ಹುಳಿಯಾರು:
ಶಕ್ತಿಶಾಲಿ ದೇವತೆಗಳಲ್ಲಿ ಪ್ರಮುಖವಾಗಿರುವ ಶ್ರಿ ಕಂಕಾಳಿ ಮತ್ತು ಶ್ರೀ ತುಳಜಾಭವಾನಿ ದೇವರುಗಳನ್ನ ಒಟ್ಟಿಗೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆಗೊಂಡಿರುವ ಹುಳಿಯಾರು ಸ್ಥಳ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾಗುವುದು ನಿಶ್ಚಿತ ಎಂದು ಹೊಸದುರ್ಗ ತಾಲೂಕಿನ ಬೆಲಗೂರು ಕ್ಷೇತ್ರದ ಶ್ರೀ ಬಿಂಧು ಮಾಧವ ಶರ್ಮ ಸ್ವಾಮೀಜಿಗಳು ತಿಳಿಸಿದರು.
ಹುಳಿಯಾರು ಕೋಡಿಪಾಳ್ಯದ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್‍ನ ಆಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಕಂಕಾಳಿ, ಶ್ರೀ ತುಳಜಾಭವಾನಿ ದೇವರ ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಮಾತನಾಡಿ ಹುಟ್ಟೂರನ್ನು ಸಾಂಸ್ಕøತಿಕ ಮತ್ತು ಧಾರ್ಮಿಕ ಕ್ಷೇತ್ರವಾಗಿ ಬೆಳೆಸುವ ಮಹದಾಸೆಯನ್ನಿಟ್ಟು ಕೋಡಿಪಾಳ್ಯದ ಗಂಗಾಧರ್ ಅವರು ಸುಸಜ್ಜಿತವಾದ ರಂಗಮಂದಿರ ಮತ್ತು ರಾಜ್ಯದಲ್ಲಿ ಎಲ್ಲೂ ಕಾಣಸಿಗದ ವೈಶಿಷ್ಠವಾದ ದೇವಸ್ಥಾನ ಕಟ್ಟಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಗೆ ಅಭಿನಂದನಾರ್ಹ ಎಂದರಲ್ಲದೆ ಈ ಕ್ಷೇತ್ರ ಬೆಳವಣಿಗೆಗೆ ಸ್ಥಳೀಯರು ಸಹ ಕೈ ಜೋಡಿಸಬೇಕು ಎಂದರು.
ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಮಾತಾ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್, ತಂಜಾವೂರು ದಕ್ಷಿಣ ವಲಯ ಸಾಂಸ್ಕತಿಕ ಕೇಂದ್ರದ ಕರ್ನಾಟಕ ಸದಸ್ಯ ತೊಟ್ಟವಾಡಿ ನಂಜುಂಡಸ್ವಾಮಿ, ಸರಿಗಮಪ ಖ್ಯಾತಿಯ ಕುರಿಗಾಹಿ ಹನುಮಂತ, ಸಿನಿಮಾ ಮತ್ತು ಕಿರುತೆರೆ ಗೌಡಿ, ಮುಖಂಡರಾದ ಬಡ್ಡಿ ಪುಟ್ಟರಾಜು, ಹು.ಕೃ.ವಿಶ್ವನಾಥ್, ಹೋಟೆಲ್ ಗೋಪಾಲರಾವ್, ಬಡಗಿ ರಾಮಣ್ಣ, ಚಿರುಮುರಿ ಶ್ರೀನಿವಾಸ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
