ಬೆಂಗಳೂರು
ಮಧ್ಯಪಾನ ಮಾಡಿ ಬಂದು ಜಗಳ ತೆಗೆದ ಪತಿಯೊಬ್ಬ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿರುವ ದುರ್ಘಟನೆ ಭಾನುವಾರ ಮಧ್ಯರಾತ್ರಿ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪತಿಯ ಚಾಕು ಇರಿತದಿಂದ ಬೆಳ್ಳಂದೂರಿನ ತಪಸ್ವಿನಿ(28) ಕುತ್ತಿಗೆಗೆ ಗಾಯಗೊಂಡು ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ.
ಕೃತ್ಯವೆಸಗಿದ ಪರಾರಿಯಾಗಿದ್ದ ಪತಿ ಪ್ರದೀಪ್ನನ್ನು ಕಾರ್ಯಾಚರಣೆ ನಡೆಸಿದ ಬೆಳ್ಳಂದೂರು ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಪ್ರದೀಪ್ನನ್ನು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದ ತಪಸ್ವಿನಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು.ಇತ್ತೀಚಿಗೆ ಕುಡಿತದ ಚಟ ಅಂಟಿಸಿಕೊಂಡಿದ್ದ ಪ್ರದೀಪ್ ಕುಡಿದು ಬಂದು ಪತ್ನಿ ಜೊತೆ ಜಗಳ ಮಾಡುತ್ತಾ ಕಿರುಕುಳ ನೀಡುತ್ತಿದ್ದ.
ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದ ಪ್ರದೀಪ್ ರಾತ್ರಿ 1ರ ವೇಳೆ ಪತ್ನಿಯ ಜೊತೆ ಜಗಳ ತೆಗೆದಿದ್ದಾನೆ ಮುಂಜಾನೆ 3ರವರೆಗೆ ಜಗಳ ನಡೆದಿದ್ದು ಆಕ್ರೋಶಗೊಂಡ ಪ್ರದೀಪ್ ಪತ್ನಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.ಗಾಯಗೊಂಡ ತಪಸ್ವಿನಿ ರಕ್ತದ ಮಡುವಿನಲ್ಲೇ ಹತ್ತಿರದಲ್ಲಿಯೇ ಇದ್ದ ಅಣ್ಣನ ಮನೆ ಬಾಗಿಲು ತಟ್ಟಿದ್ದಾಳೆ.
ಬಾಗಿಲು ತೆಗೆದ ಅಣ್ಣ ಪದ್ಮಲೋಷನ್ ಶಾಕ್ ಆಗಿದ್ದು ಕುಟುಂಬದವರ ಜೊತೆ ಸೇರಿ ತಪಸ್ವಿನಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ ಚಿಕಿತ್ಸೆ ಪಡೆಯುತ್ತಿರುವ ತಪಸ್ವಿನಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
