ಹೆಂಡತಿ ಗರ್ಭಿಣಿ ಎಂದು ಸುಳಿವು ಅರಿತ ತಕ್ಷಣ ತಲೆ ಮರೆಸಿಕೊಂಡ ಗಂಡ

ಕೊರಟಗೆರೆ:-

     ಮುಗ್ದ ಅಪ್ರಾಪ್ತ ವಯಸ್ಸಿನ ಯುವತಿಯನ್ನು ವಿವಾಹಿತ ಪುರುಷನೊಬ್ಬ ಕಳೆದ 8 ತಿಂಗಳಿನಿಂದಲೂ ಲೈಂಗಿಕವಾಗಿ ಬಳಸಿಕೊಂಡು 7 ತಿಂಗಳ ಗರ್ಭಿಣಿಯಾದ ಬಳಿಕ ತಲೆ ಮರೆಸಿಕೊಂಡಿರುವ ತಡವಾಗಿ ಬೆಳಕಿಗೆ ಬಂದ ಘಟನೆಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿಜರುಗಿದೆ.

      ಕೊರಟಗೆರೆ ಪಟ್ಟಣದಕುಂಬಾರ ಬೀದಿಯ ವಾಸಿಯಾದ ಲೇ.ಪುಟ್ಟಣ್ಣನ ಮಗ ಪ್ರಕಾಶ ಎಂಬುವನು ಇದೇ ಬೀದಿಯಅಪ್ರಾಪ್ತ ವಯಸ್ಸಿನ ಯುವತಿಯ ತಲೆಕೆಡಿಸಿ ಮದುವೆಯಾದ ನಂತರ ನಿರಂತರಲೈಂಗಿಕವಾಗಿ ಬಳಸಿಕೊಂಡು 7ತಿಂಗಳ ಗರ್ಭಿಣಿಎಂದು ಸುಳಿವು ಅರಿತತಕ್ಷಣತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

     ಸಂತಸ್ತ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿ ಆಕಸ್ಮಿಕವಾಗಿ, ಅನ್ಯ ಕಾಯಿಲೆ ನಿಮಿತ್ತಚಿಕಿತ್ಸೆಗೆ ಪಟ್ಟಣದ ಸರಕಾರಿಆಸ್ಪತ್ರೆಗೆ ಬಂದ ಸಂದರ್ಭದಲ್ಲಿಯುವತಿ ಮದುವೆಗೆ ಮುಂಚಿತವಾಗಿಅದರಲ್ಲೂಅಪ್ರಾಪ್ತ ವಯಸ್ಸಿನಲ್ಲಿ 7 ತಿಂಗಳ ಗರ್ಭಿಣಿಯಾಗಿರುವುದುಕಂಡು ಬಂದು ವಯಸ್ಸಿನ ಅನುಮಾನ ಬಂದು ಪೊಲೀಸರಿಗೆದೂರು ನೀಡಿದ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಸರಕಾರಿ ವೈದ್ಯರದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರುಆರೋಪಿಯ ಸೆರೆಗಾಗಿ ಬಲೆ ಬಿಸಿ ಬಂಧಿಸಿದ್ದಾರೆ.

      ಆರೋಪಿ ಪ್ರಕಾಶಎಂಬಾತನಿಗೆ ಕಳೆದ 12ವರ್ಷದ ಹಿಂದೆ ಮದುವೆಯಾಗಿ ಹೆಂಡತಿಯಜೊತೆಇಬ್ಬರು ಹೆಣ್ಣು ಮಕ್ಕಳಿದ್ದಾರೆ .ಯುವತಿಯನ್ನು ಬಲವಂತದಿಂದ ನಂಬಿಸಿ ಮದುವೆಯಾಗಿದ್ದ ವ್ಯಕ್ತಿ ಈಗ ಪೊಲೀಸರಅತಿಥಿಆಗಿದ್ದಾನೆ. ಅಪ್ರಾಪ್ತ ವಯಸ್ಸಿನ ಗರ್ಭೀಣಿಯುವತಿಯನ್ನು ಈಗ ತುಮಕೂರು ಸ್ವಾಂತನಕೇಂದ್ರಕ್ಕೆ ಬೀಡಲಾಗಿದೆಎಂದು ತಿಳಿದುಬಂದಿದೆ.

       ತಲೆ ಮರೆಸಿಕೊಂಡಿದ್ದ ಆರೋಪಿ ಪ್ರಕಾಶನನ್ನು ಪಿಎಸೈ ಮಂಜುನಾಥ ನೇತೃತ್ವದ ಶಂಕರಪ್ಪ ಮತ್ತುತಿಪ್ಪೇಸ್ವಾಮಿ ಪೊಲೀಸರತಂಡ ಬಂಧಿಸಿದ್ದಾರೆ.ಕೊರಟಗೆರೆ ಪೊಲೀಸ್‍ಠಾಣೆಯಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೊಖಾಯ್ದೆಯಡಿ ಪ್ರಕರಣದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link