ಬೆಂಗಳೂರು
ಪ್ರತ್ಯೇಕ ಲಿಂಗಾಯತ ಧರ್ಮ ಕುರಿತ ಹೇಳಿಕೆಗೆ ನಾನು ಈಗಲೂ ಬದ್ಧ.ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ ಪುನರುಚ್ಛರಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಯಾರ ಪರವೂ ಇಲ್ಲ, ವಿರುದ್ಧವೂ ಅಲ್ಲ. ನನ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ನಾನು ಹೇಳಿಕೆ ನೀಡಿದ್ದೇನೆ. ಬಿಜೆಪಿ, ಕಾಂಗ್ರೆಸ್, ಆ ಪಕ್ಷ, ಈ ಪಕ್ಷ, ಮಠಾಧೀಶರ ಬೆಂಬಲ, ವಿರೋಧ ಇಲ್ಲಿ ಮುಖ್ಯವಲ್ಲ. ಯಾರ ಬೆಂಬಲ ಸಿಗಲಿ ಅಂತ ನಾನು ಈ ಹೇಳಿಕೆ ನೀಡಿಲ್ಲ. ಬಹಳ ದೀರ್ಘವಾಗಿ ಯೋಚನೆ ಮಾಡಿ ಹೇಳಿದ್ದೇನೆ ಎಂದರು.
ಧರ್ಮ, ಸಂಪ್ರದಾಯ,ಸಂಸ್ಕತಿ ವಿಚಾರದಲ್ಲಿ ರಾಜಕಾರಣಿಗಳು ಭಾಗಿಯಾಗಬಾರದು. ಒಕ್ಕಲಿಗರ ಸಂಘದ ವಿಚಾರದಲ್ಲಿ ರಾಜಿ ಮಾಡೋಕೆ ಹೋಗಿದ್ದೆ. ಆದರೆ ಕೊನೆಗೆ ನಾನೇ ಬೇಡ ಅಂತ ಸುಮ್ಮನಾದೆ. ಲಿಂಗಾಯತ ಧರ್ಮ ವಿಚಾರ ಸಂಬಂಧ ಹಿರಿಯರು, ಮಠಾಧೀಶರು ಇದ್ದಾರೆ. ಅವರು ಅದನ್ನ ಬಗೆಹರಿಸಿಕೊಳ್ಳುತ್ತಾರೆ. ಮುಂದೆ ಯಾವುದೇ ರಾಜಕಾರಣಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದು ಸರಿಯಲ್ಲ ಎಂದರು.
ನಿಮ್ಮ ಹೇಳಿಕೆಗೆ ಮಾತೆ ಮಹದೇವಿ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಹಳ ಸಂತೋಷ. ಪರ, ವಿರೋಧ ಇರುವವರು ಇರುತ್ತಾರೆ. ಆದರೆ ನನಗೆ ಅನ್ನಿಸಿದ್ದನ್ನ ನಾನು ಹೇಳಿದ್ದೇನೆ. ಯಾರ ಪರವೂ ಬೇಡ, ಯಾರ ವಿರುದ್ಧವೂ ಬೇಡ. ಯಾರು ಏನು ಬೇಕಾದರೂ ಹೇಳಲಿ. ನನ್ನ ಅಭಿಪ್ರಾಯ ನನ್ನದು. ಮನುಷ್ಯ ಹುಟ್ಟಿದ ಮೇಲೆ ಸಾಯಲೇ ಬೇಕಲ್ಲ,’ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ