ತಿಪಟೂರು
ತಿಪಟೂರಿನ ಎ.ಪಿ.ಎಂ.ಸಿ.ಯಲ್ಲಿ ಇನ್ನು ಮುಂದೆ ಯಾವುದೇ ಅಕ್ರಮವಾಗಲು ಬಿಡುವುದಿಲ್ಲವೆಂದು ನೂತನ ಎ.ಪಿ.ಎಂ.ಸಿ ಅಧ್ಯಕ್ಷ ಎಂ.ಬಿ.ಲಿಂಗರಾಜು ತಿಳಿಸಿದರು.
ನಗರದ ಎ.ಪಿ.ಎಂ.ಸಿಯ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಏಷ್ಯಾದಲ್ಲೆ ದೊಡ್ಡದಾದ ತಿಪಟೂರು ಎ.ಪಿ.ಎಂ.ಸಿ. ಕೊಬ್ಬರಿ ಮಾರುಕಟ್ಟೆಯಲ್ಲಿ ವಿಶ್ವದಲ್ಲೇ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆದರೆ ಯಾರೋ ಕೆಲವರು ಮಾಡುವ ಕೆಟ್ಟಕೆಲಸದಿಂದ ಕಲ್ಪತರು ಕೊಬ್ಬರಿಗೆ ಅವಮಾನವಾಗುವಂತೆ ಮಾಡುತ್ತಿದ್ದಾರೆ.
ಇನ್ನುಮುಂದೆ ಯಾವುದೇ ಅಕ್ರಮವಾಗಲು ಬಿಡುವುದಿಲ್ಲ ಮತ್ತು ನಂಬರ್ -02 ಕೊಬ್ಬರಿಯು ಯಾವುದೇ ಕಾರಣಕ್ಕೂ ಮಾರುಕಟ್ಟೆಯಿಂದ ಹೊರಹೋಗಲು ಬಿಡುವುದಿಲ್ಲ. ಹಾಗೇನಾದರೂ ಯಾವುದೇ ಅಕ್ರಮವಾದರೆ ಸೂಕ್ತದಾಖಲೆಗಳನ್ನು ಕೊಟ್ಟರೆ ಅವರ ಮೇಲ ನಿರ್ದಾಕ್ಷಿಣ್ಯ ಕ್ರಮತೆಗೆದುಕೊಂಡು ಸೂಕ್ತವಾದ ತೆರಿಗೆಯನ್ನು ಕಟ್ಟಿಸಲಾಗುವುದೆಂದು ಮತ್ತು ನೂತವಾಗಿ 350 ಲಕ್ಷ ರೂಗಳ ವೆಚ್ಚದಲ್ಲಿ ಹೊಸ ಆಡಳಿತ ಕಚೇರಿಯನ್ನು ನಿರ್ಮಿಸಲಾಗುವುದೆಂದು ಹಾಗೂ ಅವಶ್ಯಕವಿರುವ ಎಲ್ಲಾ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ತಯಾರಿಸಲಾಗುವುದೆಂದು ತಿಳಿಸಿದರು.
ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ರವೀಶ್‍ರವರು ಕೆಲವರು ಹೇಳುವಂತೆ ನಂಬರ್-02 ಕೊಬ್ಬರಿ ಮಾರುಕಟ್ಟೆಯಿಂದಲೇ ರವಾನೆಯಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೆ 2018-19ನೇ ಸಾಲಿನಲ್ಲಿ ಸುಮಾರು 15 ಕೋಟಿ ಸೆಸ್ ಬಂದಿದ್ದು ವ್ಯವಹಾರ 900 ರಿಂದ 1000 ಕೋಟಿ ವಹಿವಾಟು ನಡೆಯುತ್ತದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಎ.ಪಿ.ಎಂ.ಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್, ಕೊಬ್ಬರಿ ವರ್ತಕರ ಸಂಘದ ಜಯೇಶ್ ಮೆಹ್ತಾ ಭಾಗವಹಿಸಿದ್ದರು.