ಹೈಮಾಸ್ಕ್ ದೀಪ ದುರ್ಬಳಕೆ…!!

ಶಿರಾ:

      ಗ್ರಾಮದ ಮಧ್ಯಭಾಗದಲ್ಲಿ, ಜನ ನಿಬಿಡ ಸ್ಥಳದಲ್ಲಿ ಇಲ್ಲವೇ ಇಡೀ ಗ್ರಾಮದ ಜನತೆಗೆ ಅನುಕೂಲವಾಗುವಂತಹ ಸ್ಥಳದಲ್ಲಿ ಹೈಮಾಸ್ಕ ದೀಪವನ್ನು ಅಳವಡಿಸದೆ ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ತರುವ ಮೂಲಕ ಸ್ಥಳೀಯ ಗ್ರಾ.ಪಂ. ಸದಸ್ಯರೊಬ್ಬರ ಮನೆಯ ಮುಂದೆ ಹೈಮಾಸ್ಕ ದೀಪವನ್ನು ಅಳವಡಿಸಲಾಗಿದೆ ಎಂದು ಹುಣಸೇಹಳ್ಳಿ ಗ್ರಾಮದ ಭಾರ್ಗವಸೇನಾ ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.

     ಇತ್ತೀಚೆಗಷ್ಟೆ ಕಳೆದ ಕೆಲವು ತಿಂಗಳ ಹಿಂದೆ ಚಿತ್ರದುರ್ಗ ಸಂಸದರ ಅನುಧಾನದಡಿಯಲ್ಲಿ ಹುಣಸೇಹಳ್ಳಿ ಗ್ರಾಮಕ್ಕೆ ಹೈಮಾಸ್ಕ ದೀಪವೊಂದು ಮಂಜೂರಾಗಿದ್ದು ಸದರಿ ದೀಪವನ್ನು ಗ್ರಾಮದ ಕೆನರಾ ಬ್ಯಾಂಕ್ ಆವರಣ ಇಲ್ಲವೇ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಳವಡಿಸಿದ್ದರೆ ಇಡೀ ಗ್ರಾಮದ ಜನತೆಗೆ ಬೆಳಕು ನೀಡುತ್ತಿತ್ತು. ಆದರೆ ಒತ್ತಡದಿಂದಾಗಿ ಗ್ರಾಮದಿಂದ ಹೊರಭಾಗದಲ್ಲಿರುವ ಸದಸ್ಯರೊಬ್ಬರ ಮನೆಯ ಅಂಗಳದ ಮುಂದೆ ದೀಪ ಅಳವಡಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಹೈಮಾಸ್ಕ ದೀಪವನ್ನು ಇಡೀ ಗ್ರಾಮಕ್ಕೆ ಬೆಳಕು ನೀಡುವಂತಹ ಸ್ಥಳಕ್ಕೆ ಅಳವಡಿಸುವಂತೆ ಒತ್ತಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap