ದಾವಣಗೆರೆ :
ನಗರದ ಸರಸ್ವತಿ ಬಡಾವಣೆಯ ವಿಜಯ ವಿನಾಯಕ ಯುವಕ ನಾಗರಿಕ ವೇದಿಕೆ ಮತ್ತು ಸಖಿ ಸಂಸ್ಥೆಯಿಂದ ಕಲಾಕುಂಚ ಸಾಂಸ್ಕತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿಯವರಿಗೆ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.
ಬಯಲು ಸೀಮೆ, ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಕರ್ನಾಟಕ ಕರಾವಳಿ ಜಿಲ್ಲೆಗಳ ಪುರಾತನ ಜನಪದ ಕಲೆಯಾದ ಯಕ್ಷಗಾನವನ್ನು ವೈಭವೀಕರಿಸುವ ನಿಟ್ಟಿನಲ್ಲಿ ಕಳೆದ 3 ದಶಕದಿಂದ ಪರಿಶ್ರಮ ಹಾಗೂ ಇತ್ತೀಚಿಗೆ ಯಕ್ಷರಂಗದ ಬೆಳ್ಳಿಹಬ್ಬವನ್ನು 2 ದಿನಗಳ ಕಾಲ ಬಹು ವಿಜೃಂಬಣೆಯಿಂದ ನಡೆಸಿದ ಸಾಧನೆ ಹಾಗೂ ಇತ್ತೀಚಿಗೆ ಯಕ್ಷಗಾನ ಬಯಲಾಟದ ಅಕಾಡಮಿಯಿಂದ ರಾಜ್ಯ ಪ್ರಶಸ್ತಿಗೂ ಭಾಜನವಾದ ದಾವಣಗೆರೆ ಯಕ್ಷರಂಗದ ಸಂಸ್ಥೆಗೂ ಅಭಿನಂದಿಸಲಾಯಿತು.
ಚಿತ್ರದಲ್ಲಿ ನಾಗರಿಕ ಸಮಿತಿಯ ಅಧ್ಯಕ್ಷರಾದ ಸೋಮಶೇಖರ್, ಹಿರಿಯ ಸಮಾಜ ಸೇವಕರಾದ ಆರ್.ಎಸ್.ಶೇಖರಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಹೆಚ್.ಗುರುರಾಜ್, ಬೆಂಗಳೂರಿನ ಯಕ್ಷದೇಗುಲದ ನಿರ್ದೇಶಕರಾದ ಕೆ.ಮೋಹನ್, ಸಮಿತಿ ಸದಸ್ಯರಾದ ಕೆ.ರಾಘವೇಂದ್ರ ನಾಯರಿ, ಸಖಿ ಮಹಿಳಾ ಸಂಸ್ಥೆಯ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ