ಸ್ವಾತಂತ್ರ್ಯ ಸಿಕ್ಕರೂ ನಿರುದ್ಯೋಗ, ಹಸಿವು, ಬಡತನದಿಂದ ಜನರು ಸಾಯುತ್ತಿದ್ದಾರೆ -ಮಹಾಲಿಂಗಪ್ಪ

ಜಗಳೂರು

      ಬ್ರಿಟೀಷರ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಲು ಅಂದು ಕ್ರಾಂತಿಕಾರಿಗಳು ಹೋರಾಡಿ ವೀರ ಮರಣ ಹೊಂದಿದ್ದಾರೆ. ಆದರೆ ಇಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಿರುದ್ಯೋಗ, ಹಸಿವು, ಬಡತನದಿಂದ ಜನರು ಸಾಯುತ್ತಿದ್ದಾರೆ ಎಂದು ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ ಹೊಳೆ ವಿಷಾಧಿಸಿದರು. 

       ಇಲ್ಲಿನ ಅಮರ ಭಾರತಿ ವಿದ್ಯಾಕೇಂದ್ರದ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಹಮ್ಮಿಕೊಂಡಿದ್ದ ಅಪ್ರತಿಮ ಕ್ರಾಂತಿಕಾರ ಹೋರಾಟಗಾರರಾದ ಭಗತ್‍ಸಿಂಗ್, ರಾಜಗುರು, ಸುಖದೇವ್ ಹುತಾತ್ಮರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಸ್ವಾತಂತ್ರ ಭಾರತದ ಕನಸ್ಸು ಕಂಡಿದ್ದಕ್ಕಾಗಿ ಭಗತ್‍ಸಿಂಗ್, ರಾಜಗುರು, ಸುಖದೇವ್ ಕ್ರಾಂತಿಯ ಕಿಡಿಗಳು ಬ್ರಿಟೀಷರಿಂದ ಗಲ್ಲುಕಂಬಕ್ಕೇರಿ ಹುತಾತ್ಮರಾದರು. ಅವರ ಧ್ಯೇಯ, ಗುರಿ, ಹೋರಾಟದ ಕಿಚ್ಚು ಯುವಕರಲ್ಲಿ ಮೂಡಬೇಕಿದೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಇಂಥ ನಾಯಕರನ್ನು ನೆನಪು ಮಾಡಿಕೊಳ್ಳಲು ಸಾದ್ಯವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

       ಸ್ವಾತಂತ್ರವೆಂದರೆ ರಾಜಕೀಯ ಅಧಿಕಾರ ಹಸ್ತಾಂತರವಲ್ಲಾ, ಆಳುವವರ ಬದಲಾವಣೆ ಅಲ್ಲ, ದೇಶದ ಪ್ರತಿಯೊಬ್ಬ ಪ್ರಜೆಯೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ವಾತಂತ್ರ್ಯ ಪಡೆದು ಸಮಾನತೆಯಿಂದ ಸಾಧಿಸುವುದೇ ಸ್ವಾತಂತ್ರವೆಂದು ಭಗತ್‍ಸಿಂಗ್ ಅವರ ಚಿಂತನೆಯಾಗಿತ್ತು. ಆದರೆ ಅವರ ಕನಸ್ಸು ಕನಸ್ಸಾಗಿಯೇ ಉಳಿದಿದೆ ಎಂದರು.

        ಸಿದ್ದಾರ್ಥ ಕಾಲೇಜಿನ ಪ್ರಾಂಶುಪಾಲ ಕಲ್ಲೇಶಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಲಿಂಗರಾಜ್, ಪತ್ರಕರ್ತ ಧನ್ಯಕುಮಾರ್, ಎಸ್‍ಎಫ್‍ಐ ತಾಲೂಕಾಧ್ಯಕ್ಷ ಗೌರಿಪುರ ಮೈಲೇಶ್, ಜಿಲ್ಲಾ ಉಪಾಧ್ಯಕ್ಷ ಅನಂತ್ ರಾಜ್, ಕಾನನಕಟ್ಟೆ ರಘುವೀರ್ ಸೇರಿದಂತೆ ಮತ್ತಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap