ಚಿತ್ರದುರ್ಗ
ಎಪ್ಪತ್ತನೆ ಗಣರಾಜ್ಯೋತ್ಸವದ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ ಹೋರಾಟಗಾರರಿಗೆ ಹಾಗೂ ಅವರ ಪತ್ನಿಯರನ್ನು ಸನ್ಮಾನಿಸಲಾಯಿತು.
ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದ ಕೂನಬೇವು ಗ್ರಾಮದ ಭೀಮಪ್ಪ, ಸರಸ್ವತಿಪುರಂನ ಗೌರಣ್ಣ, ಮಲ್ಲಿಕಾರ್ಜುನಪ್ಪ, ಚಿತ್ರದುರ್ಗದ ಜಾಫರ್, ಸೈನಿಕ ಚಿತ್ರದುರ್ಗ ಕೋಟೆ ರಸ್ತೆಯ ರಂಗಸ್ವಾಮಿ, ಸ್ವಾತಂತ್ರ ಹೋರಾಟಗಾರರ ಪತ್ನಿಯರಾದ ಮಾಳಪ್ಪನಹಟ್ಟಿಯ ಕಮಲಮ್ಮ, ಚಂದ್ರಮ್ಮ, ಬುರುಜನರೊಪ್ಪದ ಭಾಗೀರತಮ್ಮ, ಸಾವಿತ್ರಮ್ಮ ಇವರುಗಳಿಗೆ ಶಿವರಶ್ಮಿ ಅಕ್ಕನವರು ಪನ್ನೀರು, ತಿಲಕವಿಟ್ಟು, ಪುಷ್ಪಾರ್ಚನೆಗೈದು ಗೌರವಿಸಿದರು.
ಬ್ರಿಟೀಷ್ ವಸಾಹತುಶಾಹಿಗಳು ಭಾರತಕ್ಕೆ ಧಾಳಿಯಿಟ್ಟಾಗಲೆ ಅನೇಕ ಹಿರಿಯರು ಭಾರತಾಂಬೆಯನ್ನು ಗುಲಾಮಗಿರಿಯಿಂದ ಹೊರತರುವುದಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ಪುರುಷರು ಸ್ವಾತಂತ್ರಕ್ಕಾಗಿ ಹೋರಾಡಲು ಮಹಿಳೆಯರು ಬೆಂಬಲಿಸಿದ್ದರಿಂದಲೇ ಇಂದು ದೇಶ ದಾಸ್ಯದಿಂದ ಹೊರಬಂದು ನಾವು ನೀವುಗಳೆಲ್ಲರೂ ಸ್ವತಂತ್ರರಾಗಿದ್ದೇವೆ. ಅದಕ್ಕಾಗಿ ಸ್ವಾತಂತ್ರ ಹೋರಾಟಗಾರರ ಪತ್ನಿಯರನ್ನು ಗುರುತಿಸಿ ಸನ್ಮಾನಿಸುವುದು ಅತ್ಯವಶ್ಯಕ ಎಂದು ಹೇಳಿದರು.ಮಲ್ಲಿಕಾರ್ಜುನಾಚಾರ್, ಕೆ.ಪಾಪಯ್ಯ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ