ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ : ರಜನಿಕಾಂತ್

ಚೆನ್ನೈ:

        ಅಭಿಮಾನಿಗಳ ಪಾಲಿನ ಸ್ಟೈಲ್ ದೇವರು ರಜನಿ ಇಂದು ತಮ್ಮ ರಾಜಕೀಯ ಜೀವನದ ಕುರಿತು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ.

         ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವಾಗಲಿ ತಮ್ಮ ಪಕ್ಷವಾಗಲಿ ಸ್ಪರ್ಧಿಸುವುದಿಲ್ಲ ಎಂದು ನಟ ಹಾಗೂ ರಾಜಕಾರಣಿ ರಜನಿಕಾಂತ್ ಇಂದು ಸ್ಪಷ್ಪಪಡಿಸಿದ್ದಾರೆ ಮತ್ತು ಮಾಧ್ಯಮಗಳು ಪ್ರಚಾರಕ್ಕಾಗಿ ತಮ್ಮ ಪಕ್ಷದ ಚಿಹ್ನೆ ಹಾಗೂ ಭಾವಚಿತ್ರವನ್ನು ಬಳಸದಂತೆ ಅವರು ಎಚ್ಚರಿಕೆ ನೀಡಿದ್ದಾರೆ.

        ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಯಾವುದೇ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ಆದ್ದರಿಂದ ರಜನಿ ಪ್ಯಾನ್ ಕ್ಲಬ್ ಮತ್ತು ರಜನಿ ಮಕ್ಕಳ್ ಮಂದ್ರಾಮ್  ಹೆಸರಿನಲ್ಲಿ  ತಮ್ಮ ಪೋಟೋ ಹಾಗೂ ಧ್ವಜಗಳನ್ನು ಯಾವುದೇ ಪಕ್ಷದ ಬೆಂಬಕ್ಕಾಗಿ ಅಥವಾ ಪ್ರಚಾರಕ್ಕಾಗಿ ಬಳಸದಂತೆ ಅವರ ಹೇಳಿದ್ದಾರೆ.ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೇಂದ್ರದಲ್ಲಿ ಈ ವಿಚಾರವನ್ನು ಬಗೆಹರಿಸುವ ನಂಬಿಕೆ ಇರುವ ಪಕ್ಷಕ್ಕೆ ಜನತೆ ಮತ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap