ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೂರುಜನ ಪರ್ತಕರ್ತರಿಗೆ ಸನ್ಮಾನ

0
21

ಕೊರಟಗೆರೆ

        ಮಠಾಧೀಶರು, ರಾಜಕಾರಣಿಗಳು ಸೇರಿದಂತೆ ಪತ್ರಕರ್ತರು ಸಮಾಜವನ್ನು ಸರಿದಾರಿಯಲ್ಲಿ ನಡೆಸಲು ಶ್ರಮಿಸಬೇಕು. ಯಾರೊಬ್ಬರೂ ಸಣ್ಣತಪ್ಪುದಾರಿ ತುಳಿದರೂ ಸಹ ತಮ್ಮ ವ್ಯಕ್ತಿತ್ವ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆಎಂದು ಸಿದ್ದರಬೇಟ್ಟದ ರಂಭಾಪುರ ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.

      ತಾಲೂಕಿನ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಸಿದ್ದರಬೇಟ್ಟ ಬಾಳೆಹೊನ್ನುರು ಮಠದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೂರುಜನ ಪರ್ತಕರ್ತರಿಗೆ ಸಿದ್ದರಬೇಟ್ಟ ಮಠ ಮತ್ತು ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಭಾನುವಾರ ಸನ್ಮಾನಿಸಿದ ನಂತರ ಮಾತನಾಡಿದರು.

        ಕೊರಟಗೆರೆ ಪತ್ರಕರ್ತರು ಸಮಾಜದಲ್ಲಿ ತಮ್ಮದೇ ಆದ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ನಡೆಯುವ ಸರಿತಪ್ಪುಗಳನ್ನು ತಿದ್ದುವಂತಹ ಕೆಲಸದಲ್ಲಿ ನಿರತರಾಗಿರುವುದು ಶ್ಲಾಘನೀಯ ಸಂಗತಿಯಾಗಿದೆ.ಮಠದಅಭಿವೃದ್ದಿಗೆ ಮತ್ತುಧಾರ್ಮಿಕ ಕಾರ್ಯಗಳಿಗೆ ಪತ್ರಕರ್ತರ ಸಹಕಾರಇತರರಿಗೆ ಮಾದರಿಆಗಲಿದೆ.ಪತ್ರಕರ್ತರು ಪ್ರತಿಯೊಂದುಕ್ಷಣವನ್ನು ಸೂಕ್ಷ್ಮವಾಗಿ ಪರಿಗಣಿಸಿ ಮುನ್ನಡೆದು ಸಮಾಜವನ್ನುತಿದ್ದುವಂತಹ ಕೆಲಸ ಮಾಡಬೇಕಾಗಿದೆಎಂದರು.

        ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ ಸಮಾಜದಲ್ಲಿ ಪತ್ರಕರ್ತರ ಸೇವೆಯನ್ನು ಗುರುತಿಸಿ ತಾಲೂಕು ಆಡಳಿತ ಕನ್ನಡರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ಪ್ರಶಸ್ತಿ ಪಡೆದ ಪರ್ತಕತ್ರರಿಗೆಇನ್ನೂಜವಾಬ್ದಾರಿ ಹೆಚ್ಚಾಗಿದೆ.ಪತ್ರಕರ್ತರ ಸಂಘದ ಪತ್ರಕರ್ತರರಕ್ಷಣೆ ಮತ್ತು ಶ್ರೇಯೋಬಿವೃದ್ದಿಗೆ ಶ್ರಮಿಸಲು ಸದಾ ಸಿದ್ದವಿದೆ.ಪ್ರತಿಯೊಬ್ಬ ಪತ್ರಕರ್ತನ ಸಹಕಾರದಿಂದ ಸಂಘ ಇಂದುತುಮಕೂರುಜಿಲ್ಲೆಯಲ್ಲಿಯೇ ಹೆಸರುವಾಸಿ ಆಗಿದೆಎಂದು ಸಂತಷ ವ್ಯಕ್ತಪಡಿಸಿದರು.

       ಹಿರಿಯ ಪತ್ರಕರ್ತ ಪದ್ಮನಾಬ್ ಮಾತನಾಡಿ ಸಮಾಜದಅಂಕುಡೊಂಕುತಿದ್ದುವ ಪತ್ರಕರ್ತ ಮಿತ್ರರುಅಭಿವೃದ್ದಿಗೆ ಕೆಲಸಗಳಿಗೆ ಹೆಚ್ಚಿನಆದ್ಯತೆ ನೀಡಬೆಕು.ಸುದ್ದಿ ಮಾಡುವ ವೇಳೆ ಪ್ರತಿಯೊಂದುದೃಷ್ಟಿಕೋನ ಪರಿಶೀಲನೆ ನಡೆಸಿ ಸುದ್ದಿ ಮಾಡಬೇಕು.ಸುದ್ದಿ ಮಾಡು ಭರಾಟೆಯಲ್ಲಿತಾವೇ ಸುದ್ದಿ ಆಗಬಾರದು.ನೇರ, ನಿಷ್ಟೂರ, ನೈಜ ವರದಿಗಳ ಬಗ್ಗೆ ಪರಿಶೀಲಿಸಿ ನಡೆಸಿ ಸುದ್ದಿಮಾಡಬೇಕುಎಂದು ಸಲಹೆ ನೀಡಿದರು.

       ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದಎನ್.ಪದ್ಮನಾಭ್, ರಂಗಧಾಮಯ್ಯ, ಕೆ.ಪಿ.ಯಶಸ್ಸ್, ತೋವಿನಕರೆ ಪದ್ಮರಾಜು, ಚಿದಂಬರ, ನಾಗರಾಜು, ಜೆಟ್ಟಿಅಗ್ರಹಾರ ನಾಗರಾಜು, ರಾಜು ,ಎನ್.ಮೂರ್ತಿ, ಅಗ್ರಹಾರ ನಾಗರಾಜು, ಹರೀಶ್, ಲಕ್ಷ್ಮೀಶ ಸೇರಿದಂತೆಇತರರುಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here