ನಾನು ರಾಜಕೀಯದ ಬಗ್ಗೆ ಮಾತನಾಡಲ್ಲ: ಎಸ್ ಎಂ ಕೃಷ್ಣ

ಬೆಂಗಳೂರು

       ಕುಮಾರಕೃಪ ರಸ್ತೆಯ ಚಿತ್ರಕಲಾ ಪರಿಷತ್‍ನಲ್ಲಿ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಕೆ.ಆರ್.ಮಾರುಕಟ್ಟೆಯಲ್ಲಿ ವಸ್ತು ವೈವಿದ್ಯಗಳ ಮೇಲೆ, ಕತ್ತಲಲ್ಲಿ ಓಡಾಡುತ್ತಿರುವ ಜನಸಾಮಾನ್ಯರ ಮೇಲೆ ಆಗಿಂದಾಗ್ಗೆ ಬೀಳುವ ವಾಹನದ ಬೆಳಕನ್ನಾಧರಿಸಿ ಚಿತ್ರಿಸಿರುವ ಕತ್ತಲೆಯ ಮೇಲೆ ಬೆಳಕಿನಾಟದ ಛಾಯಚಿತ್ರಗಳ ಪ್ರದರ್ಶನವು ಸೋಮವಾರದಿಂದ ಆರಂಭಗೊಂಡಿದೆ.

         ಖ್ಯಾತ ಛಾಯಾಚಿತ್ರ ಗ್ರಾಹಕ ವೆಂಕಟೇಶ್ ಅವರು ಸೆರಹಿಡಿದಿರುವ ಚಿತ್ರಗಳ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿಎಸ್.ಎಂ. ಕೃಷ್ಣ ಅವರು ರಾಜಕೀಯದ ಬಗ್ಗೆ ಮಾತನಾಡಲಿಲ್ಲ ನಾನು ಚಿತ್ರ ಪ್ರದರ್ಶನ ಉದ್ಘಾಟನೆ ಬಂದಿದ್ದೇನೆ ಅದರ ಬಗ್ಗೆ ಮಾತ್ರ ಮಾತನಾಡುವೆ ಎಂದರು.

         ಕೃಷ್ಣರಾಜ ಮಾರುಕಟ್ಟೆಯ ಈ ಛಾಯಾಚಿತ್ರಗಳು ನನ್ನ ಕಾಲೇಜು ದಿನಗಳನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದೆ. ನನ್ನ ಕೆಲ ಅವಶ್ಯಕ ವಸ್ತುಗಳನ್ನು ನಾನು ವಿದ್ಯಾರ್ಥಿಯಾಗಿದ್ದಾಗ ಖರೀದಿಸಲು ಮಾರುಕಟ್ಟೆಗೆ ತೆರಳುತ್ತಿದ್ದೆ. ಅಂದಿನ ಮಾರುಕಟ್ಟೆಗೂ ಇಂದಿನ ಮಾರುಕಟ್ಟೆಗೂ ಸಾಕಷ್ಟು ವ್ಯತ್ಯಾಸವಿದೆ.ಜನಸಂದಣಿ ವಾಹನಗಳ ಸಂಚಾರ ಅತಿ ಹೆಚ್ಚಾಗಿದೆ. ಜನಸಂಖ್ಯೆಗನುಗುಣವಾಗಿ ಮೂಲಭೂತ ಸೌಲಭ್ಯ ಅಭಿವೃದ್ಧಿಯಾಗಿಲ್ಲ ಎಂದು ವಿಷಾದಿಸಿದರು.

          ಐಟಿ ಬಿಟಿ ವಿಷಯದಲ್ಲಿ ಬೆಂಗಳೂರು ನಗರ ವಿಶ್ವದಲ್ಲಿ ಹೆಸರುವಾಸಿಯಾಗಿದೆ. ಆ ಹೆಸರನ್ನು ವಿಶ್ವಮಟ್ಟದಲ್ಲಿ ಹಾಗೆಯೇ ಮುಂದುವರೆಸಲು ಬೆಂಗಳೂರಿನಲ್ಲಿ ಹೆಚ್ಚು ಹೆಚ್ಚು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಾಗಬೇಕು. ವೆಂಕಟೇಶ್ ಅವರು ಮಾರುಕಟ್ಟೆ ಚಿತ್ರಗಳನ್ನು ಅತ್ಯದ್ಭುತವಾಗಿ ಚಿತ್ರೀಕರಿಸಿದ್ದಾರೆ. ಚಿತ್ರಗಳನ್ನು ವೀಕ್ಷಿಸಿ ನನ್ನ ಮನಸ್ಸಿಗೆ ಉಲ್ಲಾಸವಾಗಿದೆ ಎಂದು ಅಭಿಪ್ರಾಯಪಟ್ಟರು.

ಮಾರುಕಟ್ಟೆ ದೃಶ್ಯ

        ಕಪ್ಪು ಬಿಳುಪಿನಲ್ಲಿ ಸೆರೆಹಿಡಿದ ಛಾಯಾಗ್ರಾಹಕ ವೆಂಕಟೇಶ್ ಅವರ ಚಿತ್ರ ಸಂಗ್ರಹ ಕತ್ತಲಿನ ನೆರಳುಗಳಲ್ಲಿ ಸಾಮಾನ್ಯ ಜನರ ಹಾಗೂ ಅವರ ಸರಕು ಸಾಮಗ್ರಿಗಳ ಮೇಲೆ ತನ್ನ ಪ್ರಭಾವ ಬೀರುವ ವಸ್ತು ಸ್ಥಿತಿ ಪರಿಸ್ಥಿತಿ ಬಿಂಬಿಸುವ ಸ್ವರೂಪಗಳನ್ನು ಅದ್ಭುತವಾಗಿ ಅಭಿವ್ಯಕ್ತಿಸಿದೆ.

         ಕೆಳ ಭಾಗದಲ್ಲಿ ಮಾರುಕಟ್ಟೆಯ ಅಡ್ಡರಸ್ತೆಗಳ ಹಾಗೂ ಇನ್ನಿತರ ಮೂಲೆಮೂಲೆಗಳಲ್ಲೂ ಕಂಡುಬರುವ ಜನಸಾಮಾನ್ಯರು, ವಾಹನದ ಓಡಾಟಗಳು ಮಂದಗತಿಯಲ್ಲಿ ಚಲಿಸುವ ವಾಹನಗಳ ದೀಪಗಳಿಂದ ಹೊರಹೊಮ್ಮುವ ಬೆಳಕು ಕೈಗಳಲ್ಲಿ ಹಿಡಿದಿರುವ ತಲೆ, ಭುಜದ ಮೇಲೆ ಹೊತ್ತಿರುವ ಮೂಟೆಗಳು, ಚೀಲಗಳ ಮೇಲೆ ಬೀಳುವ ಬೆಳಕನ್ನಾಧರಿಸಿ ತೆಗೆದಿರುವ ಛಾಯಾಚಿತ್ರಗಳು ನೋಡುಗರ ಮನಸ್ಸನ್ನು ಸರೆಗೊಳ್ಳುತ್ತಿವೆ.

       ಉಳಿದಂತೆ ಸಂಚಾರ ನಿಯಮ ಪಾಲಿಸದ, ಜನದಟ್ಟಣೆ ನಿರ್ವಹಣೆ ಇಲ್ಲದ ಪ್ರದೇಶಗಳು, ಆಟೋಗಳು, ಸ್ಕೂಟರ್‍ಗಳು, ದನಕರುಗಳು, ಅಲ್ಲೇ ಸುತ್ತುವ ಬೀದಿ ನಾಯಿಗಳು, ದಿನನಿತ್ಯ ಬರುವ ಜನರೊಂದಿಗಿನ ಅವುಗಳ ಒಡನಾಟ, ಬಂಡಿ ಹೋಟಲ್‍ಗಳು , ತರಕಾರಿ, ಹೂ ಮಾರಾಟ ಇವೆಲ್ಲವನ್ನು ಬಹಳ ಅಚ್ಚುಕಟ್ಟಾಗಿ ಕಪ್ಪು-ಬಿಳುಪಿನ ಚಿತ್ರಗಳಲ್ಲಿ ಸೆರೆಹಿಡಿಯಲಾಗಿತ್ತು. ಛಾಯಾಚಿತ್ರ ಗ್ರಾಹಕ ಚಿತ್ರಿಸಿರುವ 45ಕ್ಕೂ ಹೆಚ್ಚು ಮಾರುಕಟ್ಟೆ ದಿನನಿತ್ಯದ ಜೀವನವನ್ನು ಬಿಂಬಿಸುವ ಚಿತ್ರಗಳನ್ನು ಪ್ರದರ್ಶಿಸಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap