ತಿಪಟೂರು :
ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ನೊಣವಿನಕೆರೆಗೆ ದಿನನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ ಆದರೆ ಸಂಜೆಯಾಗುತ್ತಿದ್ದಂತೆ ಆವರಿಸುವ ಕತ್ತಲು ಜನರನ್ನು ಭಯ ಭೀತರನ್ನಾಗಿಸುತ್ತಿದೆ.ನೋಣವಿನಕೆರೆ ಆರಕ್ಷಕ ಠಾಣೆಯ ಮುಂಭಾಗ ಇದ್ದ ಹೈಮಾಸ್ಕ್‍ದೀಪ ಕೆಟುಹೋಗಿ 3 ತಿಂಗಳುಗಳೇ ಕಳೆದರೂ ಯಾರು ಸರಿಪಡಿಸುವ ಗೋಜಿಗೇ ಹೋಗಿಲ್ಲ ಈ ಬಗ್ಗೆ ನೊಣವಿಕೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಇದು ಪಿ.ಡಬ್ಲೂ.ಡಿ ಇಲಾಖೆಯವರು ಖಾಸಗಿ ಕಂಪನಿಯವರಿಗೆ ಗುತ್ತಿಗೆ ನೀಡಿರುತ್ತಾರೆ ಆದ ಕಾರಣ ಅವರೇ ಬಂದು ಸರಿಪಡಿಸಬೇಕು ಎಂದು ತಿಳಿಸುತ್ತಾರೆ ಹೀಗೆ ಇಲಾಖೆಯಿಂದ ಇಲಾಖೆಯ ಮೇಲೆ ದೂರನ್ನು ಹೇಳುತ್ತಾ ಹೋದರೆ ಸಾರ್ವಜನಿಕರಿಗೆ ಉಪಯೋಗವಾಗಬೇಕಾದ ಬೀದಿ ದೀಪ ಹಾಳಾಗಿ ಹೋಗುತ್ತದೆ. ಇನ್ನು ಸಾರ್ವಜನಿಕರು ಬಸ್‍ನಿಂದ ಇಳಿಯುವ ಮತ್ತು ಹತ್ತಲು ಇಲ್ಲಿಗೆ ಬರುತ್ತಾರೆ ಅಂತವರಿಗೆ ತುಂಬಾ ತೊಂದರೆಯಾಗುತ್ತಿದೆ. ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ.
ಇದೇ ವೃತ್ತವು ಸುತ್ತಮುತ್ತಲ ಹಳ್ಳಿಗಳಿಗೆ ಹೋಗಲು ಇದು ಪ್ರಮುಖ ಕೇಂದ್ರವಾಗಿದ್ದು ಬೆಳಗಿನ ಜಾವವು ತಾವು ಬೆಳೆದ ತರಕಾರಿಗಳನ್ನು ಸಾಗಿಲು ಮತ್ತು ರಾತ್ರಿ ಪರಸ್ಥಳದಿಂದ ತಮ್ಮ ಗ್ರಾಮಗಳಿಗೆ ತೆರಳಲು ಬರುವ ಪ್ರಯಾಣಿಕರಿಗೆ ಈ ಕತ್ತಲು ಭಯಪಡುವಂತಾಗಿದೆ ಆದ್ದರಿಂದ ಶೀಘ್ರವಾಗಿ ಹೈಮಾಸ್ ದೀಪವನ್ನು ಸರಿಪಡಿಸುವಂತೆ ನೊಣವಿನಕೆರೆ ಗ್ರಾ.ಪಂ ಸದಸ್ಯ ಕೆ.ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ