ಮಳೆಗೆ ತೋಟದ ಮನೆ ಕುಸಿತ

ಹುಳಿಯಾರು

     ಮಳೆಗಾಳಿಗೆ ತೋಟದ ಮನೆ ಕುಸಿದಿರುವ ಘಟನೆ ಹುಳಿಯಾರು ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ.ಇಲ್ಲಿನ ದಾಸಪ್ಪ ಬಿನ್ ಲಕ್ಷ್ಮಯ್ಯ ಎಂಬುವವರಿಗೆ ಸೇರಿದ ಮನೆಯಿದಾಗಿದ್ದು, ಮಳೆಗೆ ಮನೆಯ ಗೋಡೆ, ಮೇಲ್ಛಾವಣಿ ಕುಸಿದಿದೆ. ಪರಿಣಾಮ ಮನೆಯೊಳಗಿದ್ದ ಕೃಷಿ ಉಪಕರಣಗಳಾದ ಮೋಟಾರ್ ಸ್ಟಾರ್ಟರ್ ಹಾಗು ಕೊಬ್ಬರಿ ಸೇರಿದಂತೆ ಕೆಲ ವಸ್ತುಗಳು ಮಣ್ಣು ಪಾಲಾಗಿ ಹಾಳಾಗಿರುತ್ತವೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಘಟನೆಯ ವಿವರ ಪಡೆದು ನಷ್ಟಕ್ಕೊಳಗಾದ ರೈತರಿಗೆ ಸರ್ಕಾರದ ಪರಿಹಾರ ಕೊಡಿಸುವಂತೆ ಒತ್ತಾಯಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ