ನಾನು ಕೂಡ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ :ಮಾಡಾಳ್ ವಿರೂಪಾಕ್ಷಪ್ಪ

ಚನ್ನಗಿರಿ

    5 ದಶಕಗಳ ಕಾಲ ರಾಜಕೀಯ ಮಾಡಿರುವ ಅನುಭವವಿದ್ದು, ನಾನು ಕೂಡ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೆನೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

    ಪಟ್ಟಣದ ಶಾಸಕರ ಕಚೇರಿಯಲ್ಲಿ ಸುಧ್ದಿಗೋಷ್ಠಿ ನಡೆಸಿ ಬಳಿಕ ಮಾತನಾಡಿದ ಅವರು ದಾವಣಗೆರೆ ಜಿಲ್ಲೆಯಲ್ಲಿ 5 ಜನ ಶಾಸಕರಿದ್ದು ಒಬ್ಬರು ಸಂಸದರಿದ್ದು, ಜಿಲ್ಲೆಗೆ ಮಂತ್ರಿ ಸ್ಥಾನ ಅವಶ್ಯಕವಿದೆ, ರಾಜ್ಯದಲ್ಲಿ ಬಿ.ಎಸ್.ವೈ ಅವರ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಎಲ್ಲಾರಿಗೂ ಮಂತ್ರಿಸ್ಥಾನವನ್ನು ನೀಡಲಾಗಿದೆ. ಅದರಂತಯೇ ನನಗೂ ಕೂಡ ರಾಜಕೀಯ ಸಾಕಾಷ್ಟು ಅನುಭವಿದ್ದು, ಸಚಿವ ಸ್ಥಾನವನ್ನು ನೀಡಿದರೆ ಜಿಲ್ಲೆಯ, ರಾಜ್ಯದ ಅಭಿವೃಧ್ದಿ ಶ್ರಮವಹಿಸಲಾಗುವುದು ಎಂದರು.

     ಉತ್ತರ ಕನಾಟಕದ ಕಲಬುರ್ಗಿಯಲ್ಲಿ ನಡೆಯಲಿರುವ 85 ನೇ ಕನ್ನಡಸಾಹಿತ್ಯ ಸಮ್ಮೇಳನದ ಅದ್ಯಕ್ಷರನ್ನಾಗಿ ನಮ್ಮ ತಾಲ್ಲೂಕಿನ ಹೊದಿಗೆರೆ ಗ್ರಾಮದವರಾದ ಹೆಚ್.ಎಸ್ ವೆಂಕಟಮೂರ್ತಿ ಇವರನ್ನು ಆಯ್ಕೆ ಮಾಡಿರುವುದು ನಮ್ಮ ತಾಲ್ಲೂಕಿಗೆ ಕೀರ್ತಿ ತಂದಿದೆ. ಅವರು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಅವರನ್ನು ಕರೆದು ವಿಜೃಂಭಣೆಯಿಂದ ಗೌರವ ನಿಡಿ ಸನ್ಮಾನ ಮಾಡಲಾಗುವುದು ಎಂದರು.

    ಸಚಿವ ನೀಡುವಂತೆ ,ಮುಖ್ಯಮಂತ್ರಿವರಿಗೆ ಮನವಿ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದರಾದ ಜಿ.ಎಂ ಸಿದ್ದೇಶ್ವರ್ ಅವರಿಗೆ ತಿಳಿಸಲಾಗಿದೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃಧ್ದಿಗೆ ಶ್ರಮಿಸಲಾಗವುದು, ಕಳೆದ ಉಪಚುನಾವಣೆಯಲ್ಲಿ ನಮ್ಮ ಪಕ್ಷ 15 ಕ್ಷೇತ್ರಗಳಲ್ಲೂ ಜಯಗಳಿಸಿದ್ದು ಸರ್ಕಾರ ಸುಭದ್ರವಾಗಿದೆ, ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಯಾವುದೇ ಸಮಸ್ಯೆಯಿಲ್ಲ ಎಂದರು.

     ಚನ್ನಗಿರಿ ತಾಲ್ಲೂಕನ್ನು ದೂಳುಮುಕ್ತ ಮಾಡುವ ಮತ್ತು ತಾಲೂಕಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಬಾರದೆ ಹಾಗೆ ನೀರನ್ನು ಪೂರೈಕೆ ಮಾಡಲು ಪಣ ತೊಡಲಾಗಿದೆ, ಪ್ರತಿಯೊಂದು ಹಳ್ಳಿಗಳಿಗೂ ಮುಖ್ಯ ರಸ್ತೆಯಿಂದ ಸಂಪರ್ಕ ರಸ್ತೆಗಳನ್ನು ಕಲ್ಪಿಸಲಾಗುವುದು.
ಜೊತೆಗೆ ದಿನದ 24 ಗಂಟೆಗಳ ಕಾಲ ವಿದ್ಯತ್ ಸೇರಿದಂತೆ ರೈತರಿಗೆ 8 ಗಂಟೆಗಳ ಕಾಲ ವಿದ್ಯುತ್‍ನ್ನು ಕೊಡಿಸುವಂತಹ ದೊಡ್ಡ ಗುರಿ ಹೊಂದಿದ್ದೆನೆ, ನೀವೆಶನ ಇಲ್ಲದವರಿಗೆ ಸರ್ಕಾರಿ ಜಮೀನುಗಳಲ್ಲಿ ನಿವೇಶನಗಳನ್ನು ನೀಡಲಾಗುವುದು. ಸರ್ಕಾರಿ ಜಮೀನು ಇಲ್ಲದ ಜಾಗದಲ್ಲಿ ಖಾಸಗಿ ಜಮೀನು ಖರೀದಿ ಮಾಡಿ ಅರ್ಹ-ಫಲಾನುಭವಿಗಳಿಗೆ ನಿವೇಶನಗಳನ್ನು ನೀಡಲಾಗುವುದು ಎಂದರು.

    ತಾಲ್ಲೂಕಿನ ಸಂತೆಬೆನ್ನೂರು ಮತ್ತು ನಲ್ಲೂರುಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೆರಿಸಲಾಗುವುದು. ಅದೇ ರೀತಿ ಒಟ್ಟಾರೆ ನಮ್ಮ ವಿಧಾನಸಭಾ ಕ್ಷೇತ್ರವನ್ನಾ ರಾಜ್ಯದ ಜನತೆ ಇತ್ತ ನೊಡುವಂತೆ ಸುಂದರ ತಾಲ್ಲೂಕನ್ನಾಗಿ ಮಾಡಲು ಶ್ರಮವಹಿಸಲಾಗುವುದು. ಈ ಗಾಗಲೇ ಚನ್ನಗಿರಿ ಪಟ್ಟಣವನ್ನು ಸುಂದರವನ್ನಾಗಿಸಲು ಕೋಟಿಗಟ್ಟಲೆ ಅನುದಾನವನ್ನು ತಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ, ಮುಂದಿನ ದಿನಗಳ ಜನತೆಯ ಸಹಕಾರವಿದ್ದರೆ ಹೆಚ್ಚು ಅಭಿವೃಧ್ದಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಈ ವೇಳೆ ದಿಗ್ಗೆನಹಳ್ಳಿ ನಾಗರಾಜ್, ಕ.ಸಾ.ಪ ತಾ|| ಅದ್ಯಕ್ಷ ಎಂ.ಯು ಚನ್ನಬಸಪ್ಪ, ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link