ನಾನು ಪಲಾಯನವಾದಿಯಲ್ಲ : ಕುಮಾರಸ್ವಾಮಿ

ಬೆಂಗಳೂರು

      ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ಮಾತಿಗೆ ಹೆದರಿ ಪಲಾಯನ ಮಾಡುವವನು ನಾನಲ್ಲಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

         ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ರೈತರ ಸಾಲಮನ್ನಾ ಹೆಸರಿನಲ್ಲಿ ವಿವಿಧ ಇಲಾಖೆಗೆ ಬಿಡುಗಡೆಆಗಬೇಕಿದ್ದ ಹಣತಡೆ ಹಿಡಿದಿಲ್ಲ. ಎಲ್ಲಾ ಇಲಾಖೆಗೆ ಸಮರ್ಪಕವಾಗಿ ಬಿಡುಗಡೆಆಗುತ್ತಿದೆ.

        ನಾವು ಉತ್ತಮಯೋಜನೆ ಹಮ್ಮಿಕೊಂಡಿದ್ದು, ಮುಂದಿನ ಸಾರಿಯ ಬಜೆಟ್ ಗೆ ಕೂಡ ಈಗಲೇ ಹಣ ಮೀಸಲಿಟ್ಟಿದ್ದೇನೆ. ಸಿದ್ದರಾಮಯ್ಯ ಅವಧಿಯಲ್ಲಿಘೋಷಿತವಾಗಿದ್ದ ಸಾಲದ ಮೊತ್ತ 3 ಸಾವಿರಕೋಟಿರೂ ಸೇರಿದಂತೆ, ನಾನು ಘೋಷಿಸಿದ್ದ ಸಾಲಮನ್ನಾಕೂಡ ಹಂತ ಹಂತವಾಗಿಜಾರಿಗೆತರುತ್ತಿದ್ದೇನೆ. ಇದರಿಂದ ನನ್ನ ಮಾತು ಉಳಿಸಿಕೊಳ್ಳುತ್ತಿದ್ದು, ಸಮರ್ಥವಾಗಿ ಸರ್ಕಾರ ಮುನ್ನಡೆಸಿಕೊಂಡು ಸಾಗಿದ್ದೇನೆ. ಎಡವುವ ಪ್ರಶ್ನೆಯೇಇಲ್ಲಎಂದರು.

       ಇಸ್ರೇಲ್ ಮಾದರಿ ಕೃಷಿಗೆ ಒತ್ತುಕೊಡಲು 500 ಕೋಟಿರೂ ಮೀಸಲಿಟ್ಟಿದ್ದೇನೆ. ಬತ್ತಡ ಬೆಳೆಗೆ ಉತ್ತೇಜನಕೊಟ್ಟಿದ್ದೇನೆ. ನಮ್ಮನ್ನು ನಂಬಿ, ವಿಶ್ವಾಸಇಡಿ. ನಮ್ಮ ಕೆಲಸಕ್ಕೆ ಸ್ಪಂದನಕೊಡಿಎಂದುರೈತರಿಗೆ ಮನವಿ ಮಾಡಿದರು.

ಪ್ರಧಾನಿ ವಿರುದ್ಧಆಕ್ರೋಶ

        ಇದುವರೆಗೂರೈತರ ಬಗ್ಗೆ ತಲೆ ಕೆಡಿಸಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ರೈತ ಕಾಳಜಿ ತೋರಿಸುತ್ತಿದ್ದಾರೆ. ರೈತರಿಗೆ 6 ಸಾವಿರೂ ನೀಡಲು, ನರೇಗಾಯೋಜನೆಗೆ ನೀಡಬೇಕಿದ್ದ 34 ಸಾವಿರಕೋಟಿತಡೆ ಹಿಡಿದಿದ್ದಾರೆ. ಕೇವಲ 6 ಸಾವಿರಕೋಟಿ ನೀಡಿದ್ದಾರೆ.

         ಉಳಿದ ಹಣಎಲ್ಲಿ? ನಾವು ಹಾಲಿನ ಸಬ್ಸಿಡಿಗೆ ನೀಡಿದ ಮೊತ್ತಇದಕ್ಕಿಂತದೊಡ್ಡದು. ಇಂದುಕೇಂದ್ರ ಸರ್ಕಾರ ರಾಜ್ಯದರೈತರಿಗೆ ಬಿಡುಗಡೆ ಮಾಡುವುದು ಕೇವಲ 2500 ಕೋಟಿಆಗುತ್ತದೆ. ನಾವು ಕೊಡುವ ಸಬ್ಸಿಡಿ 16 ಸಾವಿರಕೋಟಿಆಗುತ್ತದೆ. ನಾನು ತಲೆಯಲ್ಲೇಎಲ್ಲಾತುಂಬಿಕೊಂಡಿದ್ದೇನೆ. ಚೀಟಿ ಹಿಡಿದುಕೊಂಡುಓದಲ್ಲಾ ಎಂದಿ ಬಿಎಸ್ ವೈ ಗೆ ಟಾಂಗ್‍ಕೊಟ್ಟರು.

          ರಾಜ್ಯ ಸರ್ಕಾರದ ಬಜೆಟ್ ನಲ್ಲಿ 46 ಸಾವಿರಕೋಟಿ ಕೃಷಿಗೆ ನೀಡಿದ್ದೇನೆ. ಇದು ಐತಿಹಾಸಿಕ ಮೊತ್ತ ನೀಡಿದ್ದೇನೆ. 24 ಗಂಟೆ ನಿಮ್ಮಚಿಂತೆ ನನಗೆ, ಆದಷ್ಟು ನಮಗೆ ಸಹಕಾರ ನೀಡಿ. ನಿಮಗೆ ಅಗೌರವ ಸೂಚಿಸಿ ನೋವು ಕೊಎಉವವನಲ್ಲ. ನಿಮಗೆ ಸ್ಪಂಧಿಸುತ್ತೇನೆ.

         ಕೊಡಗಿನಕಾಫಿ ಬೆಳೆಗಾರರ ಸಮಸ್ಯೆಗೆ 25 ಸಾವಿರಕೋಟಿ ನೀಡುತ್ತಿದ್ದೇವೆ. ರೈತರ ಪರವಾಗಿಇದ್ದೇವೆ. ಹೆಚ್ವಿನ ಬೆಳೆ ಪರಿಹಾರ ನೀಡಲು ಶ್ರಮಿಸುತ್ತಿದ್ದೇವೆ. ಮತಕ್ಕಾಗಿ ನಾವು ಪ್ರಯತ್ನ ಮಾಡುತ್ತಿಲ್ಲ, ನಿಮ್ಮ ಮೇಲಿನ ಕಾಳಜಿಯಿಂದ ಕೆಲಸ ಮಾಡುತ್ತಿದ್ದೇನೆಎಂದರು.

ಬೆಳೆನಷ್ಟ ಪರಿಹಾರ

        ರಾಜ್ಯದಲ್ಲಿ ಬರ ಕಾಣಿಸಿಕೊಂಡಿದೆ. 33000 ಕೋಟಿ ರೂ.ಬೆಳೆ ನಷ್ಟವಾಗಿದೆ. ಈ ಬೆಳೆ ನಿಮ್ಮ ಕೈಗೆ ಬಂದಿದ್ದರೆ ನಾವು ಸಾಲ ಮನ್ನಾ ಮಾಡುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಕೇಂದ್ರ ಸರ್ಕಾರದವರು ಪ್ರಧಾನಿ ಮೋದಿ ಯಾರೂ ಮಾಡಿಲ್ಲದ ಕೆಲಸ ತಾವು ಮಾಡಿದ್ದೇವೆ.

         ಭರಪೂರ ಹಣ ಬಿಡುಗಡೆ ಮಾಡಿದ್ದೇವೆಎಂದು ಹೇಳಿಕೊಳ್ಳುತ್ತಾರೆ. ಆದರೆ ನಾವು 2000 ಕೋಟಿರೂ ಬರ ಪರಿಹಾರ ಹಣ ಕೇಳಿದ್ರೆ ಮೂರು ತಿಂಗಳ ಹಿಂದೆ 915 ಕೋಟಿರೂ.ಮಂಜೂರು ಮಾಡಿ,ಅದರಲ್ಲಿ 415 ಕೋಟಿರೂ ಮಾತ್ರ ಬಿಡುಗಡೆ ಮಾಡಿದ್ದಾರೆ.ಮಹಾರಾಷ್ಟ್ರಕ್ಕೆ ಮಾತ್ರ 4516 ಕೋಟಿರೂ.ಕೊಟ್ಟಿದ್ದಾರೆ.ಜತೆಗೆ ನರೇಗಾಯೋಜನೆಯ 940 ಕೋಟಿರೂ.

         ನಮಗೆ ಕೇಂದ್ರ ಸರ್ಕಾರದಿಂದ ಬಾಕಿ ಬರಬೇಕು.ಈ ಹಣದಿಂದಲೇ ನಾವು ಕೂಲಿ ಪಾವತಿಸಬೇಕು. ಹಾಗಾಗಿ ಕೇಂದ್ರ ಸರ್ಕಾರಕ್ಕೆಕಾಯದೆರಾಜ್ಯ ಸರ್ಕಾರವೇ 900 ಕೋಟಿರೂ ಬಿಡುಗಡೆ ಮಾಡಿ ಕೃಷಿ ಕಾರ್ಮಿಕರ ಕೂಲಿ ಹಣ ಬಿಡುಗಡೆ ಮಾಡುತ್ತಿದ್ದೇವೆಎಂದರು.

ಕೃಷಿಗೆ ಒತ್ತು

         ಕೃಷಿ ಸಚಿವ ಶಿವಶಂಕರ ರೆಡ್ಡಿ ಮಾತನಾಡಿ, 2.5 ಲಕ್ಷ ಕೃಷಿಹೊಂಡ ಮಾಡಲಾಗಿದೆ. ಹನಿನಿರಾವರಿಯೋಜನೆ ಶೇ.90 ರಷ್ಡುರಿಯಾಯಿತಿಯಲ್ಲಿ, ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ. ಯಂತ್ರೋಪಕರಣಗಳನ್ನು ಬಾಡಿಗೆರೂಪದಲ್ಲಿಕಡಿಮೆ ಬೆಲೆಗೆ ನೀಡಲಾಗ್ತಿದೆ, ಮಣ್ಣು ಪರೀಕ್ಷೆ ಮಾಡುವ ಕೆಲಸ ಆಗಿದೆ. ಶೇ.60 ಭಾಗದಷ್ಟುರಾಜ್ಯದರೈತರು ಮಳೆ ಅವಲಂಬಿತಕೃಷಿಕರು, ಒಣಮಣ್ಣು ಹೊಂದಿದಎರಡನೇದೊಡ್ಡರಾಜ್ಯ. ಕಳೆದ 14 ವರ್ಷದಿಂದ ಮಳೆ ಆಗಿಲ್ಲ.

         ಕಳೆದ ವರ್ಷಕೂಡ 156 ತಾಲ್ಲೂಕು ಬರಪೀಡಿತವಾಗಿದ್ದವು. ಕೇಂದ್ರ ಸರ್ಕಾರಕ್ಕೆ4500 ಕೋಟಿ ಬರ ಪರಿಹಾರಕ್ಕೆ ಮನವಿ ಮಾಡಿದ್ದೆವು, 900 ಕೋಟಿ ಮಾತ್ರ ನೀಡಿದೆ. ಸಮಸ್ಯೆಗಳ ನಡುವೆಯೇ ಸಾಕಷ್ಟು ಕಾಮಗಾರಿ ನಡೆಸಿದ್ದೇವೆ. ನೂರಾರುಕೋಟಿರೂಅನುದಾನವನ್ನು ಬಜೆಟ್ ನಲ್ಲಿ ನೀಡಲಾಗಿದೆ. ರೈತರ ಸಿರಿಧಾನ್ಯಗಳಿಗೆ ಒತ್ತುಕೊಟ್ಟಿದ್ದೇವೆ. ರೈತಸಿರಿ ಕಾರ್ಯಕ್ರಮಕೂಡ ಹಮ್ಮಿಕೊಂಡಿದ್ದೇವೆ.

         ನೈಸರ್ಗಿಕ ಕೃಷಿ ಪದ್ದತಿ ಅನುಷ್ಠಾನಕ್ಕೆ ತರುವಕಾರಗಯಆಗ್ತಿದೆ. ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿರೂ. ನೀಡಿದೆ. ಇಲಾಖೆಗೆ ಅನುಷ್ಠಾನವಾದ ಕಾರ್ಯಕ್ರಮಗಳನ್ನು ಜಾರಿಗೆತರುವಕಾರ್ಯವನ್ನು ಇಲಾಖೆ ಮಾಡುತ್ತಿದೆಎಂದರು.
ಕೃಷಿ ಸಾಧಕರಿಗೆಉತ್ತೇಜಿಸುವ, ಇತರರಿಗೆ ಪ್ರೇರಣೆ ನೀಡುವಉದ್ದೇಶದಿಂದ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದೇವೆ. ಎರಡು ವರ್ಷದಿಂದ ಪ್ರಶಸ್ತಿ ಪ್ರದಾನಆಗಿರಲಿಲ್ಲ. ಇಂದುಅದಕ್ಕೆಅವಕಾಧಕೂಡಿ ಬಂದಿದೆಎಂದರು.

ಪ್ರಶಸ್ತಿ ವಿವರ

         ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಬೆಳೆ ಸ್ಪರ್ಧೆ ನಡೆಸಿ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ನೀಡಲಾಗುತ್ತಿದೆ. ಮೊದಲ ಬಹುಮಾನ 50 ಸಾವಿರರೂ. ನಗದು. ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲುರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಪ್ರಶಸ್ತಿ ನೀಡುತ್ತಿದ್ದೇವೆ. ಕೃಷಿಯಲ್ಲಿ ಸೃಜನಶೀಲ, ವಿಭಿನ್ನ, ಅಪರೂಪದ ಸಾಧನೆ ಮಾಡಿದ ಹಾಗೂ ಸಂಶೋಧನೆ ಮಾಡಿದ ಸಾಧಕರಿಗೆ, ಕೃಷಿ ಸಾಧನೆಗೆ ಶ್ರಮಿಸಿದ ಸಾಧಕರಿಗೆ 1.25 ಲಕ್ಷ ಪ್ರಥಮ, 1 ಲಕ್ಷ ದ್ವಿತೀಯ ಹಾಗೂ 75 ಸಾವಿರರೂ. ತೃತೀಯ ಸ್ಥಾನ ಪಡೆದರೈತರಿಗೆ ನಗದು ಪ್ರಶಸ್ತಿ ನೀಡಿರೈತರನ್ನುಗೌರವಿಸುತ್ತೇವೆ.

         ಇಂದು ಸಮಾರಂಭದಲ್ಲಿ ಶೇಂಗಾ (ಕಡಲೆಕಾಯಿ), ಸಜ್ಜೆ, ನವಣೆ, ರಾಗಿ ಸೇರಿದಂತೆ ವಿವಿಧ ಬೆಳೆ ಸಚಿವರಾದ ಪರಮೇಶ್ವರ್ ನಾಯಕ್, ಸಾರಾ ಮಹೇಶ್, ರಹೀಂಖಾನ್, ಮುಖಂಡಕೋನರೆಡ್ಡಿ, ಅಪರ ಕೃಷಿ ನಿರ್ದೇಶಕರಾದ ಶಿವರಾಜ್, ದಿವಾಕರ್, ಅಧಿಕಾರಿ ಬೃಜೇಶ್‍ಕುಮಾರ್ , ಬೆಂಗಳೂರು ಕೃಷಿ ವಿವಿ ಉಪಕುಲಪತಿರಾಜೇಂದ್ರ ಪ್ರಸಾದ್, ಧಾರವಾಡ ಕೃಷಿ ವಿವಿ ಉಪಕುಲಪತಿ ಶೆಟ್ಟಿ, ಪ್ರಗತಿಪರರೈತರಾಮಯ್ಯ, ಪ್ರಶಸ್ತಿ ವಿಜೇತ 21 ಮಂದಿ ಭಾಗವಹಿಸಿದ್ದರು.2016-17 ಹಾಗೂ 17-18 ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap