ಹೊನ್ನಾದೇವಿಯ ಅದ್ದೂರಿ ಪ್ರತಿಷ್ಠಾಪನೆ

ಕೊರಟಗೆರೆ

     ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರ ಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ದೇವತೆ ಶ್ರೀ ಹೊನ್ನಾದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯ ನೂರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಾಗಿ ನೆರವೇರಿತು.

     ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪ್ರಧಾನ ಪುರೋಹಿತ ರಮೇಶಶರ್ಮ ಮತ್ತು ತಂಡದಿಂದ ಶ್ರೀಹೊನ್ನಾದೇವಿ ತಾಯಿಯ ವಿಗ್ರಹ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಪೂಜೆಯಲ್ಲಿ ದೇವತಾ ಪ್ರಾರ್ಥನೆ, ಮಹಾಗಣಪತಿ ಪೂಜೆ, ಮೃತ್ಸಂಗ್ರಹಣ, ನವಗ್ರಹಾರಾಧನೆ, ಕಲಶ ಸ್ಥಾಪನೆ, ಜಲಾಧಿವಾಸ, ಗಣಹೋಮ, ನವಗ್ರಹ ಹೋಮ, ನಕ್ಷತ್ರ ಹೋಮ, ಅರ್ಚನೆ, ಗೋಪುರ ಕಲಶ ಸ್ಥಾಪನೆ, ಊರಿನ ಗ್ರಾಮಸ್ಥರು ಮತ್ತು ಊರಿನ ಪ್ರಮುಖರ ನೇತೃತ್ವದಲ್ಲಿ 101 ಮಹಿಳೆ  ಆರತಿ ಮಾಡುವ ಮೂಲಕ ದೇವಿಗೆ ಮಹಾಮಂಗಳಾರತಿ ನೆರವೇರಿತು. ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

      ದೇವಸ್ಥಾನದ ಆರ್ಚಕ ಕೆಂಪಣ್ಣ ಮಾತನಾಡಿ, ಸುಮಾರು ಎರಡುನೂರು ವರ್ಷಗಳ ಹಿಂದಿನ ದೇವಸ್ಥಾನವಾಗಿದ್ದು, ಗ್ರಾಮದ ಎಲ್ಲ ಸಮುದಾಯದವರು ಸೇರಿ ಸುಮಾರು 40 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿ ನೂತನ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಹೊಳವನಹಳ್ಳಿಯ ಸುತ್ತಮುತ್ತ 7 ಗ್ರಾಮದ ಜನರ ಆರಾಧ್ಯ ದೇವಿಯಾಗಿದ್ದು, ಮಕ್ಕಳ ಭಾಗ್ಯ, ತಮ್ಮ ಕೆಲಸದ ಬಗ್ಗೆ, ತಮ್ಮ ಜಮೀನನಲ್ಲಿ ಬೋರು ಹಾಕಿಸುವ ಬಗ್ಗೆ ಸೇರಿದಂತೆ ಭಕ್ತರ ಬೇಡಿಕೆಯನ್ನು ಈಡೇರಿಸುವ ಶಕ್ತಿ ದೇವತೆಯಾಗಿದ್ದು, ಸುಮಾರು ಮೂರು ಸಾವಿಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳು ನೇರವೇರಿವೆ ಎಂದು ತಿಳಿಸಿದರು.

      ತಾಯಿಯ ಪ್ರತಿಷ್ಠಾಪನೆ ಮಾಡಿದ ನಂತರ ನಲವತ್ತೈದು ದಿನಗಳ ನಂತರ ಮಂಡಲ ಪೂಜೆ ನಡೆಯುತ್ತದೆ. ಪ್ರತಿದಿನ ಬೆಳಗ್ಗೆ, ಸಂಜೆ ವಿಶೇಷ ಪೂಜೆ, ಅಭಿಷೇಕ, ಅನ್ನಸಂತರ್ಪಣೆಯು ಇರುತ್ತದೆ ಎಂದು ತಿಳಿಸಿ, ನೂತನ ದೇವಸ್ಥಾನ ನಿರ್ಮಾಣಕ್ಕೆ ತನು, ಮನ, ಧನವನ್ನು ನೀಡಿ ಸಹಕರಿಸಿದ ಭಕ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap