಹ ಫಲಾನುಭವಿಗಳನ್ನು ಗುರುತಿಸಲು ಆರ್ಹತೆ ಪಡೆಯುತ್ತಾರೆ. ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಒಳಗಾಗದೇ ನಿಯಮ ಬದ್ದವಾಗಿ ಪೌರಾಡಳಿತ ಇಲಾಖೆ ಸೂಚಿಸಿರುವ ನಿಯಮಗಳ ಅನುಸಾರ ವಸತಿ ಯೋಜನೆಯಡಿಯ ಲಾಭವನ್ನು ಪೂರ್ಣಪ್ರಮಾಣದಲ್ಲಿ ಪಡೆಯಬೇಕೆಂದು ಮನವಿ ಮಾಡಿರುತ್ತಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap