ಬೆಂಗಳೂರು
ಮಾಜಿ ಸಚಿವ, ಜೆಡಿಎಸ್ ಹಿರಿಯ ಮುಖಂಡ, ಮೇಲ್ಮನೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸದಸ್ಯರಾಗಿ ನಲವತ್ತು ವರ್ಷ ಪೂರೈಸಿದ್ದಾರೆ.ಈ ಹಿನ್ನೆಲೆಯಲ್ಲಿ ವಿಧಾನಪರಿಷತ್ತಿನ ಮೊಗಸಾಲೆಯಲ್ಲಿಂದು ಪರಿಷತ್ತಿನ ಇತರ ಸದಸ್ಯರು ಹೊರಟ್ಟಿಯವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಸದಸ್ಯರಾದ ಕೆ ಟಿ ಶ್ರೀಕಂಠೇಗೌಡ, ಕೆ ಸಿ ಕೊಂಡಯ್ಯ, ಯು ಬಿ ವೆಂಕಟೇಶ್, ಚೌಡರೆಡ್ಡಿ ತೂಪಲ್ಲಿ , ತೇಜಸ್ವಿನಿ ಗೌಡ ಹಾಗೂ ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಹಾಗೂ ಇತರೆ ಪರಿಷತ್ ಸಚಿವಾಲಯದ ಸಿಬ್ಬಂದಿ ಹೊರಟ್ಟಿಯವರಿಗೆ ಮೈಸೂರು ಪೇಟ ತೊಡಿಸಿ, ಏಲಕ್ಕಿ ಹಾರ ಹಾಕಿ ಸಿಹಿ ತಿನ್ನಿಸಿ ಸನ್ಮಾನಿಸಿ ಶುಭಕೋರಿದರು.
ಬಸವರಾಜ್ ಹೊರಟ್ಟಿ ಮಾತನಾಡಿ, ಸಾಮಾನ್ಯ ಶಿಕ್ಷಕನಾಗಿದ್ದ ತಮ್ಮನ್ನು ಸಹಶಿಕ್ಷಕರೇ ವಿಧಾನಪರಿಷತ್ ಗೆ ಆಯ್ಕೆ ಮಾಡಿದರು. ಸುಮಾರು ನಲವತ್ತು ವರ್ಷಗಳ ಕಾಲ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡುತ್ತಾ ಬಂದಿದ್ದು, ಏಳು ಬಾರಿ ಪರಿಷತ್ ಗೆ ಆಯ್ಕೆ ಆಗಿದ್ದೇನೆ ಎಂದು ಭಾವುಕರಾದರು.ರಾಜಕೀಯ ಬದುಕಿನಲ್ಲಿ ತಾವೆಂದೂ ಜಾತಿ, ಧರ್ಮ, ಹಣಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ.ಹೀಗಾಗಿ ಅವರ ನಿರಂತರ ಪ್ರೀತಿ ತಮ್ಮ ಮೇಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ