ದಾವಣಗೆರೆ:
ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಪತ್ನಿಯ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದು, ಆರೋಪಿಯನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.ಇಲ್ಲಿನ ವಿಜಯನಗರ ಬಡಾವಣೆಯ ಉಷಾ (38 ವರ್ಷ) ಕೊಲೆಯಾದವರು. ಕೊಲೆಯ ಆರೋಪದ ಮೇಲೆ ಈಕೆಯ ಪತಿ ಜಯಪ್ಪ (38) ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ. ಇಬ್ಬರೂ ಪ್ರೇಮ ವಿವಾಹವಾಗಿದ್ದು, ಎರಡು ಮಕ್ಕಳಿದ್ದವು.
ಕುಡಿತದ ಚಟ ಹೊಂದಿದ್ದ ಈತ ಪ್ರತಿ ದಿವಸ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ಪತ್ನಿಯ ಶೀಲದ ಬಗ್ಗೆಯೂ ಸಂಶಯ ಪಡುತ್ತಿದ್ದ. ಉಷಾ ಅವರೇ ದುಡಿದು ಮಕ್ಕಳನ್ನು ಸಾಕುತ್ತಿದ್ದರು. ಡಿ.25ರ ರಾತ್ರಿ ಕುಡಿದು ಬಂದ ಜಯಪ್ಪ ಉಷಾ ಅವರೆ ಮೇಲೆ ಹಲ್ಲೆ ಮಾಡಿದ್ದಾನೆ. ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.ಮಹಿಳಾ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.