ನನ್ನ-ಶಾಮನೂರು ಮಧ್ಯೆ ಭಿನ್ನಾಭಿಪ್ರಾಯಗಳಿವೆ

ದಾವಣಗೆರೆ:

       ವೀರಶೈವ-ಲಿಂಗಾಯತ ವಿಚಾರಕ್ಕೆ ಸಂಬಂಧಿಸಿದಂತೆ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ನನ್ನ (ಎಂ.ಬಿ.ಪಾಟೀಲ್) ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.

        ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪನವರು ನಮ್ಮ ತಂದೆ ಸಮಾನರಾಗಿದ್ದಾರೆ. ಅವರಿಗೆ ಮಲ್ಲಿಕಾರ್ಜುನ್, ಬಕ್ಕೇಶ್, ಗಣೇಶ್ ಅವರಂತೆಯೇ ನಾನು ಸಹ ಮಗನ ಸಮ ಇದ್ದೇನೆ. ಆದರೆ, ವೀರಶೈವ-ಲಿಂಗಾಯತ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದರು.

       ಧಾರ್ಮಿಕ ವಿಚಾರದ ಹಿನ್ನೆಲೆಯಲ್ಲಿ ನಮ್ಮ ಅಸ್ಮಿತೆಯೇ ಬೇರೆಯಾಗಿದೆ. ಲಿಂಗಾಯತ ನನ್ನ ಅಸ್ಮಿತೆಯಾಗಿದ್ದು, ಲಿಂಗಾಯತ ಧರ್ಮ ಮತ್ತು ಸಂಸ್ಕೃತಿ ಜಾಗತೀಕವಾಗಿ ಹೊರಹಮ್ಮಬೇಕೆನ್ನುವುದೇ ನನ್ನ ಆಶಯವಾಗಿದೆ ಎಂದರು.

       ನಾನು ಈಗ ಗೃಹ ಸಚಿವನಾಗಿರುವ ಕಾರಣ ಈಗ ಮೊದಲಿನಂತೆ ಜಗಳಕ್ಕೆ ಹೋಗಲ್ಲ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮಾಡಿದ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ನಮ್ಮ ಜಾಗತೀಕ ಲಿಂಗಾಯತ ಮಹಾಸಭಾದ ಜಾಮ್ದಾರ್ ಮತ್ತಿತರರು, ಈ ವಿಷಯವಾಗಿ ಕೋರ್ಟ್‍ಗೆ ಹೋಗಬೇಕೋ ಬೇಡವೋ ಎಂಬುದರ ಬಗ್ಗೆ ನಿರ್ಧರಿಸಲಿದ್ದಾರೆಂದು ಹೇಳಿದರು.

       12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದ ಅನುಭವ ಮಂಟಪದ ಪರಿಕಲ್ಪನೆಯಲ್ಲಿ ಅನೇಕ ಜಾತಿಗಳು ಒಗ್ಗೂಡಿ ಲಿಂಗಾಯತ ಧರ್ಮವಾಗಿತ್ತು. ಆದರೆ, ಕಾಲ ಕ್ರಮೇಣ ಈಗ ಅವು ಬೇರೆ, ಬೇರೆ ಜಾತಿಗಳಾಗಿ ಮಾರ್ಪಟ್ಟಿವೆ. ಈಗಲೂ ಸಹ ಇಷ್ಟಲಿಂಗ ಹಿಡಿದು ಲಿಂಗಾಯತ ಧರ್ಮಕ್ಕೆ ಬರುವವರಿಗೆ ಸ್ವಾಗತವಿದೆ ಎಂದರು.

        ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‍ಗೆ ಸೀಟು ಬಿಟ್ಟುಕೊಟ್ಟಿದ್ದರೇ, ನಟಿ ಸುಮಲತ ಅವರು ಕಣಕ್ಕಿಳಿಸುವ ಪ್ರಶ್ನೆ ಉದ್ಭವವಾಗುತಿತ್ತು. ಆದರೆ, ಮಂಡ್ಯವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವ ಆ ಪ್ರಶ್ನೆಯೇ ಬರುವುದಿಲ್ಲ. ಇನ್ನೂ ಸುಮಲತಾರವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಅವರ ವೈಯಕ್ತಿಕ ನಿರ್ಧಾರವಾಗಿದೆ ಎಂದರು.

        ದೇವೇಗೌಡರ ಮಕ್ಕಳು, ಮರಿಮಕ್ಕಳ ಕುಟುಂಬ ರಾಜಕಾರಣದ ಬಗ್ಗೆ ಪ್ರತಿಕ್ರಯಿಸಿದ ಎಂ.ಬಿ.ಪಾಟೀಲ್, ಯಡಿಯೂರಪ್ಪನ ಮಕ್ಕಳು, ಸಿದ್ದರಾಮಯ್ಯರ ಮಗ ರಾಜಕಾರಣ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದರು.

        ಮೋದಿ ಅವರನ್ನು ಗುಂಡಿಟ್ಟು ಹೊಡೆಯಬೇಕೆಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿರುವ ಹೇಳಿಕೆಯ ಬಗ್ಗೆ ಸತ್ಯಾಸತ್ಯತೆ ತಿಳಿಯಬೇಕು. ಪ್ರಧಾನಮಂತ್ರಿಯೇ ಆಗಿರಲಿ, ಈ ದೇಶದ ಜನಸಾಮಾನ್ಯರೇ ಆಗಿರಲಿ ಅವರನ್ನು ಕೊಲ್ಲಬೇಕು. ಹತ್ಯೆ ಮಾಡಬೇಕೆಂಬುದಾಗಿ ಹೇಳುವುದು ಸರಿಯಲ್ಲ. ಬೇಳೂರು ಹಾಗೇ ಮಾತನಾಡಿದರೇ, ನಾನು ತೀವ್ರವಾಗಿ ಖಂಡಿಸುತ್ತೇನೆ. ಆ ಹೇಳಿಕೆ ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link