ಹರಿಹರದಲ್ಲಿ ಮತದಾನ ಕುರಿತು ಜಾಗೃತಿ

ದಾವಣಗೆರೆ

       ತಾಲ್ಲೂಕು ಆಡಳಿತ ಮತ್ತು ನಗರಸಭೆ ಹರಿಹರ ವತಿಯಿಂದ ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಇಂದು 2019ರ ಸಾರ್ವತ್ರಿಕ ಲೋಕಸಭಾ ಚುನಾವಣಾ ನಿಮಿತ್ತ ಮತದಾರರಿಗೆ ಜಾಗೃತಿ ಅಭಿಯಾನ ಕಾರ್ಯಕ್ರಮ ಕೈಗೊಳ್ಳಲಾಗಿತ್ತು.

       ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ವಾರದ ಸಂತೆಗೆ ತೆರಳಿ ಸಂತೆಯಲ್ಲಿ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಹಾಗೂ ಗಿರಿಯಮ್ಮ ಪದವಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋದಿಸುವುದರ ಮೂಲಕ ಜಾಗೃತಿ ಮೂಡಿಸಿ ಅವರಿಂದ ಸಹಿ ಸಂಗ್ರಹ ಮಾಡಲಾಯಿತು.

      ಸಹಾಯಕ ಚುನಾವಣಾಧಿಕಾರಿ ಬಿ ರಾಮಾಂಜನೇಯ ಮತ್ತು ತಹಶೀಲದಾರ ನಾಗರಾಜ್ ಹಾಗೂ ನಗರಸಭೆ ಪೌರಾಯುಕ್ತ ಚಂದ್ರಪ್ಪ ಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಗುರುನಾಥ ಬಿರಾದರ್, ಎಇಇ ಆರ್.ಒ ಮಂಜುನಾಥ, ಲೆಕ್ಕಾಧೀಕ್ಷಕ ನಾಗರಾಜ್ ಬಲ್ಲಾಳ, ಅಭಿಯಾನ ವ್ಯವಸ್ಥಾಪಕ ಶಿವಕುಮಾರ್ ಎಂ ಬಿ, ಅಶೋಕ್, ಕಂದಾಯ ನಿರೀಕ್ಷಕರಾದ ವಸಂತ, ಕಿರಣ, ಪೌರಕಾರ್ಮಿಕರಾದ ಮಂಜಪ್ಪ, ಪರಮೇಶ್ವರಪ್ಪ ಡಿ ಸೇರಿದಂತೆ ನೀರು ಸರಬರಾಜು ಸಿಬ್ಬಂದಿಗಳು ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಜರಿದ್ದು, ಮತದಾನದ ಕುರಿತು ಜಾಗೃತಿ ಮೂಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link