ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ದಾವಣಗೆರೆ:

         ಜಿಲ್ಲಾ ವರದಿಗಾರರ ಕೂಟದಿಂದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕತರಾದ ಪ್ರಕಾಶ ಕುಗ್ವೆ ಮತ್ತು ಮಂಜುಶ್ರೀ ಕಡಕೋಳ ಅವರನ್ನು ಶನಿವಾರ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು.

       ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಿರಿಯ, ಕಿರಿಯ ಪತ್ರಕತ್ರು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕತರನ್ನು ಸನ್ಮಾನಿಸಿದರು.

        ಈ ಸಂದರ್ಭದಲ್ಲಿ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಮಾತನಾಡಿ, ಪ್ರಶಸ್ತಿ ಪಡೆದ ಪತ್ರಕರ್ತರನ್ನು ಗೌರವಿಸುವುದು ಉತ್ತಮ ಕಾರ್ಯವಾಗಿದೆ. ಅದರಲ್ಲೂ ನಮ್ಮೂರಿನ ನಂಟು ಹೊಂದಿರುವ ಪತ್ರಕರ್ತರನ್ನು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.

         ರಂಗಭೂಮಿ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಪ್ರಕಾಶ ಕುಗ್ವೆ ಅವರು ಸರಳ ವ್ಯಕ್ತಿತ್ವ, ಮಿತಭಾಷಿ, ಸಜ್ಜನ ನಡವಳಿಕೆಯವರಾಗಿದ್ದಾರೆ. ನಾಟಕ ವಿಮರ್ಶೆ, ಕಲಾವಿದರ ಪರಿಚಯ ಹೀಗೆ ಅನೇಕ ಆಯಾಮಗಳಲ್ಲಿ ಕೆಲಸ ಮಾಡುವ ಅವರ ಕಾರ್ಯವೈಖರಿ ಮೆಚ್ಚು ವಂತದ್ದಾಗಿದೆ. ಹಾಗೆಯೇ ಮಂಜುಶ್ರೀ ಕಡಕೋಳ ಸಹ ಸಮಾಜಮುಖಿ ಬರಹಗಾರ್ತಿಯಾಗಿ, ಸ್ತ್ರೀವಾದಿ ಚಿಂತಕಿಯಾಗಿ ರೂಪುಗೊಳ್ಳುತ್ತಿದ್ದಾರೆ. ರಂಗಭೂಮಿ ಕುರಿತು ಸಂಶೋಧನೆ ನಡೆಸಿ, ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ. ಇಬ್ಬರಿಗೂ ಬೆಳೆಯಲು ಸಾಕಷ್ಟು ಅವಕಾಶಗಳಿದ್ದು, ವೃತ್ತಿ ಜೀವನದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

         ಕೂಟದ ಮಾಜಿ ಅಧ್ಯಕ್ಷ ಬಸವರಾಜ ದೊಡ್ಡಮನಿ ಮಾತನಾಡಿ, ನಮ್ಮವರನ್ನು ನಾವು ಗುರುತಿಸಿ ಗೌರವಿಸುವುದು ತವರುಮನೆ ಉಡುಗೊರೆ ನೀಡಿದಂತೆ. ಪ್ರಶಸ್ತಿ ಪುರಸ್ಕತರು ಅರ್ಹರಿದ್ದು, ಇಂತಹವರಿಗೆ ಪ್ರಶಸ್ತಿ ನೀಡುವ ಮೂಲಕ ಅಕಾಡೆಮಿ ಗೌರವ ಹೆಚ್ಚಿದೆ ಎಂದರು.

        ಈ ಸಂದರ್ಭದಲ್ಲಿ ಕೂಟದ ಮಾಜಿ ಅಧ್ಯಕ್ಷರಾದ ಕೆ.ಏಕಾಂತಪ್ಪ, ಎಂ.ಎಸ್.ವಿಕಾಸ್, ಖಜಾಂಚಿ ಎ.ಎಲ್.ತಾರಾನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಬಡದಾಳ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link