ಬೆಂಗಳೂರು
ಮುಂಬರುವ ಮಹತ್ವದ ಲೋಕಸಭಾ ಚುನಾವಣೆ ಸಿದ್ದತೆ ಸಂಬಂಧ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದ ಸಭೆಯಿಂದ ಸ್ವತಃ ತಾವೇ ದೂರ ಉಳಿದಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸ್ಪಷ್ಟೀಕರಣ ನೀಡಿದ್ದಾರೆ.
ವೇಣುಗೋಪಾಲ್ ಜೊತೆ ಸಂಸದರು,ಸಚಿವರುಗಳು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಿ ಸಭೆಯಿಂದ ನಾನೇ ದೂರ ಉಳಿದೆ. ಸಭೆಗೂ ಮೊದಲೆ ಮಧು ಯಕ್ಷಿಗೌಡ್ ಮತ್ತು ವೇಣುಗೋಪಾಲ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿ ಸಭೆಯಿಂದ ಹೊರ ಬಂದಿದ್ದೇನೆ.ಇದರಲ್ಲಿ ಅಪಾರ್ಥ ಕಲ್ಪಿಸುವುದಾಗಲೀ, ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದರು.
ಸಭೆಯಲ್ಲಿ ಉಸ್ತುವಾರಿ ಸಚಿವರು, ಸಂಸದರು,ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹಾಗು ಜಿಪಂ,ತಾಪಂ ಅಧ್ಯಕ್ಷರು ಭಾಗಹಿಸಿದ್ದರು. ಈ ಸಭೆಯಲ್ಲಿ ನಾನು ಭಾಗವಹಿಸಿದರೆ ಕೆಲವರು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಲು ಕಷ್ಟವಾಗಬಹುದು. ಈ ಹಿನ್ನಲೆಯಲ್ಲಿ ಸಭೆಯಿಂದ ದೂರ ಉಳಿದು ಮುಕ್ತ, ನಿರ್ಭೀತವಾಗಿ ಅಭ್ಯರ್ಥಿ ಆಯ್ಕೆ, ಸ್ಥಾನ ಹೊಂದಾಣಿಕೆ ಬಗ್ಗೆ ಮಾತನಾಡಲು ಅನುವು ಮಾಡಿಕೊಟ್ಟಿದ್ದೇನೆ. ಈ ಬಗ್ಗೆ ಅನ್ಯತಾ ಗೊಂದಲ ಸೃಷ್ಟಿಸುವುದು ಬೇಡವೆಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ