ವಿಡಿಯೋ ಸಾಕ್ಷಿ ಪರಿಗಣಿಸಿ ವಿಚ್ಚೇದನ ಮಂಜೂರು ಮಾಡಿದ ಹೈಕೋರ್ಟ್..!

ಬೆಂಗಳೂರು

   ವಿಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಿ ಸಂತ್ರಸ್ಥ ಪತಿಗೆ ವಿಚ್ಚೇದನ ನೀಡುವ ಮೂಲಕ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪತ್ನಿಯು ಬೇರೊಬ್ಬ ವ್ಯಕ್ತಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋವನ್ನು ಚಿತ್ರೀಕರಿಸಿ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ನೀಡಿದ್ದನ್ನು ಪರಿಶೀಲನೆ ನಡೆಸಿ ಸಾಕ್ಷಿಯಾಗಿ ಪರಿಗಣಿಸಿರುವ ಹೈಕೋರ್ಟ್ ಬಳ್ಳಾರಿ ಮೂಲದ ಪತಿಗೆ ವಿಚ್ಚೇದನ ನೀಡಿದೆ.

     ಬಳ್ಳಾರಿ ಮೂಲದ ವ್ಯಕ್ತಿಯು ಕಳೆದ 1991 ಜುಲೈ 1 ರಂದು ಮಹಿಳೆಯೊಬ್ಬರನ್ನು ಮದುವೆಯಾಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಕೆಲ ವರ್ಷಗಳ ನಂತರ ಪತ್ನಿಯು ತನ್ನ ಸ್ನೇಹಿತನ ಜೊತೆ ಸಲುಗೆ ಬೆಳೆಸಿ ಅಕ್ರಮ ಸಂಬಂಧ ಹೊಂದಿರುವುದು ಕಂಡುಬಂದಿದ್ದು ಈ ಬಗ್ಗೆ ಪ್ರಶ್ನಿಸಿದಾಗ ಪತ್ನಿಯು ನಿರಾಕರಿಸಿ ಜಗಳ ತೆಗೆದಿದ್ದಾಳೆ ಆದರೆ ಪತ್ನಿಯ ಅಕ್ರಮವನ್ನು ಸಾಕ್ಷ್ಯ ಸಮೇತ ಪತ್ತೆ ಹಚ್ಚಲು ಮುಂದಾಗ ಪತಿ ಕಳೆದ 2008 ರ ಜೂನ್ 4 ರಿಂದ ಜೂನ್ 9 5 ಕಾಲ ಬೆಂಗಳೂರಿಗೆ ಪತ್ನಿಗೆ ಹೇಳಿ ಹೊರಟಿದ್ದಾರೆ.

ವಿಡಿಯೋ ಚಿತ್ರೀಕರಣ

     ಈ ವೇಳೆ ಪತ್ನಿಗೆ ಗೊತ್ತಾಗದಂತೆ ತನ್ನ ಬೆಡ್‌ರೂಮಿನಲ್ಲಿ ವಿಡಿಯೋ ರೆಕಾರ್ಡರ್ (ಡಿವಿಆರ್-ಡಿಜಿಟಲ್ ವಿಡಿಯೋ ರೆಕಾರ್ಡರ್) ಇರಿಸಿದ್ದರು. ಈ ವೇಳೆ ಪತಿಯ ಸ್ನೇಹಿತನೊಂದಿಗೆ ಪತ್ನಿ ಲೈಂಗಿಕ ಸಂಪರ್ಕ ಹೊಂದಿದ್ದಳು. ಈ ಎಲ್ಲ ದೃಶ್ಯಗಳು ಪತಿ ಇರಿಸಿದ್ದ ಡಿವಿಆರ್ ನಲ್ಲಿ ರೆಕಾರ್ಡ್ ಆಗಿತ್ತು. ವಿಚ್ಚೇದನ ತೀರ್ಪು ನೀಡಿ ವಿದ್ಯುನ್ಮಾನ ಸಾಕ್ಷ್ಯವು ನೈಜತೆ ಮತ್ತು ಪ್ರಸ್ತುತತೆಯಿಂದ ಕೂಡಿದ್ದರೆ ಅದನ್ನು ನ್ಯಾಯಾಲಯ ಒಪ್ಪುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಕ್ರಮ ಸಂಬಂಧ

    ವಿಡಿಯೋವನ್ನು ಸಾಕ್ಷಿಯಾಗಿರಿಸಿಕೊಂಡು ಪತಿ ವಿಚ್ಛೇದನಕ್ಕಾಗಿ ಬಳ್ಳಾರಿಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿ ಪತ್ನಿಯ ವಿರುದ್ಧ ಕ್ರೌರ್ಯ ಮತ್ತು ವ್ಯಭಿಚಾರ ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದರು. ಪತ್ನಿಯ ನಡವಳಿಕೆ ಸರಿ ಇಲ್ಲ ಮತ್ತು ಆಕೆ ಕೋಪಿಷ್ಠಳಾಗಿದ್ದಾಳೆ. ಆಕೆಗೆ ಬೇರೆಯೊಬ್ಬ ವ್ಯಕ್ತಿಯೊಬ್ಬನ ಜೊತೆ ಸಂಪರ್ಕವಿದೆ. ಒಂದು ದಿನ ಕೆಲಸದಿಂದ ಬೇಗ ಹೋದಾಗ ಬೇರೆಯೊಬ್ಬ ಮನೆಯಲ್ಲಿದ್ದನು. ಈ ಕುರಿತು ಪ್ರಶ್ನಿಸಿದಾಗ ಸಬೂಬು ಹೇಳಿ ವಿಷಯಾಂತರ ಮಾಡಿದಳು. ಅದೇ ವ್ಯಕ್ತಿಯೊಂದಿಗೆ ಪತ್ನಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ನನ್ನ ಗಮನಕ್ಕೆ ಬಂದಿದೆ ಎಂದು ದೂರುದಾರ ಪತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ನಕಲಿ ವಿಡಿಯೋ

    ಪತಿಗೆ ಲೈಂಗಿಕ ವಿಡಿಯೋಗಳನ್ನು ನೋಡುವ ಮತ್ತು ಚಿತ್ರೀಕರಿಸುವ ಕೆಟ್ಟ ಹವ್ಯಾಸವಿದೆ. ಸೆಕ್ಸ್ ಸಿನಿಮಾಗಳಂತೆ ಲೈಂಗಿಕ ಸಂಪರ್ಕ ಹೊಂದುವಂತೆ ಕಿರುಕುಳ ನೀಡುತ್ತಾನೆ. ತಾವೇ ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಸೃಷ್ಟಿಸಿದ್ದಾರೆ ಎಂದು ಪತ್ನಿ ಆರೋಪಿಸಿದ್ದಳು.

     ಪ್ರಕರಣವನ್ನು ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಕ್ರೌರ್ಯ ಆರೋಪವನ್ನು ಕೈ ಬಿಟ್ಟು, ವ್ಯಭಿಚಾರ ಆರೋಪವನ್ನು ಪರಿಗಣಿಸಿತ್ತು. 2003 ಜುಲೈ 30ರಂದು ಇಬ್ಬರ ಮದುವೆಯನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿತ್ತು. ಪತ್ನಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಳು.

ಪತಿಗೆ ವಿಚ್ಚೇದನ

    ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾ.ಪಿಜಿಎಂ ಪಾಟೀಲ್ ದ್ವಿಸದಸ್ಯ ಪೀಠ ವಾದ-ಪ್ರತಿವಾದವನ್ನು ಆಲಿಸಿತ್ತು. ದಂಪತಿಯ ಇಬ್ಬರ ಮಕ್ಕಳಲ್ಲಿ ಒಬ್ಬರನ್ನು ಸಾಕ್ಷಿ ನೀಡಿದ್ದರು. 2008ರ ಜೂನ್ 4ರಿಂದ ಜೂನ್ 9ರವರೆಗೆ ತಾವು ತಾಯಿಯೊಂದಿಗೆ ಬಳ್ಳಾರಿಯ ನಿವಾಸದಲ್ಲಿ ಇದ್ದೇವು. ಆ ದಿನಗಳಲ್ಲಿ ತಂದೆ ನಮ್ಮ ಜೊತೆಗಿರಲಿಲ್ಲ ಎಂಬ ಹೇಳಿಕೆಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು.ಆರೋಪಿತ ವ್ಯಕ್ತಿಯ ಮೇಲೆ ವ್ಯಭಿಚಾರದ ಆರೋಪವನ್ನು ಮಾಡಿ ವಿಚ್ಛೇದನ ಪಡೆಯಬಹುದು. ಯಾಕೆಂದರೆ ಕರ್ನಾಟಕ ಹಿಂದೂ ವಿವಾಹ ನಿಯಮ 1956 ವ್ಯಬಿಚಾರವನ್ನು ಒಪ್ಪುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap