ಕಾಶ್ಮೀರ ವಿಷಯವಾಗಿ ನಾನು ಏನನ್ನು ಹೇಳುವುದಿಲ್ಲ : ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು:

    ಸಂವಿಧಾನದ 370ನೇ ವಿಧಿ ರದ್ದತಿ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ.ಏನಾದರು ಹೇಳಿ ಪಕ್ಷಕ್ಕೆ ತೊಂದರೆಯಾಗು ವಂತೆ ಮಾಡುವುದಿಲ್ಲ.ನಾನು ಪ್ರಧಾನಿ ಆದಾಗ ಏನು ಕೆಲಸ ಮಾಡಿದ್ದೆ ಎನ್ನುವುದನ್ನು ಲೋಕಸಭೆಯಲ್ಲಿ ಮಾತನಾಡಿದ್ದೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

     ಇಲ್ಲಿನ ಜೆ.ಪಿ.ಭವನದ ಪಕ್ಷದ ಕಚೇರಿಯಲ್ಲಿ ಪರಿಶಿಷ್ಟ ಜಾತಿ,ಪಂಗಡ ಸಮುದಾಯ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪ್ರಧಾನಿಯಾಗಿದ್ದಾಗ ಐದು ಬಾರಿ ಕಾಶ್ಮೀರಕ್ಕೆ ಹೋಗಿ, ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದೇನೆ. ಯಾವುದೇ ಗಲಾಟೆಗೆ ಆಸ್ಪದ ಕೊಡದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇನೆ.ಈಗ ಕ್ಲೀನ್ ಕಾಶ್ಮೀರ್, ಕ್ಲೀನ್ ಇಂಡಿಯಾ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.ನಾನು ಇನ್ನೂ ಐದು ವರ್ಷ ಇರುತ್ತೇನೆ ಎಂಬ ಭಾವನೆ ಇದೆ. ಅವರು ಏನು ಮಾಡುತ್ತಾರೆ ಎಂಬುದನ್ನು ನೋಡೋಣ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ನಡೆಗೆ ಕುಟುಕಿದ್ದಾರೆ.

      ಇನ್ನು ಕುಮಾರಸ್ವಾಮಿ ಅವರು ಪ್ರವಾಹಪೀಡಿತ ಭಾಗಕ್ಕೆ ಪ್ರವಾಸ ಕೈಗೊಳ್ಳುತ್ತಾರೆ.ವೈಮಾನಿಕ ಸರ್ವೆ ಮಾಡೋಕೆ ಹೇಳುತ್ತೇನೆ ಎಂದು ಉತ್ತರ ಕರ್ನಾಟಕದ ಪ್ರವಾಹ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು.ಇದೇ ವೇಳೆ 370 ವಿಧಿ ರದ್ದು ಖಂಡಿಸಿದ ಸಿದ್ದರಾಮಯ್ಯ: ಕೇಂದ್ರ ಸರ್ಕಾರ 370ನೇ ವಿಧಿ ರದ್ದುಪಡಿಸಿರುವ ಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.

      ಸಮ್ಮಿತಿಯಿಂದ ಮಾಡುವುದನ್ನು ಒಪ್ಪುತ್ತೇವೆ. ಒಬ್ಬರ ಆಸಕ್ತಿಯಿಂದ ಮಾಡಿದ್ದನ್ನು ಹಕ್ಕು ಎಂದು ಸಮರ್ಥಿಸಲು ಸಾಧ್ಯವಿಲ್ಲ.ಅಲ್ಲಿ ಸರ್ಕಾರ ರಚನೆಗೆ ಜನರ ಸಮ್ಮಿತಿ ಸಿಕ್ಕಿರಬಹುದು. 70ನೇ ವಿಧಿ ರದ್ದತಿಗೆ ಒಪ್ಪಿಗೆ ಸಿಕ್ಕಿಲ್ಲ ಎಂದು ಕಿಡಿಕಾರಿದರು.ಭಯೋತ್ಪಾದನೆ ತಪ್ಪಿಸುವುದೇ ನಿಮ್ಮ ಆದ್ಯತೆ ಆಗಿದ್ದರೆ,ಕಾನೂನು ಸುವ್ಯವಸ್ಥೆ ಕಾಪಡುವುದಕ್ಕೆ 370ನೇ ವಿಧಿ ರದ್ದು ಮಾಡಿದ್ದು ಏಕೆ? ಹೆಚ್ಚು ವರಿ ಸೈನ್ಯವನ್ನ ಅಲ್ಲಿಗೆ ಕಳುಹಿಸಿ ವ್ಯವಸ್ಥೆ ಹಿಡಿತಕ್ಕೆ ಪಡೆದಿದ್ದು ಮೋದಿ ಸರ್ವಾಧಿಕಾರಿ ಧೋರಣೆ ಅಲ್ಲವೇ?ಎಂದು ಮತ್ತೊಮ್ಮೆ ಮೋದಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap