ಪಕ್ಷಾತೀತವಾಗಿ ಕೆಲಸ ಮಾಡಲು ಅವಕಾಶ ಒದಗಿ ಬಂದಿದೆ :ಜಯಶ್ರೀ ಪಿ.ಎ

ಪಾವಗಡ;-

       ಪಕ್ಷಾತೀತವಾಗಿ ಜನಸಮಾನ್ಯರ ಸೇವೆ ಮಾಡಲು ಅವಕಾಶ ಬಂದಿದ್ದು,ಪಕ್ಷರಹಿತವಾಗಿ ನಾನು ಕೆಲಸ ಮಾಡಲು ವಾರ್ಡ್‍ನ ಮತಭಾಂದವರು ಅನಿಸಿಕೆಯಂತೆ ನಾನು ಸ್ವರ್ದೆಸಿದ್ದೇನೆ ಎಂದು ಸ್ವತಂತ್ಯ್ರ ಅಭ್ಯರ್ಥಿ ಜಯಶ್ರೀ ಪಿ.ಎ ರವರು ತಿಳಿಸಿದ್ದಾರೆ.

     ಶುಕ್ರವಾರ ಪುರಸಭೆ ಚುನಾವಣೆ 9 ನೇ ವಾರ್ಡ್ (ಎಸ್.ಸಿ) ಮಹಿಳಾ ಮೀಸಲಾತಿಗೆ ಬಂದಿಂದ್ದು,ಈ ವಾರ್ಡ್‍ನಲ್ಲಿ ಮತ ಪ್ರಚಾರದಲ್ಲಿ ತೊಡಗಿದ್ದ ಜಯಶ್ರೀ ಮಾತನಾಡಿ ಜೆ.ಡಿ.ಎಸ್ ಪಕ್ಷದಲ್ಲಿ ನಮ್ಮ ತಾಯಿ ಸುಮಾರು 25 ವರ್ಷಗಳಿಂದ ಸಕ್ರಿಯವಾಗಿ ಪಕ್ಷದ ಸಿದ್ದಾಂತಗಳನ್ನು ರೂಡಿಸಿಕೊಂಡು ಬಂದಿದ್ದು,ಪಕ್ಷದಲ್ಲಿ ನಿಷ್ಠಾವಂತ ಕಾರ್ಯಾಕರ್ತರನ್ನು ಕಡೆಗಣಿಸಿ ಬೇರೆಯವರಿಗೆ ಟಿಕಿಟ್ ನೀಡಿದ್ದು,ಕಾರಣ ನಮ್ಮ ತಾಯಿ ಬದಲಾಗಿ ಇಲ್ಲಿ ನಾನು ಪದವಿದಾರಳಾಗಿದ್ದು,ಈ ವಾರ್ಡ್‍ನ ಸಮಸ್ಯೆಗಳನ್ನು ಅರಿತು ಮೂಲಭೂತಗಳಿಂದ ವಂಚಿತವಾದ ವಾರ್ಡ್‍ಗೆ ಸೌಲಭ್ಯ ಹೊದಿಗಿಸಲು ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ದಿಸಿದ್ದು,ಮತದಾರರು ಸಹ ನನ್ನಗೆ ಬೆಂಬಲ ನೀಡುತ್ತಿದ್ದಾರೆ,ಅವರ ಆಸೆ ಆಕ್ಷಾಂಕ್ಷೆಗಳ ಕನಸ್ಸು ನನಸ್ಸು ಮಾಡಲು ನಾನು ಸರ್ಧಿಸಿದ್ದೇನೆ ಎಂದು ತಿಳಿಸಿದ್ದರು.

        ಕೆಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಹಣದ ಆಸೆ ಮತದಾರರಿಗೆ ತೋರಿಸಿ ಹಣ ಖರ್ಚು ಮಾಡಿ,ಜಯಗಳಿಸಿ ಹಣ ಮಾಡಲು ಬರುತ್ತಾರೆ,ನನ್ನಗೆ ಹಣದ ಆಸೆಯಿಲ್ಲ,ಸದಸ್ಯರಾದರೆ ಜನರಿಗೆ ಏನು ಸೌಲಭ್ಯ ಕೊಡಿಸಬಹುದು ಎಂದು ತೋರಿಸಲು ನಾನು ಇಂದು ಪುರಸಭೆಯ ಚುನಾವಣೆಯಲ್ಲಿ ಸ್ವರ್ದೆಸಿದ್ದೇನೆ ಎಂದಿದ್ದಾರೆ.

      ಈ ವಾರ್ಡ್‍ನಿಂದ ಎಷ್ಟೋ ಸದಸ್ಯರು ಆಯ್ಕೆ ಅಗಿ ಹೋಗಿದ್ದಾರೆ ರಸ್ತೆ,ಚರಂಡಿ ವ್ಯವಸ್ಥೆ,ಸ್ವಚ್ಚತೆ ಇಲ್ಲದೆ ದುರುವಾಸನೆ ಬೀರುತ್ತಿದ್ದು,ಮುಖ್ಯವಾಗಿ ಕುಡಿಯುವ ನೀರಿನ ಅಹಾಕಾರ ಎದ್ದಿದೆ,ಈ ವಾರ್ಡ್‍ನಲ್ಲಿ ಹಚ್ಚಿನದಾಗಿ ಕಡಬಡವರು ಹಾಗೂ ಕೂಲಿ ಕಾರ್ಮಿಕರು ವಾಸವಾಗಿದ್ದು,ಹಣ ಕೊಟ್ಟು ನೀರು ಕೊಂಡುಕೊಳ್ಳಲು ಹಣವಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು,ಇಂತಹ ವಾರ್ಡ್‍ನಲ್ಲಿ ನಾನು ಸ್ವರ್ಧೆಸಿದ್ದೇನೆ ಮತದಾರರು ಮತ ನೀಡಿದರೆ ತಮ್ಮ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದರು.

      ಈ ಹಿಂದೆ ಪುರಸಭೆ ಸದಸ್ಯರು ಸರಿಯಾದ ರೀತಿಯಲ್ಲಿ ವಾರ್ಡ್‍ನ ಜನತೆಗೆ ಸ್ವಂದಿಸಲ್ಲ,ವಾರ್ಡ್‍ನಲ್ಲಿ ಸಮಸ್ಯೆಗಳು ಇದ್ದು,ಇಂತಹ ಸಮಸ್ಯೆಗಳನ್ನು ಪ್ರಶ್ನೆಸಲು ನಮ್ಮಂತ ವಿದ್ಯಾವಂತರು ಸದಸ್ಯರಾಗಿ ಕುಳಿತಾಗ ಮಾತ್ರ ಪರಿಹಾರ ಮಾಡಲು ಸಾಧ್ಯ ಎಂದು ತಿಳಿಸಿದರು.
ದಲಿತ ಮುಖಂಡ ಸುಬ್ರಮಣ್ಯಂ ಮಾತನಾಡಿ ಸುಮಾರು ವರ್ಷಗಳಿಂದ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತನೀಡಿ ಯಾವುದೇ ಅಭಿವೃದ್ಧಿ ಅಗದ ಕಾರಣ ರಾಜಕೀಯ ರಹಿತವಾಗಿ ಕೆಲಸ ಮಾಡಲು ವಿದ್ಯಾವಂತ ಯುವ ತಿಯನ್ನು ನಿಲ್ಲಿಸಿ,ಮತ ಪ್ರಚಾರ ಮಾಡುತ್ತಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಮುತ್ಯಾಲಮ್ಮ,ವೆಂಕಟಲಕ್ಷ್ಮಮ್ಮ,ಜಯಮ್ಮ, ಗಂಗಮ್ಮ, ಕಮಲಮ್ಮ,ಮನೋಜ್,ಮಚ್ಚೂರಿ,ಅಜೀತ್,ಮಂಜು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link