ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹತ್ತಿ ಉರಿದ ಮನೆ

ಕೊರಟಗೆರೆ

      ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಟಿ.ವಿ.ಬ್ಲಾಸ್ಟ್ ಆಗಿ ಹತ್ತಿಕೊಂಡ ಬೆಂಕಿ ಇಡಿ ಮನೆ ಆವರಿಸಿ ಮನೆಯಲ್ಲಿದ್ದ ಮಹಿಳೆ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಘಟನೆ ಬುಧವಾರ ಕೊರಟಗೆರೆ ಪಟ್ಟಣ ವ್ಯಾಪ್ತಿಯಲ್ಲಿ ಜರುಗಿದೆ.

        ಕೊರಟಗೆರೆ ಪಟ್ಟಣದ ಸಾದರ ಬೀದಿಯ ಸಮಿಉಲ್ಲಾ ಎಂಬ ಕೂಲಿ ಕಾರ್ಮಿಕನ ಮನೆಗೆ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಮನೆ ಆವರಿಸಿ, ಮನೆ ಧಗಧಗನೆ ಉರಿಯಲಾರಂಧಿಸಿದರಾದರೂ ಮಾನಸಿಕ ಅಸ್ವಸ್ಥೆ ಮಗಳು ಮನೆಯಿಂದ ಹೊರಬರದೆ ಇದ್ದಂತಹ ಸಂದರ್ಭದಲ್ಲಿ ಸಾರ್ವಜನಿಕರು ಒಳಹೋಗಿ ಮಹಿಳೆಯನ್ನು ಹೊರತರುವಲ್ಲಿ ಯಶಸ್ವಿಯಾಗಿ ಸ್ವಲ್ಪದರಲ್ಲೆ ಮಹಿಳೆಯ ಪ್ರಾಣವೊಂದು ಉಳಿದಂತಾಗಿದೆ.

         ಸಮಿಉಲ್ಲಾ ಬಾಡಿಗೆ ಮನೆಯಲ್ಲಿದ್ದು, ಮನೆ ಮಾಲೀಕ ಆಸಂ ಬಾಬಾಜಾನ್ ಎಂಬುವರ ಮನೆಯಲ್ಲಿ ಕಳೆದ 4-5 ವರ್ಷಗಳಿಂದ ಬಾಡಿಗೆಯಲ್ಲಿದ್ದು, ಸಮಿಉಲ್ಲಾ ಹಾಗೂ ಮಡದಿ ವಸಿಯಾ ರೇಷನ್ ತರಲು ನ್ಯಾಯಬೆಲೆ ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದ್ದು, ಮಾನಸಿಕ ಅಸ್ವಸ್ಥೆ ಮಗಳು ಮನೆಯಲ್ಲಿಯೇ ಇದ್ದಳು ಎನ್ನಲಾಗಿದ್ದು, ಸಾರ್ವಜನಿಕರ ಸಹಕಾರದಿಂದ ಪ್ರಾಣಾಪಾಯದಿಂದ ಉಳಿದಿದ್ದಾರೆ ಎನ್ನಲಾಗಿದೆ.

        ಅಗ್ನಿ ಅವಘಡದಿಂದ ಸಮಿಉಲ್ಲಾ ಮನೆಯಲ್ಲಿದ್ದ ಪೂರಾ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಬಟ್ಟೆ ಬರೆ, ದವಸ ಧಾನ್ಯ, ಕೆಲವೊಂದಿಷ್ಟು ಚಿನ್ನಾಭರಣಗಳು ಬೆಂಕಿಗೆ ಸಿಲುಕಿ ಕರಕಲಾಗಿದ್ದು, ದಿಕ್ಕು ಕಾಣದೆ ಸಮಿಉಲ್ಲಾ ಹಾಗೂ ಮಡದಿ ವಸಿಯಾ ಕಣ್ಣೀರು ಸುರಿಸುತ್ತಿದ್ದು ಸಹಾಯ ಹಸ್ತಕ್ಕಾಗಿ ಬೇಡಿಕೊಳ್ಳುತ್ತಿದ್ದದ್ದು ಕಂಡುಬಂತು

        ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ 1 ಗಂಟೆಗೂ ಹೆಚ್ಚು ಕಾಲ ಶ್ರಮಹಾಕಿ ನಂದಿಸಿದರಾದರೂ ಕಟ್ಟಡದ ಕಿಟಕಿ ಬಾಗಿಲುಗಳು ಸುಟ್ಟುಹೋಗಿದ್ದು, ಮನೆ ಹಲವು ಕಡೆ ಬಿರುಕು ಬಿಡುವ ಸ್ಥಿತಿ ತಲುಪಿದೆ.ಸ್ಥಳಕ್ಕೆ ಪ.ಪಂ. ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link