ಆಕಸ್ಮಿಕ ಬೆಂಕಿಗೆ ಆಹುತಿಯಾದ ಗುಡಿಸಲು

ತುರುವೇಕೆರೆ :

         ತಾಲೂಕಿನ ಕಸಬಾ ಹೋಬಳಿಯ ಹುಲಿಕೆರೆ ಗ್ರಾಮದ ವಿಧವ ಮಹಿಳೆ ಸವಿತಾಳ ಗುಡಿಸಲು ಗುರುವಾರ ರಾತ್ರಿ ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ತಾಯಿ- ಮಗಳು ಬೀದಿಗೆ ಬಂದ ಹಿನ್ನಲೆಯಲ್ಲಿ ಶನಿವಾರ ಶಾಸಕ ಮಸಾಲಾಜಯರಾಮ್ ಹಣಕಾಸಿನ ನೆರವು ಮತ್ತು ಹೊದಿಕೆಯ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

         ಸವಿತಾಳ ಗುಡಿಸಲು ಬೆಂಕಿಯ ಅವಘಡಕ್ಕೀಡಾದ ಬಗ್ಗೆ ತಿಳಿದು ಹುಲಿಕೆರೆ ಗ್ರಾಮಕ್ಕೆ ತೆರಳಿ ಸವಿತಾಳ ಗುಡಿಸಲಲ್ಲಿದ್ದ ದಿನಬಳಕೆಯ ವಸ್ತುಗಳು ಮತ್ತು ಕುಟುಂಬಕ್ಕೆ ಆಧಾರವಾಗಿದ್ದು ಮೇಕೆಗಳು ಸುಟ್ಟು ಕರಕಲಾಗಿರುವುದನ್ನು ಕಂಡು ಶಾಸಕರು ಮರುಕಪಟ್ಟರು. ಎಲ್ಲವನ್ನು ಕಳೆದುಕೊಂಡ ಹತಾಶಯಳಾಗಿದ್ದ ಸವಿತಾಳಿಗೆ ಮತ್ತು ಆಕೆಯ ಮಗಳಿಗೆ ಸಾಂತ್ವಾನ ಹೇಳಿದರು.

         ಗುಡಿಸಲು ಕಳೆದುಕೊಂಡ ಸವಿತಾಳಿಗೆ ಹತ್ತು ಸಾವಿರ ನಗದು, ಮೂರು ಬೆಡ್‍ಶೀಟ್ ಎರಡು ಹಾಸಿಕೊಳ್ಳಲು ಚಾಪೆ, ಉಡಲು ಸೀರೆ ವಿತರಿಸಿದರು. ನಂತರ ವಾಸಿಸಲು ಒಂದು ಮನೆ ಗ್ರಾಂಟ್, ಪಶುಭಾಗ್ಯ ಯೋಜನೆಯಡಿ ಒಂದು ಹಸು ಮತ್ತು ಆಕೆಯ ಮಗಳಿಗೆ ಓದಲು ಪುಸ್ತಕಗಳನ್ನು ನೀಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಾಣಿ, ಮುಖಂಡರುಗಳಾದ ಜಯಣ್ಣ, ನವೀನ್‍ಬಾಬು ಮತ್ತು ಗ್ರಾಮಸ್ಥರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link