ತಾಲ್ಲೂಕಿನಲ್ಲಿ ಭಾರಿ ಮಳೆಗೆ ಕುಸಿದ ಮನೆಗಳು..!

ಚಿಕ್ಕನಾಯಕನಹಳ್ಳಿ:
 
    ತಾಲ್ಲೂಕಿನಲ್ಲಿ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದಾಗಿ  ಹಲವು ಕಟ್ಟೆಗಳಲ್ಲಿ ನೀರು ತುಂಬಿ ಹರಿದಿದೆ, ಕೆಲ ಕಡೆ ಮನೆಗಳು ಕುಸಿತಗೊಂಡು ಸಾರ್ವಜನಿಕ ನಷ್ಠವುಂಟಾಗಿದೆ. ತಾಲ್ಲೂಕಿನ ಹಲವು ಕೆರೆ ಕಟ್ಟೆ, ಹಳ್ಳ-ಕೊಳ್ಳಗಳಲ್ಲಿ ನೀರು ಶೇಖರಣೆಯಾಗಿದೆ, ಕೆರೆಗಳು ಕೋಡಿ ಬಿದ್ದು ಜನರಲ್ಲಿ ಸಂತಸ ಮೂಡಿದೆ.
    ಮತಿಘಟ್ಟ ಕೆರೆ ತುಂಬಿ ಹರಿಯುತ್ತಿದೆ, ಜೋಗಿಹಳ್ಳಿಯ ಹಳ್ಳ ತುಂಬಿ ಚಿ.ನಾ.ಹಳ್ಳಿ ಕೆರೆಗೆ ನೀರು ಹರಿಯುತ್ತಿದೆ, ಬುಳ್ಳೇನಹಳ್ಳಿ ಕಟ್ಟೆ ತುಂಬಿ ಹರಿಯುತ್ತಿದೆ, ಬರಕನಹಾಳ್ ಹೊಸಕೆರೆಯು ರಾತ್ರಿ ಸುರಿದ ಮಳೆಗೆ ಕೋಡಿ ಬಿದ್ದು ನೀರು ಕೆರೆಯಿಂದ ಹೊರಗೆ ಹರಿಯುತ್ತಿದೆ, ಹಂದನಕೆರೆ ಬಳಿಯ ನಾಗತಿಕೆರೆ, ರಾಮಘಟ್ಟ ಕೆರೆ ಕೋಡಿ ಬಿದ್ದಿವೆ, ಬೈರಾಪುರದ ಬಳಿಯ ಹಳ್ಳ ತುಂಬಿ ಚಿಕ್ಕಬಿದರೆ ಕೆರೆಗೆ ನೀರು ಹರಿಯುತ್ತಿದೆ, ಬಹಳ ವರ್ಷಗಳ ನಂತರ ಹಿರೇಹಳ್ಳಿ ತುಂಬಿ ಹರಿಯುತ್ತಿದೆ, ಸುತ್ತುಕಣಿವೆಯ ಹೊಸಹಳ್ಳಿ ಕಟ್ಟೆಯು ತುಂಬಿ ಹರಿಯುತ್ತಿದೆ.
 
     ತಾಲ್ಲೂಕಿನ ಸಾಸಲುವಿನಿಂದ ಗಂಟಿಗನಪಾಳ್ಯ, ಹೊಸಪಾಳ್ಯದ ಮೂಲಕ ಶೆಟ್ಟಿಕೆರೆಗೆ ಹರಿಯುವ ನೀರಿನ ಹಳ್ಳವು 10ವರ್ಷಗಳ ನಂತರ ತುಂಬಿ ಹರಿಯುತ್ತಿದ್ದು ಹಲವು ವರ್ಷಗಳ ನಂತರ ಹಳ್ಳದಲ್ಲಿ ನೀರು ಹರಿಯುತ್ತಿರುವುದನ್ನು ನೋಡಿ ಇಲ್ಲಿನ  ಸ್ಥಳೀಯ ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ.
ಮನೆ ಕುಸಿತ :
 
      ತಾಲ್ಲೂಕಿನ ಹಂದನಕೆರೆ ಹೋಬಳಿ ನಿರುವಗಲ್ ಗ್ರಾಮದಲ್ಲಿ ಸೋಮವಾರ ಸುರಿದ ಮಳೆಯಿಂದಾಗ ಅನಂತಯ್ಯ ಎಂಬುವರ ಮನೆಯ ಗೋಡೆ ಕುಸಿದಿದೆ. ಇದೇ ರೀತಿ ತಾಲ್ಲೂಕಿನ ಹಲವು ಗೊಲ್ಲರಹಟ್ಟಿ ಗ್ರಾಮದಲ್ಲೂ ಮನೆಗಳು ಬಿರುಕು ಬಿಟ್ಟಿರುವುದು ಹಾಗೂ ಕುಸಿತಗೊಂಡಿರುವುದು ವರದಿಯಾಗಿದೆ.
    ತಾಲ್ಲೂಕಿನ ಏಳು ಮಳೆಮಾಪನ ಕೇಂದ್ರದ ವಿವರ : ಚಿ.ನಾ.ಹಳ್ಳಿ-48.ಎಂ.ಎಂ, ದೊಡ್ಡೆಣ್ಣೆಗೆರೆ-15.3 ಮಿ.ಮಿ, ಬೋರನಕಣಿವೆ-90.4.ಮಿ.ಮೀ, ಹುಳಿಯಾರು 48.4-ಮಿ.ಮೀ, ಸಿಂಗದಹಳ್ಳಿ-14.2ಮಿ.ಮೀ, ಶೆಟ್ಟಿಕೆರೆ-39.4 ಮಿ.ಮೀ, ಮತಿಘಟ್ಟ-10.5.ಮಿ.ಮೀ ಮಳೆ ಬಂದಿದೆ.                

Recent Articles

spot_img

Related Stories

Share via
Copy link
Powered by Social Snap