ಹುಳಿಯಾರಿಗೆ 150 ಎ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ..!!!

ಹುಳಿಯಾರು

       ಜೇವರ್ಗಿ-ಚಾಮರಾಜನಗರ 150 ಎ ರಾಷ್ಟ್ರೀಯ ಹೆದ್ದಾರಿಯು ಹುಳಿಯಾರು ಬಳಿ ಬೈಪಾಸ್ ಮೂಲಕ ಹಾದು ಹೋಗುವುದು ನಿಶ್ಚಿತವಾಗಿದೆ. ಸರ್ವೆ ಸಿಬ್ಬಂಧಿ ಈಗಾಗಲೇ ರಸ್ತೆ ಆಗುವ ಮಾರ್ಗದಲ್ಲಿ ಮಾರ್ಕ್ ಮಾಡಿ ಕಲ್ಲುಗಳನ್ನು ನಡೆತ್ತಿರುವುದು ಇದಕ್ಕೆ ಪುಷ್ಠಿ ನೀಡುವಂತ್ತಿದೆ.

         ಈ ಮೂಲಕ ಮನೆಗಳನ್ನು ಕಳೆದುಕೊಳ್ಳುವ ಬೀತಿಯಲ್ಲಿದ್ದ ಹುಳಿಯಾರು ಪಟ್ಟಣದ ನಿವಾಸಿಗಳು ನಿರಾಳರಾಗಿದ್ದಾರೆ.
ಜೇವರ್ಗಿ-ಚಾಮರಾಜನಗರ ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿ 150 ಎ ಗೆ ಸೇರ್ಪಡೆ ಮಾಡಿ ಅಷ್ಟಪಥ ರಸ್ತೆ ನಿರ್ಮಿಸಲಾಗುವುದು ಎಂದು 3 ವರ್ಷಗಳ ಹಿಂದೆ ಸರ್ಕಾರ ಘೋಷಣೆ ಮಾಡಿತ್ತು. ಇದರಿಂದ ಹುಳಿಯಾರು ಮಾರ್ಗವಾಗಿ ಹಾಲಿ ಹಾದು ಹೋಗುವ ರಸ್ತೆಯು ಅಗಲೀಕರಣವಾದರೆ ಹುಳಿಯಾರಿನ ಅರ್ಧ ಕಟ್ಟಡಗಳು ನೆಲಸಮವಾಗುವ ಭೀತಿ ಸಹಜವಾಗಿ ಇಲ್ಲಿನ ನಿವಾಸಿಗಳನ್ನು ಕಾಡುತ್ತಿತ್ತು. ಹಾಗಾಗಿಯೇ ಶಾಸಕರು, ಸಂಸದರು ಸೇರಿದಂತೆ ಹೈವೆ ಅಧಿಕಾರಿಗಳನ್ನು ಸಹ ಭೇಟಿ ಮಾಡಿ ಬೈಪಾಸ್ ರಸ್ತೆ ನಿರ್ಮಿಸುವಂತೆ ಮನವಿ ಸಲ್ಲಿಸಲಾಗಿತ್ತು.

        ಆದರೂ ಯಾರೊಬ್ಬರೂ ಸ್ಪಷ್ಟ ಚಿತ್ರಣ ನೀಡದೆ ಗೊಂದಲ ಸೃಷ್ಠಿಸಿದ್ದರು. ಕೆಲವರು ಬೈಪಾಸ್ ಮಾಡಲಾಗುವುದೆಂದರೆ ಕೆಲವರು ಹುಳಿಯಾರು ಪಟ್ಟಣದಲ್ಲೇ ಹಾದು ಹೋಗಲಿದೆ ಎಂದೇಳಿ ಆತಂಕ ಮೂಡಿಸಿದ್ದರು. ಆದರೆ ಈಗ ಹುಳಿಯಾರು ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತ ಸರ್ವೆ ಕಾರ್ಯ ನಡೆಯುತ್ತಿದೆ. ಹೌದು ಹುಳಿಯಾರು ಸಮೀಪದ ದೊಡ್ಡಬಿದರೆ ಗ್ರಾಮದಿಂದಲೇ ಬೈಪಾಸ್ ರಸ್ತೆ ಆರಂಭವಾಗಿ ಎಸ್‍ಎಲ್‍ಆರ್ ಬಂಕ್ ಮೂಲಕ ಸೋಮಜ್ಜನಪಾಳ್ಯ ಹಾಗೂ ಕೆ.ಸಿ.ಪಾಳ್ಯ ಮತ್ತು ಲಿಂಗಪ್ಪನಪಾಳ್ಯ ಮತ್ತು ಗೌಡಗೆರೆ ನಡುವೆ ಬೈಪಾಸ್ ರಸ್ತೆ ಹೋಗಿ ಕೆಂಕೆರೆ ಬಳಿಯ ಇಂಡೇನ್ ಗ್ಯಾಸ್ ಗೋಡನ್ ಬಳಿ ಸೇರಲಿದೆ.

 200 ಅಡಿಗೆ ನೆಟ್ಟಿರುವ ಕಲ್ಲು
 

         ಈ ಹಿಂದೆ ಈ ರಸ್ತೆಯನ್ನು ಅಷ್ಟಪಥ ರಸ್ತೆ ಮಾಡಲು ಸರ್ಕಾರ ಉದ್ದೇಶಿಸಿತ್ತು. ತದನಂತರ ವಾಹನ ಸಂಚಾರದ ಸರ್ವೆ ಮಾಡಲಾಗಿ ಅಷ್ಟಾಗಿ ವಾಹನ ದಟ್ಟಣೆ ಕಾಣದಿದ್ದರಿಂದ ಚರ್ತುಷ್ಪತ ರಸ್ತೆ ಮಾಡಲು ನಿರ್ಧರಿಸಿತ್ತು. ಹಾಗಾಗಿ ದೊಡ್ಡಬಿದರೆಯಿಂದ ಕೆಂಕೆರೆಗೆ ಹಾದು ಹೋಗುವ ಬೈಪಾಸ್ ರಸ್ತೆಗೆ ಸರ್ವೆ ಸಿಬ್ಬಂಧಿ ಈಗ 200 ಅಡಿ ಅಗಲದಂತೆ ಕಲ್ಲುಗಳನ್ನು ನೆಟ್ಟು ಹೋಗಿದ್ದಾರೆ. ಹಾಗಾಗಿ ಮುನ್ನೂರು ಆಸುಪಾಸಿನಲ್ಲಿ ತೆಂಗಿನ ಮರಗಳು, ಒಂದೈದಾರು ತೋಟದ ಮನೆಗಳು ರಸ್ತೆಯ ಭೂಸ್ವಾದೀನಕ್ಕೆ ಒಳಪಡುತ್ತವೆ.

 ಪರಿಹಾರದ ಮಾಹಿತಿ ಇಲ್ಲ

         200 ಅಡಿ ಅಗಲ ಭೂಸ್ವಾದೀನ ಮಾಡಿಕೊಂಡು ಇದರಲ್ಲಿ 100 ಅಡಿ ನಾಲ್ಕು ಪಥ ರಸ್ತೆ ನಿರ್ಮಿಸಿ ಉಳಿದಿದ್ದರಲ್ಲಿ ಸೇವಾ ರಸ್ತೆ, ಡಿವೈಡರ್, ಚರಂಡಿ ನಿರ್ಮಾಣವಾಗಲಿದೆ. ಒಟ್ಟಾರೆ ಬೈಪಾಸ್ ಮೂಲಕ 150 ಎ ರಸ್ತೆ ಹಾದು ಹೋಗುವುದು ನಿಶ್ಚಿತವಾಗಿದ್ದ್ತು ದೊಡ್ಡಬಿದರೆಯಿಂದ ಕೆಂಕೆರೆ ಮಾರ್ಗದ ರೈತರ 200 ಅಡಿ ಅಗಲ ಭೂಮಿ ಸ್ವಾದೀನಕ್ಕೊಳಪಡಲಿದೆ. ಆದರೆ ಯಾವಾಗ ಕೆಲಸ ಆರಂಭವಾಗಲಿದೆ, ಯಾವಾಗ ಭೂಸ್ವಾದೀನ ಪ್ರಕ್ರಿಯೆ ನಡೆಯಲಿದೆ, ಜಮೀನು, ತೋಟ ಹಾಗೂ ಮನೆಗಳಿಗೆ ಎಷ್ಟೆಷ್ಟು ಪರಿಹಾರ ಸಿಗಲಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link