ಹಿಂದಿ ಭಾಷೆಯನ್ನು ಜ್ಞಾನಭಾಷೆಯಾಗಿ ಕಲಿಸಲಾಗುತ್ತಿದೆ : ಸುರೇಶ್ ಕುಮಾರ್

ಬೆಂಗಳೂರು

      ಮೈಸೂರು ಹಿಂದೀ ಪ್ರಚಾರ ಪರಿಷದ್ ಹಿಂದಿ ಭಾಷೆಯನ್ನು ಜ್ಞಾನಭಾಷೆಯಾಗಿ ಕಲಿಸುತ್ತಿದ್ದು ಇದನ್ನು ವಿರೋಧಿಸುವುದು ಸರಿಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು.

     ನಗರದ ಗಾಂಧಿ ಭವನದಲ್ಲಿ ಮೈಸೂರು ಹಿಂದೀ ಪ್ರಚಾರ ಪರಿಷದ್‌ನ 44ನೇ ದೀಕ್ಷಾಂತ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದ ಅವರು ಹಿಂದಿ ಭಾಷೆಯನ್ನು ಹೆಚ್ಚು ಕಲಿತರೆ ಜ್ಞಾನಭಾಷೆಯಾಗಿ ವ್ಯವಹರಿಸಲು ಸಾಧ್ಯವಾಗುತ್ತದೆ. ಯಾವುದೇ ಭಾಷಾ ಕಲಿಕೆ, ಭಾಷಾ ಸಾಹಿತ್ಯ ಆಸ್ಪಾದಿಸಿದಾಗ ಪರಿಪೂರ್ಣ ಮಾನವರಾಗಲು ಸಾಧ್ಯವಾಗುತ್ತದೆ ಎಂದರು.ಶಿಕ್ಷಣ ಪಡೆಯುವುದು ಜೀವನದಲ್ಲಿ ಮೋಜು ಮಾಡುವುದಕ್ಕೆ ಅಲ್ಲ.ಸಮಾಜದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವಂತಿರಬೇಕು ಹಾಗಾದಾಗ ಮಾತ್ರ ಕಲಿತ ಶಿಕ್ಷಣಕ್ಕೆ ಪ್ರಯೋಜನ ಬರಲಿದೆ ಎಂದು ಹೇಳಿದರು.

      ಹೈದರಾಬಾದ್‌ನ ಪಶುವೈದ್ಯೆ ಅತ್ಯಾಚಾರದ ನಂತರ ಕೊಲೆ ಆರೋಪಿಗಳ ಹತ್ಯೆ ವಿಷಯವನ್ನು ಪ್ರಸ್ತಾಪಿಸಿದ ಅವರು ಇಂತಹ ಘಟನೆಗಳು ಮರುಕಳುಹಿಸದಂತೆ ನೈತಿಕ ಶಿಕ್ಷಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಹೆಣ್ಣು ಮಕ್ಕಳು ಸ್ವಚ್ಛಂದವಾಗಿ ಹೊರಗೆ ಓಡಾಡ ಬಾರದು. ಇಂತಹ ಬಟ್ಟೆಗಳನ್ನೇ ಧರಿಸಬೇಕು ಎಂದು ಪೋಷಕರು ನಿಯಂತ್ರಣ ಹೇರುತ್ತಾರೆ. ಆದರೆ ಗಂಡು ಮಕ್ಕಳಿಗೆ ಮಾತ್ರ ಇಂತಹ ನಿಯಂತ್ರಣಗಳು ಇರುವುದಿಲ್ಲ ಎಂದು ಹೇಳಿದರು.

       ಕೇಂದ್ರ ಮಾನವ ಸಂಪನ್ಮೂಲ ವಿಕಾಸ ಮಂತ್ರಾಲಯ ಕೇಂದ್ರೀಯ ಹಿಂದೀ ನಿರ್ದೇಶನಾಲಯ ಉನ್ನತ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ. ರಾಕೇಶ್ ಕುಮಾರ್ ಶರ್ಮಾ ದೀಕ್ಷಾಂತ ಭಾಷಾ ಮಾಡಿದರು. ಮೈಸೂರು ಹಿಂದೀ ಪ್ರಚಾರ ಪರಿಷದ್‌ನ ಅಧ್ಯಕ್ಷ ಡಾ. ಜಿ.ಪಿ. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಚಿವ ಆರ್. ಚಂದ್ರಶೇಖರ್, ಸದಸ್ಯ ಆರ್. ಮನೋಹರ ಭಾರತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap