ಟಿಪ್ಪು ಪಠ್ಯಪುಸ್ತಕದಿಂದ ತೆಗೆದರೆ ಇತಿಹಾಸವೇ ಅಪೂರ್ಣ : ಸಿದ್ದರಾಮಯ್ಯ

ಉಡುಪಿ

    ಸುಪ್ರೀಂ ಕೋರ್ಟ್ನಲ್ಲಿ ಕಾಂಗ್ರೆಸ್ ವಾದಕ್ಕೆ ಹಿನ್ನಡೆಯಾಗಿಲ್ಲ, ಪ್ರತ್ಯೇಕ ವಿಚಾರಣೆಗೆ ಕೊರ್ಟ್ ಗೆ ಮನವಿ ಮಾಡಿದ್ದೆವು ಇದಕ್ಕೆ ಸುಪ್ರೀಂ ಒಪ್ಪಿಲ್ಲ, ಹೀಗಾಗಿ ಇದಕ್ಕೆ ಹಿನ್ನಡೆ ಹೇಗಾಗುತ್ತೆ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

     ನಗರದಲ್ಲಿ ನಡೆದ ಮಹಾತ್ಮ ಗಾಂಧಿ 150 ಸಮಾವೇಶದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಡಿಯೋವನ್ನು ಸುಪ್ರೀಂಕೋರ್ಟ್ ಪರಿಶೀಲಿಸುವುದಾಗಿ ಹೇಳಿದೆ. ಪ್ರತ್ಯೇಕ ವಿಚಾರಣೆ ಬೇಡ,ತೀರ್ಪಿನ ವೇಳೆ ಆಡಿಯೋವನ್ನು ಪರಿಗಣಿಸು ವುದಾಗಿ ತಿಳಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.

      ಸಿದ್ದರಾಮಯ್ಯ ಅಂದರೆ ಬಿಜೆಪಿಗೆ ಭಯ.ನಮ್ಮ ಅಭ್ಯರ್ಥಿ ಗಳನ್ನು ಸಿದ್ದರಾಮಯ್ಯನ ಸೋಲಿಸಬಹುದು ಎಂದು ಭಯಬೀಳುತ್ತಿದ್ದಾರೆ. ಮತ್ತೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಭಯ ಹೀಗಾಗಿ ಪದೇ ಪದೇ ನನ್ನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಟಿಪ್ಪು ಪಠ್ಯಪುಸ್ತಕದಿಂದ ತೆಗೆದರೆ ಇತಿಹಾಸವೇ ಅಪೂರ್ಣ ಆಗುತ್ತದೆ.ಟಿಪ್ಪು,ಹೈದರಾಲಿ ಇರದೆ ಮೈಸೂ ರು ಚರಿತ್ರೆ ಅಪೂರ್ಣ.ಇದೇ ಯಡಿಯೂರಪ್ಪ ಕೆಜೆಪಿ ಅಧ್ಯಕ್ಷರಾಗಿದ್ದಾಗ ಏನ್ಮಾಡಿದರು? ಎಂದು ಅವರು ಪ್ರಶ್ನಿಸಿದರು.ಯಡಿಯೂರಪ್ಪ ಟಿಪ್ಪು ಪೇಟಾ ಹಾಕಿಕೊಂಡು ಪಕ್ಕದಲ್ಲಿ ಶೋಭಾ ಕರಂದ್ಲಾಜೆ ಅವರನ್ನು ನಿಲ್ಲಿಸಿಕೊಂಡು ಫೋಟೋ ತೆಗಿಸ್ಕೊಂಡಿದ್ಯಾಕೆ? ನಾನೇ ಟಿಪ್ಪು ಅಂತ ಮೆರೆದದ್ದು ಯಾಕೆ? ಕೆಜೆಪಿಯಲ್ಲಿ ಇದ್ದಾಗ ಬೇರೆ ನಾಲಿಗೆ ಇತ್ತಾ ನಿಮಗೆ ಟಿಪ್ಪು ಒಬ್ಬ ದೇಶ ಪ್ರೇಮಿ,ಮಹಾ ಶೂರ ಎಂದು ಜಗದೀಶ್ ಶೆಟ್ಟರ್ ಬರೆದಿದ್ದಾರೆ ಎಂದು ಅವರು ಹೇಳಿದರು.

      ಈಗ ಏಕೆ ಟಿಪ್ಪು ಮತಾಂಧ ಎನ್ನುತ್ತೀರಾ.ನಾನು ಟಿಪ್ಪು ಜಯಂತಿ ಮಾತ್ರ ಮಾಡಿಲ್ಲ.ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡರ ಜಯಂತಿ ಮಾಡಿದವನು ನಾನೇ.ಇವರೆಲ್ಲಾ ಪುರಾಣ ಪುರುಷರಲ್ಲ,ಐತಿಹಾಸಿಕ ವ್ಯಕ್ತಿ,ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿದ್ದು ಎಂದು ವಿರೋಧ ಮಾಡುತ್ತಾರೆ ಎಂದು ಸಿದ್ದರಾಮ ಯ್ಯ ಅವರು ಗುಡುಗಿದರು.

       ಟಿಪ್ಪು  ದೇಶಕ್ಕಾಗಿ ಮಕ್ಕಳನ್ನೇ ಬ್ರಿಟೀಷರ ಬಳಿ ಅಡವಿಟ್ಟ ದ್ದರು.ಕರ್ನಾಟಕಕ್ಕೆ ರೇಷ್ಮೆ,ರಾಕೇಟ್ ಪರಿಚ ಯ ಮಾಡಿಸಿದ್ದೇ ಟಿಪ್ಪು.ಶೋಭಾ ನನ್ನ ವಿರುದ್ದ ಮಾತಾಡುವುದನ್ನೆ ಪದೇ ಪದೇ ಮಾತನಾಡುತ್ತಿದ್ದಾ ರೆ.ಸಿದ್ದರಾಮಯ್ಯಗೆ ಚರಿತ್ರೆ ಗೊತ್ತಿಲ್ಲವಂತೆ .ನಾರಾಯಣ ಗುರು ಜಯಂತಿ ಮಾಡಿದ್ದು ಯಾರು ಎಂದು ಆಯಮ್ಮಾ ಹೇಳಲಿ.ಸರ್ವಾಧಿಕಾರಿ ಧೋರಣೆ ಹೊಂದಿರುವ ಬಿಜೆಪಿ ಅಧಿಕಾರಕ್ಕೆ ಬರಬಾರದು ಅವರು ಆಕ್ರೋಷ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap