ಗುಬ್ಬಿ
ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದ ಶ್ರೀಕಂಚಿಬೀಡು ಶನೇಶ್ವರಸ್ವಾಮಿ ದೇವಾಲಯದಲ್ಲಿ ಕಳೆದ ರಾತ್ರಿ ದೇವಾಲಯದ ಬಾಗಿಲು ಮುರಿದು ನೆಲಕ್ಕೆ ಅಳವಡಿಸಿದ್ದ ಹುಂಡಿಯನ್ನು ಒಡೆದು ಭಕ್ತಾದಿಗಳಿಂದ ಸಂಗ್ರಹವಾಗಿದ್ದ ಹಣವನ್ನು ಕಳವು ಮಾಡಲಾಗಿದ್ದು, ಖಾಲಿ ಹುಂಡಿಯನ್ನು ದೇವಾಲಯದ ಪಕ್ಕದ ಪ್ರಸಾದ ನಿಲಯದ ಬಳಿ ಬಿಸಾಡಿದ್ದಾರೆ.
ವರ್ಷಕ್ಕೊಮ್ಮೆ ದೇವಾಲಯದ ಹುಂಡಿಯನ್ನು ತೆರೆಯಲಾಗುತ್ತಿದ್ದು ಆದರೆ ಈ ಬಾರಿ ಹುಂಡಿ ತೆರೆಯುವ ಮೊದಲೆ ಕಳವು ಮಾಡಿರುವುದು ಬೇಸರದ ಸಂಗತಿಯಾಗಿದೆ ಎನ್ನುತ್ತಾರೆ ಪ್ರಧಾನ ಅರ್ಚಕರು. ಘಟನಾ ಸ್ಥಳಕ್ಕೆ ಸಿ.ಎಸ್ ಪುರ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ