ಹರಿಹರ
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಿಂಗಳಿಗೆ ನೂರಾರು ಹೆರಿಗೆಗಳನ್ನು ಒಬ್ಬರೇ ಮಹಿಳಾ ಪ್ರಸೂತಿ ತಜ್ಞ ವೈದ್ಯರು ಸೇವೆ ಸಲ್ಲಿಸುತ್ತಿದ್ದು ತುರ್ತಾಗಿ ಮತ್ತೊಬ್ಬ ಮಹಿಳಾ ತಜ್ಞ ವೈದ್ಯರ ಅವಶ್ಯಕತೆ ಇದ್ದು, ಕೂಡಲೇ ಇನ್ನುಬ್ಬ ವೈದ್ಯರನ್ನು ನೇಮಿಸಲು ಇಲಾಖೆಗೆ ಪ್ರಸ್ತಾವನೆ ಕಳಿಸುವಂತೆ ಆಸ್ಪತ್ರೆ ಆಡಳಿತಾಧಿಕಾರಿ ಎಲ್.ಹನುಮಾನಯ್ಕ್ ಅವರಿಗೆ ಶಾಸಕ ಎಸ್. ರಾಮಪ್ಪ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ರಾಮಪ್ಪ ಅವರ ನೇತೃತ್ವದಲ್ಲಿ ನೆಡೆದ ಕುಡಿಯುವ ನೀರು ಹಾಗೂ ಬರಗಾಲ ಕುರಿತು ಪ್ರಗತಿ ಪರಿಶೀಲನೆ ಸಭೆಯಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಎಲ್.ಹನುಮಾನಯ್ಕ್ ಅವರು ತಮ್ಮ ಆಸ್ಪತ್ರೆಯ ಪ್ರಗತಿ ವರದಿಯನ್ನು ನೀಡುತ್ತಾ, ನಮ್ಮ ಆಸ್ಪತ್ರೆಯು ಇಲಾಖೆಯ ಕಾಯಕಲ್ಪ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ, ಎನ್.ಕ್ಯೂ.ಎ.ಎಸ್ ಮತ್ತು ಆಸ್ಪತ್ರೆಯ ಲಕ್ಷ್ಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಪೋಷಕರು ಖಾಸಗಿ ಶಾಲೆಯ ಕಟ್ಟಡ ಹಾಗೂ ಇತರೆ ಸೌಲಭ್ಯಗಳನ್ನು ನೋಡಿ ತಮ್ಮ ಮಕ್ಕಳನ್ನು ಅಲ್ಲಿಯೇ ಓದಿಸಬೇಕೆಂಬ ಆಸೆಯಿಂದ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಸತ್ಯಸಂಗತಿ ಏನೆಂದರೆ ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಕೊರತೆ ಇರುತ್ತದೆ. ಆದರೆ ಇತ್ತೀಚಿಗೆ ಪ್ರಾರಂಭವಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗಬಹುದೆಂಬ ನಿರೀಕ್ಷೆಯಲ್ಲಿ ಪೊಷಕರು ಮುಗಿಬೀಳು ತ್ತಿದ್ದಾರೆ. ಈ ಶಾಲೆಗಳಲ್ಲಿ ಕೇವಲ 30 ವಿದ್ಯಾರ್ಥಿಗಳಿ ಅವಕಾಶ ಇದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಮಕ್ಕಳಿಗೆ ಇದರ ಸೌಲಭ್ಯ ನೀಡುವಂತೆ ಸರ್ಕಾರ ಗಮನಹರಿಸಬೇಕು ಎಂದು ರಾಮಪ್ಪ ಹೇಳಿದರು.
ನಂತರ ಮಾಹಿತಿ ನೀಡಿದ ತಾಲೂಕು ಕೃಷಿ ಇಲಾಖೆಯ ಉಪ ನಿರ್ದೇಶಕ ಪಿ.ಗೋವರ್ಧನ್, ಈ ಬಾರಿ ವಾಡಿಕೆಗಿಂತ ಶೇಖಡ 75 ರಷ್ಟು ಮಳೆ ಕಡಿಮೆಯಾಗಿದ್ದು, ಇದುವರೆಗೂ ಯಾವುದೇ ರೈತರು ತಮ್ಮ ಕೃಷಿ ಚಟವಟಿಕೆಗಳನ್ನು ಪ್ರಾರಂಭಿಸಿಲ್ಲ. ಸುಮಾರು 4.5 ಸಾವಿರ ಎಕ್ಟರ್ ಬಿತ್ತನೆಯಾಗಬೇಕಿದ್ದ ಜಮೀನಿನಲ್ಲಿ ಇದುವರೆಗೂ ಬಿತ್ತನೆಯಾಗಿಲ್ಲ. ಇದರಂದ ರೈತರಿಗೆ ಸಂಪೂರ್ಣ ತೊಂದರೆಯಾಗಿದೆ. ಆಲಿಕಲ್ಲು ಮಳೆಯಿಂದ ತಾಲೂಕಿನಲ್ಲಿ ಸುಮಾರು 856 ರೈತರ 948 ಎಕ್ಟರ್ ಭತ್ತದ ಪೈರು ನಷ್ಟವಾಗಿದ್ದು ಸುಮಾರು 1.20 ಕೋಟಿ ಪರಿಹಾರ ಧನ ನೀಡುವಂತೆ ಸರ್ಕಾರಕ್ಕೆ ವರದಿಸಲ್ಲಿಸಲಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ವೃತ್ತ ನಿರೀಕ್ಷ ಐ.ಎಸ್ ಗುರುನಾಥ್ ಅವರು, ಸರ್ಕಾರ ತಾಲೂಕಿನ ಕೃಷಿ ಇಲಾಖೆಯಿಂದ ಪೂರೈಸುವ ಬೀಜಗಳು 20.74 ರಷ್ಟು ಕಳಪೆಯಾಗಿವೆ ಎಂದು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಕಾರಣ ಕೃಷಿ ಅಧಿಕಾರಿ ಮತ್ತು ವಿಜ್ಞಾನಿಗಳು ಸೇರಿ ಬೀಜವನ್ನು ಪೂರೈಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಾಲೂಕಿನ ರಸ್ತೆಗಳು ಗುಂಡಿ ಬಿದ್ದಿದ್ದು ನೂರಾರು ಪ್ರಯಾಣಿಕರು ಅಪಘಾತಗಳಿಗೆ ಒಳಾಗುತ್ತಿದ್ದಾರೆ, ಜನದಟ್ಟನೆ ಇರುವ ಪ್ರದೇಶಗಳಲ್ಲಿ ಇದುವರೆಗೂ ಸಿಸಿ ಕ್ಯಾಮರ ಅಳವಡಿಕೆಯಾಗಿಲ್ಲ. ತಾಲೂಕಿನಲ್ಲಿ ಅಧಿಕಾರಿಗಳು ನಿಷ್ಟೆಯಿಂದ ಕೆಲಸ ಮಾಡಿ ನಿಮಗೆ ನಾವು ರಕ್ಷಣೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ತಹಸೀಲ್ದರ್ ರೆಹಾನ್ ಪಾಷಾ, ಕಾರ್ಯನಿರ್ವಹಣ ಅಧಿಕಾರಿ ಜಿ.ಡಿ ಗಂಗಾಧರನ್, ತಾ.ಪಂ ಅಧ್ಯಕ್ಷೆ ಶ್ರೀದೇವಿ, ಉಪಾಧ್ಯಕ್ಷೆ ಜಯಮ್ಮ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
