ಹೊನ್ನೆನಹಳ್ಳಿಯಲ್ಲಿ ಭುಗಿಲೆದ್ದಿದೆ ನೀರಿನ ಸಮಸ್ಯೆ

ಹೊಸದುರ್ಗ:

      ತಾಲ್ಲೂಕಿನ ದೇವಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆನಹಳ್ಳಿ ಗ್ರಾಮಕ್ಕೆ ಸಮರ್ಪಕ ನೀರು ಪೂರೈಸಬೇಕೆಂದು ಆಗ್ರಹಿಸಿ ನೂರಾರು ಮಹಿಳೆಯರು ಮತ್ತು ಪುರುಷರು ಮಂಗಳವಾರ ಪಟ್ಟಣದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಕಛೇರಿಗೆ ಮುತ್ತಿಗೆ ಹಾಕಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ನೀರಿಗಾಗಿ ಪ್ರತಿಭಟನೆ ನಡೆಸಿದರು.

       ಬರಗಾಲ ಪೀಡಿತ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಮೊದಲು ಆದ್ಯತೆಯನ್ನು ನೀಡಿ ಎಂದು ಜಿಲ್ಲಾಧಿಕಾರಿ ಆದೇಶವಿದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ನಮ್ಮ ಗ್ರಾಮದಲ್ಲಿ ಕಳೆದ 6 ತಿಂಗಳಿನಿಂದ ಕುಡಿಯಲು ಮತ್ತು ಬಳಸಲು ನೀರಿಲ್ಲದೇ ಪರದಾಡುತ್ತಿದ್ದೇವೆ .ಇರುವ 4 ಬೋರ್‍ಗಳಲ್ಲಿ 3 ಬೋರ್ ಫೇಲ್‍ ಆಗಿದ್ದಾವೆ. ಉಳಿದ ಒಂದು ಬೋರ್ ನಲ್ಲಿ ಅಲ್ಪ-ಸ್ವಲ್ಪ ನೀರು ಬರುತ್ತಿದೆ ಅದು ನಮಗೆ ಸಾಲುತ್ತಿಲ್ಲ , ಸಂಬಂಧ ಪಟ್ಟ ಪಿಡಿಓ ಮತ್ತು ಕಾರ್ಯದರ್ಶಿಗಳು ನಮ್ಮ ಸಮಸ್ಯೆಯನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ತಾಲ್ಲೂಕು ನೀರು ಸರಬರಾಜು ಇಲಾಖೆಯ ಕಛೇರಿಗೆ 6 ತಿಂಗಳಿಂದ ಬಂದು ದೂರು ನೀಡಿದರೂ ಯಾರೂ ನಮ್ಮನ್ನು ಕ್ಯಾರೆ ಎನ್ನುತ್ತಿಲ್ಲ ಎಂದು ಹೊನ್ನೆನಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಆರೋಪಿಸಿದರು.

      ನೀರಿಲ್ಲದಿದ್ದರೂ 5 ಲಕ್ಷರೂ ಪೈಪ್‍ಲೈನ್‍ ಕಾಮಾಗಾರಿ ಮಾಡಿ ದುರುಪಯೋಗ ಮಾಡಿಕೊಂಡಿದ್ದಾರೆ. ಸಮಸ್ಯೆಗಳ ಕುರಿತು ಅಹವಾಲು ಹೊತ್ತು ಗ್ರಾಮ ಪಂಚಾಯಿತಿಗೆ ಹೋದರೆ ಉಡಾಫೆ ಉತ್ತರ ನೀಡುತ್ತಾರೆ. ಪೋನ್‍ ಮಾಡಿದರೆ ಸ್ವೀಚ್ ಆಫ್‍ ಮಾಡಿಕೊಳ್ಳುತ್ತಾರೆ .ನೀರು ಕೇಳಿದರೆ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಪಿಡಿಓ ಮತ್ತು ಸಂಬಂಧಪಟ್ಟ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ನಮ್ಮೂರಲ್ಲಿ ನೀರಿಲ್ಲದೇ ಹಕ್ಕಿ ತಿಮ್ಮಯ್ಯನ ಹಟ್ಟಿ, ದೇವಪುರ, ನರಸೀಪುರ ಗ್ರಾಮಗಳಿಗೆ ಹೋಗಿ ನೀರು ತರಬೇಕು ಎಂದು ಗ್ರಾಮಸ್ಥರು ವಿನಂತಿಸಿದರು.

      ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಿ.ಪಂ ಅಧ್ಯಕ್ಷೆ ವಿಶಾಲಕ್ಷಿನಟರಾಜ್‍ ಮತ್ತು ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್‍ ಮತ್ತು ಇಓ ಮಹಮದ್ ಮುಬೀನ್‍ ರವರು ಪ್ರತಿಭಟನಾಕಾರರನ್ನು ಮನವೊಲಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಪರಿಹಾರ ಕಂಡು ಕೊಳ್ಳೋಣ ಎಂದು ಸಲಹೆ ನೀಡಿದರೂ ಸುಮ್ಮನಾಗದ ಪ್ರತಿಭಟನಾ ಕಾರರು, ನಮಗೆ ಸಮರ್ಪಕವಾಗಿ,ತಕ್ಷಣವಾಗಿ, ಶಾಶ್ವತವಾಗಿ ನೀರಿನ ಸಮಸ್ಯೆ ಪರಿಹಾರ ಕಲ್ಪಿಸುವವರೆಗೂ ಪ್ರತಿಭಟನೆ ಹಿಂಪೆಡೆ ಯುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ವೇಳೆ ಜಿ.ಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‍ ಮಾಧ್ಯಮದವರ ಜೊತೆ ಮಾತನಾಡಿ ಜಿ.ಪಂ ಅಧ್ಯಕ್ಷರ ಅನುದಾನದಲ್ಲಿ 2 ಬೋರ್‍ಗಳನ್ನು ಕೊರೆಸುವ ವ್ಯವಸ್ಥೆಮಾಡುತ್ತೇವೆ. ನೀರುಬೀಳದಿದ್ದರೆ ಶಾಸಕರ ಅನುದಾನದಲ್ಲಿ ಕೂಡ2 ಬೋರ್‍ಗಳನ್ನು ಕೊರೆಸುವ ವ್ಯವಸ್ಥೆಮಾಡುತ್ತೇವೆ ಅದರಲ್ಲಿಯೂ ನೀರು ಬೀಳಲಿಲ್ಲವೆಂದರೆ ಮಳೆ ಬಂದು ನೀರು ಸಮೃದ್ದಿಯಾಗುವವರೆಗೂ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುತ್ತೇವೆ ಎಂದು ಹೇಳಿದರು.

ತಾ.ಪಂ. ಕಛೇರಿ ಮುಂದೆಯೂ ಪ್ರತಿಭಟನೆ:

      ಹೊಸದುರ್ಗ ಗ್ರಾಮೀಣ ಕುಡಿಯುವ ನೀರಿನ ನೈರ್ಮಲ್ಯ ಕಛೇರಿ ಮುಂದೆ ಪ್ರತಿಭಟಿಸಿದ ನಂತರ ಜನರು ತಾ.ಪಂ ಕಚೇರಿ ಮುಂದೆ ಪ್ರತಿಭಟಿಸಿದರು.ಅಲ್ಲಿ ಕೂಡ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪಿಡಿಓ ಮತ್ತು ಕಾರ್ಯದರ್ಶಿಗಳನ್ನು ಕೂಡಲೇ ವರ್ಗಾವಣೆ ಮಾಡಲು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಇಓ ಮಹಮದ್ ಮುಬೀನ್‍ ರವರಿಗೆ ಮತ್ತು ಹೆಂಗಸರಿಗೆ ಮಾತಿನ ಚಕಮಖಿ ಬೆಳೆಯಿತು.ನಂತರನೀರಿನಸಮಸ್ಯೆಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link