ಜನತೆಗೆ ಪ್ರಾಮಾಣಿಕವಾಗಿ ಸೌಲಭ್ಯ ಒದಗಿಸುತ್ತೇನೆ : ಎಂ.ವಿ.ವೀರಭದ್ರಯ್ಯ

ಮಧುಗಿರಿ

        ಕ್ಷೇತ್ರದ ಜನರಿಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

       ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಎಮ್ಮೆತಿಮ್ಮನಹಳ್ಳಿ ಗ್ರಾಮದಲ್ಲಿ 4 ಕೋಟಿ ರೂ. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಈಗಾಗಲೇ ಕ್ಷೇತ್ರದ ಅಭಿವೃದ್ದಿಗೆ 40 ಕೋಟಿ ರೂ. ಬಿಡುಗಡೆಯಾಗಿದೆ. ಟೆಂಡರ್ ಮುಗಿಯುವ ಹಂತದಲಿದ್ದು, ಶೀಘ್ರವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು. ಶಾಸಕರ ಅನುದಾನದ ಅಡಿಯಲ್ಲಿ ಎಮ್ಮೆತಿಮ್ಮನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ 4 ಲಕ್ಷ ರೂ. ಮಂಜೂರು ಮಾಡಿದೆ ಎಂದು ತಿಳಿಸಿದರು.

       ಲೋಕೋಪಯೋಗಿ ಇಲಾಖೆಯ ಇಇ ವಿರೂಪಾಕ್ಷಯ್ಯ, ಎಇಇ ತಿಪ್ಪೇಸ್ವಾಮಿ, ಎಂಜಿನಿಯರ್ ಬಿ.ಆರ್.ತಿಪ್ಪೇಸ್ವಾಮಿ, ಗುತ್ತಿಗೆದಾರ ಟಿ.ಎಲ್. ರಾಜೇಂದ್ರ, ಮುಖಂಡರಾದ ರಘುನಾಥರೆಡ್ಡಿ, ಶಿವಕುಮಾರ್, ಹನುಮಂತೇಗೌಡ , ರಂಗಪ್ಪ, ರಮೇಶ್ ಹಾಗೂ ಇನ್ನಿತರರು ಹಾಜರಿದ್ದರು.

Recent Articles

spot_img

Related Stories

Share via
Copy link
Powered by Social Snap