ಬೆಂಗಳೂರು ಬಿಟ್ಟು ಹೋಗದಂತೆ ಜನರಿಗೆ ಗೃಹ ಸಚಿವರ ಮನವಿ..!

ಬೆಂಗಳೂರು

    ಜನರು ಆತಂಕ ಹಾಗೂ ಲಾಕ್ ಡೌನ್ ಭೀತಿ ಯಿಂದ ನಗರವನ್ನು ಬಿಟ್ಟು ತಮ್ಮ ಊರುಗಳ ಕಡೆ ಮುಖ ಮಾಡಿ ದ್ದಾರೆ.ಇದರಿಂದ ಜಿಲ್ಲೆಗಳಿಗೆ ಹಾಗೂ ಹಳ್ಳಿಗಳಲ್ಲಿ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಜನರು ದಯವಿಟ್ಟು ಬೆಂಗಳೂರಿನಲ್ಲಿ ಸುರಕ್ಷತೆ ಯಿಂದ ಇರಿ.ಸರ್ಕಾರ ಲಾಕ್ ಡೌನ್ ಮಾಡುವುದಿಲ್ಲ.ಲಾಕ್ ಡೌನ್ ಆಗು ತ್ತದೆ ಎಂಬ ಭಯ ಪಡಬೇಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ನಿರ್ಣಯ ದಂತೆ ಪ್ರತಿ ಭಾನುವಾರ ಹಾಗೂ ಒಟ್ಟು ನಾಲ್ಕು ಭಾನುವಾರ ಲಾಕ್ ಡೌನ್ ಮಾಡಲು ನಿರ್ಧಾರ ಮಾಡಲಾಗಿತ್ತು. ಇಂದಿನ ಲಾಕ್ ಡೌನ್ ಪ್ರಾರಂಭದಲ್ಲಿ ಯಶಸ್ವಿ ಆಗಿದೆ. ಜನರು ಸ್ವಯಂ ಪ್ರೇರಿತರಾಗಿ ಕರ್ಪ್ಯೂಗೆ ಬೆಂಬಲ ಕೊಟ್ಟು ಸ್ವಯಂ ಲಾಕ್ ಆಗಿದ್ದಾರೆ.ನಗರದಲ್ಲಿ ವಾಹನ ಸಂಚಾರ ವಿರಳ ವಾಗಿದೆ.ಜನರೂ ಕೂಡಾ ಅನಗತ್ಯವಾಗಿ ಹೊರಗಡೆ ಬಂದಿಲ್ಲ.ಇನ್ನೂ ಸಂಜೆವರಗೆ ಎಲ್ಲ ರೂ ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮಾವಳಿ ಪಾಲನೆ ಮಾಡಬೇಕು. ಜನರೇ ಸ್ವಯಂ ನಿಯಂತ್ರಣ ಹಾಕಿಕೊಳ್ಳಿ ಎಂದು ಕರೆ ನೀಡಿದರು.

   ಕೊರೋನಾ ವಾರಿಯರ್ ಗಳಾದ ನಮ್ಮ ಪೊಲೀಸರಿಗೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ.ಮೂರು ತಿಂಗಳಿಂದ ನಿಮ್ಮನ್ನು ಕಾಯುತ್ತಿರುವ ಕೊರೋನಾ ವಾರಿಯರ್ ಗಳು ಸುರಕ್ಷತೆಯಿಂದ ಇರಬೇಕು ಎಂದರೆ ದಯವಿಟ್ಟು ಜನರು ಸಹಕಾರ ನೀಡಬೇಕು.ಪ್ರತಿ ದಿನ ಐದಾರು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಆಗುತ್ತಿದೆ.ಪೊಲೀಸರ ಹಿತದೃಷ್ಟಿ ಯಿಂದ ಅವರ ಆರೋಗ್ಯ ತಪಾಸಣೆ, ಟೆಸ್ಟಿಂಗ್ ಟ್ರೀಟ್ ಮೆಂಟ್ ಗೆ ಮತ್ತಷ್ಟು ಆದ್ಯತೆ ನೀಡುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.

     ಬೆಂಗಳೂರು ನಗರಕ್ಕೆ ಇನ್ನೂ 500ಕ್ಕೂ ಹೆಚ್ಚು ಅಂಬುಲೆನ್ಸ್ ಗಳ ಅಗತ್ಯ ಇದೆ.ಈಗಾಗಲೇ ಪ್ರತಿ ವಾರ್ಡ್ ಗೆ ಎರಡೆರ ಡು ಅಂಬುಲೆನ್ಸ್ ಗಳನ್ನು ನೀಡಲಾಗಿದೆ.ಆದರೆ ಕೋವಿಡ್ 19 ನಿರ್ವಹಣೆಗೆ ಪ್ರತಿ ವಾರ್ಡ್ ಗೆ ಇನ್ನೂ ಎರಡೆರಡು ಅಂಬುಲೆನ್ಸ್ ಗಳ ಅವಶ್ಯಕತೆ ಇದೆ.ಈ ಬಗ್ಗೆ ಆರೋಗ್ಯ ಇಲಾಖೆ,ಬಿಬಿಎಂಪಿ ಗಮನ ಹರಿಸಬೇಕು.ಈ ಬಗ್ಗೆ ಮುಖ್ಯ ಮಂತ್ರಿ ಅವರ ಗಮನಕ್ಕೂ ತರುತ್ತೇನೆ.ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇಲ್ಲ ಎ?ಸಿಂಪ್ಟ ಮ್ಯಾಟಿಕ್ ಇರುವ ಸೋಂಕಿ ತರು ಹಾಗೂ ದೈಹಿಕವಾಗಿ, ಮಾನಸಿಕವಾಗಿ ಸದೃಡ ಇರುವ ಪಾಸಿಟಿವ್ ಸೋಂಕಿತರು ಆತಂಕಪಡುವ ಅಗತ್ಯ ಇಲ್ಲ.ಕಡಿಮೆ ರೋಗ ಲಕ್ಷಣಗಳು ಇರುವವರನ್ನ ಆಸ್ಪತ್ರೆಗಳು,ಕೋವಿಡ್ ಕೇರ್ ಸೆಂಟರ್ ಗಳಿಗೆ ಸೇರಿಸಲಾಗುತ್ತಿದೆ.

     ಈಗಾಗಲೇ ಸರ್ಕಾರ ಖಾಸಗಿ ಮೆಡಿಕಲ್ ಕಾಲೇಜುಗಳಿಂದ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಶೇ 50 ರಷ್ಟು ಬೆಡ್ ಗಳನ್ನು ಪಡೆದಿದೆ.ಖಾಸಗಿ ಆಸ್ಪತ್ರೆಗ ಳಲ್ಲಿ 78 ರಿಂದ 80% ಬೆಡ್ ಗಳು ಇನ್ನೂ ಹಾಗೇ ಇವೆ.ದಯವಿಟ್ಟು ಯಾರೂ ಆತಂಕ ಪಡಬೇಡಿ.ಪಾಸಿಟಿವ್ ಇದೆ ಎಂದು ಮಾಹಿತಿ ಬಂದ ಬಳಿಕ ಆಸ್ಪತ್ರೆಗಳಿಗೆ ಸೇರಿಸಲು ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ವ್ಯವಸ್ಥೆ ಸರ್ಕಾರದಿಂದ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap