ಎಂ ಎನ್ ಕೋಟೆ :
ತಿಂಗಳಿನಿಂದ ನಿಲುಗಡೆಯಾಗಿದ್ದ ಹೇಮಾವತಿ ನೀರು ಮತ್ತೆ ಭಾನುವಾರ ರಾತ್ರಿಯಿಂದ ಮತ್ತೆ ಹೇಮೆ ನೀರು ನಾಲೆಯಲ್ಲಿ ಹರಿಯಲು ಆರಂಭಿಸಿದ್ದು ರೈತರ ಮುಖದಲ್ಲಿ ಸಂತಸ ತಂದಿದೆ. ಬಾನುವಾರ ರಾತ್ರಿ ಎಂ ಎನ್ ಕೋಟೆ ಹೇಮಾವತಿ ನಾಲೆಯಲ್ಲಿ ಹರಿಯಿತ್ತು. ಇದನ್ನು ನೋಡಿದ ರೈತರಿಗೆ ಸಂತಸ ತಂದಿತ್ತು. ಸುಮಾರು ದಿನಗಳಿಂದ ನಿಂತು ಹೋಗಿದ್ದ ಹೇಮಾವತಿ ನೀರು ಮತ್ತೆ ನಾಲೆಯಲ್ಲಿ ಆಗಮಿಸಿವುದರಿಂದ ಈ ಭಾಗದ ರೈತರಿಗೆ ಖುಷಿಯಾಗಿದೆ.
ಈ ಭಾರಿ ಹಣೆಕಟ್ಟೆಯಲ್ಲಿ ಸುಮಾರು 25ಟಿಎಂಸಿ ನೀರು ಇರುವುದರಿಂದ ನವೆಂಬರ್ ವರೆಗೂ ನೀರು ಹರಿದಲ್ಲಿ ತಾಲ್ಲೂಕಿನ ಬಹುತೇಕ ಕೆರೆ ಕಟ್ಟೆ ತುಂಬುವ ಆಸೆಯನ್ನು ರೈತರು ಇಟ್ಟುಕೊಂಡಿದ್ದರು. ಆದರೆ ಮಧ್ಯದಲ್ಲಿ ಹೇಮಾವತಿ ನೀರು ನಿಲ್ಲಿಸಿದ ಕಾರಣ ತಾಲ್ಲೂಕಿನವರೇ ಸಚಿವರಾಗಿದ್ದರೂ ಈ ಬಾರಿಯೂ ತುಮಕೂರು ಜಿಲ್ಲೆಗೆ ನೀರು ಸರಿಯಾಗಿ ಹರಿಯಲಿಲ್ಲ ಎಂಬ ಆರೋಪವನ್ನು ಸಚಿವ ಎಸ್ ಆರ್ ಶ್ರೀನಿವಾಸ್ ಅವರು ಎದುರಿಸಬೇಕಾಗಿತ್ತು.
ತಾಲ್ಲೂಕಿನ ನಿಟ್ಟೂರು ಕೆರೆ ಒಂದೇ ತುಂಬಿರುವುದು ಬಿಟ್ಟರೆ ಇನ್ನ ಯಾವುದೇ ಕೆರೆಗಳು ತುಂಬಿಲ್ಲ ಕಡಬ, ಎಂ ಹೆಚ್ ಪಟ್ಟಣ್ಣ , ಎಂ ಎನ್ ಕೋಟೆ , ಅಳಿಲಘಟ್ಟ , ಗುಬ್ಬಿ ಕೆರೆಗಳು ತುಂಬಿಲ್ಲ ಹಾಗಾಗಿ ಹೇಮವತಿ ನೀರಿಗಾಗಿ ಸಾಕಷ್ವು ಸಮಸ್ಯೆ ತಲೆ ದೂರಿತ್ತು. ಈಗ ಹೇಮಾವತಿ ನೀರು ಮತ್ತೆ ಹರಿಯಲು ಆರಂಭಿಸಿದ್ದು ಮಾತಿನಂತೆ ಬಹುತೇಕ ತಾಲ್ಲೂಕಿನ ಎಲ್ಲ ಕೆರೆಗಳು ತುಂಬಿಸುತ್ತೇನೆ ಎಂದು ಸಚಿವ ಎಸ್ ಆರ್ ಶ್ರೀನಿವಾಸ್ ಭವರಸೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








