ಚಳ್ಳಕೆರೆ
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಹೋಟೆಲ್ ಉದ್ಯಮಿಯೊಬ್ಬರು ತಮ್ಮ ಕುಟುಂಬ ಸಮೇತ ತುಮಕೂರು ಜಿಲ್ಲೆಯ ಗೊರವಿನಹಳ್ಳಿ ಮಹಾಲಕ್ಷ್ಮಿ ದೇವರ ದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ಜೈಲೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಹಿನ್ನೆಲೆಯಲ್ಲಿ ಒರ್ವ ವ್ಯಕ್ತಿ ಮೃತಪಟ್ಟು, ಇತರೆ 15ಕ್ಕೂ ಹೆಚ್ಚು ಜನರಿಗೆ ಗಾಯವಾಗಿವೆ. ಈ ಪೈಕಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಭಾರ್ಗವಿ ಹೋಟೆಲ್ ಮಾಲೀಕ ಮೋಹನ್‍ಕುಮಾರ್(45) ತನ್ನ ಸಹೋದರರು ಹಾಗೂ ಕುಟುಂಬವರ್ಗದೊಡನೆ ತಮ್ಮದೇಯಾದ ವಾಹನದಲ್ಲಿ ಸೋಮವಾರ ಬೆಳಗಿನ ಜಾವ 5ಕ್ಕೆ ಚಳ್ಳಕೆರೆ ನಗರದಿಂದ ಹೊರಟು ಗೊರವಿನಹಳ್ಳಿಗೆ ಹೋಗುವ ಮಾರ್ಗದಲ್ಲಿ ಸುಮಾರು 6.30ರ ಸಮಯದಲ್ಲಿ ಗೊಲ್ಲಹಳ್ಳಿ-ಯರಬಳ್ಳಿ ರಸ್ತೆಯ ಮಧ್ಯ ಚಾಲಕನ ನಿಯಂತ್ರಣ ತಪ್ಪಿದ ವಾಹನ ಪಲ್ಟಿಯಾಗಿದೆ.
ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಯರಬಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ತೀರ್ವ ರಕ್ತಸ್ರಾವದಿಂದ ನರಳುತ್ತಿದ್ದ ಹೋಟೆಲ್ ಮಾಲೀಕ ಮೋಹನ್‍ಕುಮಾರ್ ಚಿಕಿತ್ಸೆ ನೀಡುವ ಮುನ್ನವೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಮೋಹನ್‍ಕುಮಾರ್ ತಾಯಿಗೂ ಸಹ ತಲೆಗೆ ಪೆಟ್ಟಿಬಿದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಸದರಿ ಅಪಘಾತದಲ್ಲಿ ರಾಧ, ಶಿವಸ್ವಾಮಿ, ಆದಿತಿ, ಅನನ್ಯ, ಭಾರ್ಗವಿ, ಅಂಕಿತ, ಸುರ್ವಣಮ್ಮ, ದೇವಿಕ, ಉಷಾ, ಲಕ್ಷ್ಮಿ, ಶರಣಪ್ಪ, ಪುನೀತ್, ಗೌರಮ್ಮ, ವಿಕ್ರಮ್ ಮುಂತಾದವರು ಗಾಯಗೊಂಡಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿಯುತ್ತಲೇ ನಗರದ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ತಿಳಿಸಿದರು