ಹುತಾತ್ಮ ಯೋಧರ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ

ದಾವಣಗೆರೆ:

      ಅಮರ್ ಜವಾನ್ ಮಾದರಿಯಲ್ಲಿ ಹುತಾತ್ಮ ವೀರಯೋಧರಿಗೆ ನಮನ ಸಲ್ಲಿಸಲು ಹಾಗೂ ಅವರುಗಳ ತ್ಯಾಗ ಬಲಿದಾನವನ್ನು ನೆನೆಯಲು ನಗರದಲ್ಲಿ ಹುತಾತ್ಮ ಯೋಧರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಕರ್ನಲ್ ಎಂ.ಬಿ.ರವೀಂದ್ರನಾಥ್ ಅಭಿಮಾನಿಗಳ ಬಳಗದ ಎಸ್.ಟಿ.ವೀರೇಶ್ ಆಗ್ರಹಿಸಿದ್ದಾರೆ.

       ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಜನ್ಮ ಕೊಟ್ಟ ತಾಯಿಯಷ್ಟೇ ದೇಶಕ್ಕೆ ಅನ್ನ ನೀಡುವ ರೈತ ಹಾಗೂ ದೇಶದ ಗಡಿ ಕಾಯುವ ಯೋಧ ಮುಖ್ಯವಾಗಿದ್ದಾರೆ. ಈ ಸೈನಿಕರ ತ್ಯಾಗ-ಬಲಿದಾನದಿಂದಲೇ ಸ್ವಾತಂತ್ರ್ಯ ಉಳಿದಿದೆ. ಆದರೆ, ಸೈನಿಕರು ಹುತಾತ್ಮರದಾಗ ಮಾತ್ರ ಎಂದು ಕ್ಷಣ ಗೌರವ ಸಲ್ಲಿಸಿ ಮರೆತು ಬಿಡುತ್ತಿದ್ದೇವೆ. ಆದ್ದರಿಂದ ಮಾಹನಗರ ಪಾಲಿಕೆ ಹುತಾತ್ಮ ವೀರಯೋಧರಿಗೆ ನಮನ ಸಲ್ಲಿಸಲು ಹಾಗೂ ಅವರುಗಳ ತ್ಯಾಗ ಬಲಿದಾನವನ್ನು ನೆನೆಯಲು ನಗರದಲ್ಲಿ ಹುತಾತ್ಮ ಯೋಧರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

       ಈ ಹಿಂದೆ ಪಾಲಿಕೆಗೆ ಕಾರ್ಗಿಲ್ ಹುತಾತ್ಮ ಯೋಧರ ಸ್ಮಾರ ನಿರ್ಮಿಸುವಂತೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ, ಮುಂಬೈ ದಾಳಿಯಲ್ಲಿ ಸಂದೀಪ್ ಉನ್ನೀಕೃಷ್ಣನ್ ಹುತಾತ್ಮರಾದ ಸಂದರ್ಭದಲ್ಲೂ, ಇತ್ತೀಚೆಗೆ ನಮ್ಮ ಜಿಲ್ಲೆಯವರೆಯಾದ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ವೀರ ಚಕ್ರ ಪ್ರಶಸ್ತಿ ಪುರಸ್ಕøತ ಕರ್ನಲ್ ಎಂ.ಬಿ.ರವೀಂದ್ರನಾಥ್ ಅವರು ಸಹ ಮೃತಪಟ್ಟಾಗ ಅಮರ್ ಜವಾನ್ ಮಾದರಿಯಲ್ಲಿ ಹುತಾತ್ಮ ಯೋಧರ ಸ್ಮಾರಕ ನಿರ್ಮಾಣಕ್ಕೆ ಪಾಲಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ವರೆಗೂ ಪಾಲಿಕೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

      ಸೆ.24ರಂದು ಪಾಲಿಕೆ ಸಾಮಾನ್ಯ ಸಭೆ ಇರುವುದರಿಂದ ಇಂದು ಬೆಳಿಗ್ಗೆ ಪಾಲಿಕೆಯ ಮಹಾಪೌರರಿಗೆ ಹಾಗೂ ಆಯುಕ್ತರಿಗೆ ಹುತಾತ್ಮ ಸ್ಮಾರಕ ಭವನ ನಿರ್ಮಿಸುವಂತೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ತಕ್ಷಣವೇ ಮಹಾನಗರ ಪಾಲಿಕೆ ಹುತಾತ್ಮ ಸ್ಮಾರಕ ಭವನ ನಿರ್ಮಿಸಬೇಕು, ಯಾವುದಾದರೂ ಪ್ರಮುಖ ರಸ್ತೆಗೆ ವೀರ ಚಕ್ರ ಪ್ರಶಸ್ತಿ ಪುರಸ್ಕøತ ಕರ್ನಲ್ ಎಂ.ಬಿ.ರವೀಂದ್ರನಾಥ್ ಅವರ ಹೆಸರು ನಾಮಕರಣ ಮಾಡಬೇಕು ಹಾಗೂ ಪ್ರಮುಖ ವೃತ್ತ ಒಂದರಲ್ಲಿ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

      ಸುದ್ದಿಗೋಷ್ಠಿಯಲ್ಲಿ ಬಳಗದ ಎಂ.ಜಿ.ಶ್ರೀಕಾಂತ್, ಗಿರೀಶ್ ಎಸ್. ದಏವರಮನೆ, ಈ.ಬಸವರಾಜ್, ಪ್ರಸನ್ನ ಬೆಳೆಕೆರೆ, ಮಲ್ಲಿಕಾರ್ಜುನ ಈಂಗಳೇಶ್ವರ್, ಮಹಾವೀರ ಇಜಾರೆ, ಪವನ್ ರೇವಣ್ಕರ್ ಮತ್ತಿತರರು ಹಾಜರಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap