ದಾವಣಗೆರೆ:
ತಾಲೂಕಿನ ಕಡ್ಲೇಬಾಳು ಗ್ರಾಮಸ್ಥರು ಹಾಗೂ ಯುವಕರು ಇತ್ತೀಚೆಗೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಗುರು ಅವರ ಕುಟುಂಬಕ್ಕೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅವರ ಮುಖಾಂತರ ಆರ್ಥಿಕ ನೆರವು ನೀಡಿದರು.
ಕಡ್ಲೇಬಾಳು ಗ್ರಾಮಸ್ಥರಿಂದ ಸಂಗ್ರಹಿಸಿದ್ದ 5,710 ರೂಪಾಯಿಗಳ ಚೆಕ್ ಅವನ್ನು ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ಅವರ ಹೆಸರಿಗೆ ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿದರು.ಈ ಸಂದರ್ಭದಲ್ಲಿ ಮಾರುತಿ, ಅಂಜಿನಪ್ಪ, ಭೀಮನಗೌಡ್ರು, ಮಂಜುನಾಥ್, ಆನಂದ್, ಅಜಯ್.ಹೆಚ್, ಹನುಮಂತ, ಮೈಲಪ್ಪ, ವಿಜಯ್, ನಾಗಪ್ಪ, ಹಳ್ಳಳ್ಳಿ ರಮೇಶ್, ಹನುಮಂತ, ಜಯಣ್ಣ, ಈರಪ್ಪ ಮತ್ತಿತರರು ಹಾಜರಿದ್ದರು.