ಚಿಕ್ಕನಾಯಕನಹಳ್ಳಿ
ತಾಲ್ಲೂಕಿನಲ್ಲಿ ಮೊದಲ ಕೊರೋನಾ ಪಾಸಿಟೀವ್ ಪ್ರಕರಣ ದಾಖಲಾಗಿದ್ದು ಕೊರೋನಾ ರೋಗಿ ವಾಸಿಸುತ್ತಿರುವ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.ಪಟ್ಟಣದ ಹೊಸಬೀದಿ ಬಳಿ ಇರುವ ಹಿರಿಯಣ್ಣನಹಟ್ಟಿ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಶೈಲ(38) ಎಂಬುವವರಿಗೆ ಕೊರೋನಾ ಪಾಸಿಟಿವ್ ದಾಖಲಾಗಿದೆ.
ಶೈಲಾ, ಗಂಡ ಚಂದ್ರಯ್ಯ ಎಂಬುವವರು ಗಾರೆ ಕೆಲಸಕ್ಕೆ ಹೋಗುತ್ತಾರೆ. ಶೈಲಾ ಕುಟುಂಬದಲ್ಲಿ ಆರು ಮಂದಿ ಇದ್ದಾರೆ. ಶೈಲಾ ರವರ ಮಗಳು ಕೆ.ಬಿ.ಕ್ರಾಸ್ ಗಾರ್ಮೆಂಟ್ಸ್ ಗೆ ಹೋಗುತ್ತಾರೆ ಎನ್ನಲಾಗಿದೆ.ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿರುವ ಶೈಲ ರವರನ್ನು ತುಮಕೂರಿನ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗುವುದು, ಕುಟುಂಬದವರನ್ನು ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗುವುದು ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.ಶೈಲಾ ವಾಸಿಸುತ್ತಿರುವ ಪ್ರದೇಶವದಲ್ಲಿ ಯಾರೂ ಓಡಾಡದಂತೆ ಪುರಸಭೆ, ಪೊಲಿಸ್ ಇಲಾಖೆ ಸೀಲ್ ಡೌನ್ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
