ತಾಲೂಕಿನ ಹಲುವಾಗಲು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್ -ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎನ್ .ಟಿ.ರತ್ನಮ್ಮ ಸೋಮಪ್ಪ ಹಾಗೂ ಉಪಾದ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ. ಶಾಂತವ್ವ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಒಟ್ಟು 26 ಜನ ಸದಸ್ಯರಲ್ಲಿ 26 ಜನರು ಹಾಜರಿದ್ದರು. ಅದ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿದ್ದು, ರತ್ನಮ್ಮ ಸೋಮಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ 9, ಜೆಡಿಎಸ್ ಪಕ್ಷದ 3 ಹಾಗೂ ಬಿಜೆಪಿಯ 3 ಸದಸ್ಯರು ಸೇರಿ ಒಟ್ಟು 15 ಮತಗಳು ಲಭಿಸಿದವು. ಪರಾಜಿತ ಅಭ್ಯರ್ಥಿ ಶಶಿರೇಖಾ ಅವರಿಗೆ 11 ಮತಗಳು ಲಭಿಸಿದವು.
ಉಪಾದ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಾಂತವ್ವ ಅವರು ಅವಿರೋಧವಾಗಿ ಆಯ್ಕೆ ಗೊಂಡರು. ಈ ಪಂಚಾಯ್ತಿಯಲ್ಲಿ ಈವರೆಗೂ ಬಿಜೆಪಿ ಪಕ್ಷದವರು ಅದ್ಯಕ್ಷರಾಗಿ ಕಾರ್ಯನಿರ್ವಹಿಸಿ ಒಪ್ಪಂದದ ಪ್ರಕಾರ ರಾಜಿನಾಮೆ ಸಲ್ಲಿಸಿದ್ದರಿಂದ ಚುನಾವಣೆ ಜರುಗಿತು.
ಚುನಾವಣಾಧಿಕಾರಿಯಾಗಿ ಇಲ್ಲಿಯ ಪಶು ಇಲಾಖೆಯ ಸಹಾಯಕ ನಿರ್ದಶಕ ಶಿವಕುಮಾರ ಅವರು ಕಾರ್ಯನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
