ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಶ್ರಮಿಸುವೆ : ಕರುಣಾಕರ ರೆಡ್ಡಿ

ಹರಪನಹಳ್ಳಿ:
     ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ನಾನು ಶಕ್ತಿ ಮೀರಿ ಶ್ರಮಿಸುವುದಾಗಿ ಶಾಸಕ ಜಿ. ಕರುಣಕರರೆಡ್ಡಿ ಹೇಳಿದರು. ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕರೆದ ಜಿಲ್ಲಾ ಕೇಂದ್ರ ಕುರಿತು ಸರ್ವ ಪಕ್ಷಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಹರಪನಹಳ್ಳಿಯ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ.
 
      ಸರ್ವ ಪಕ್ಷದ ನಿಯೋಗವನ್ನು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳ ಬಳಿ ಜಿಲ್ಲಾ ಕೇಂದ್ರ ಕುರಿತು ಚಿರ್ಚಿಸಲು ನಿಯೋಗದ ದಿನಾಂಕ ನಿಗಧಿಗೆ ಮುಂದಾಗುತ್ತೇನೆ ಎಂದರು. ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಲು ಎಲ್ಲಾ ರೀತಿಯ ಅರ್ಹತೆಯನ್ನು ಹೊಂದಿದ್ದು, ಸೂಕ್ತವಾದ ಸ್ಥಳ ವಿದ್ದು, ಪಶ್ಚಿಮ ತಾಲ್ಲೂಕು ಆಗಿರುವುದರಿಂದ ಮುಖ್ಯಮಂತ್ರಿಗಳು ಜಿಲ್ಲಾ ಕೇಂದ್ರ ಮಾಡಲು ಸಮ್ಮತ್ತಿಸುತ್ತಾರೆ ಎಂಬ ಭರವಸೆ ನನಗಿದೆ. ಈ ಹಿಂದೆ ಹರಪನಹಳ್ಳಿ 371ಜೆ ಕಲಂಗೆ ಸೇರಲು ನಾವು ಕೂಡ ಹೋರಾಟ ಮಾಡಿದ್ದೇವೆ.
     ಹರಪನಹಳ್ಳಿ ಬಳ್ಳಾರಿ ಜಿಲ್ಲೆಗೆ ಸೇರಿದ ನಂತರ ಉಪ ವಿಭಾಗವನ್ನು ಸಮಿಶ್ರ ಸರ್ಕಾರದ ಅವಧಿಯಲ್ಲಿ ಶ್ರಮವಹಿಸಿ ಉಳಿಸಿಕೊಂಡಿದ್ದೇನೆ. ಸರ್ವ ಪಕ್ಷಗಳು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೀರಿ, ಇದರಲ್ಲಿ ರಾಜಕೀಯ ಬೆರಿಸುವುದು ಬೇಡ, ಹೋರಾಟದಲ್ಲಿ ಎಲ್ಲರೂ ಕೈಜೋಡಿಸಿ, ಹಿಂದುಳಿದ ತಾಲ್ಲೂಕಿನ ಅಭಿವೃದ್ಧಿಗೆ ಮುಂದಾಗೋಣ ಎಂದರು.
       ಶ್ರೀ ವರಸದ್ಯೋಜಾತ ಸ್ವಾಮಿಗಳು ಮಾತನಾಡಿ ಹಿಂದುಳಿದ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ. ಹೋರಾಟ ಕೇವಲ ಹರಪನಹಳ್ಳಿಗೆ ಸೀಮಿತವಾಗದೇ ಇತರೆ ತಾಲ್ಲೂಕಿನ ಮುಖಂಡರುಗಳನ್ನು ಜಿಲ್ಲಾ ಕೇಂದ್ರಕ್ಕೆ ಕರೆತಂದು ಪ್ರತಿಯೊಬ್ಬರು ಸಕ್ರಿಯವಾಗಿ ಭಾಗವಹಿಸಿ ಹೋರಾಟ ಚಳುವಳಿಗೆ ಹಂತ ಹಂತವಾಗಿ ಜನಪ್ರತಿನಿಧಿಗಳ ಜೊತೆ ಕೈಜೋಡಿಸಿ, ನಮ್ಮ ಹೋರಾಟದ ಹಕ್ಕನ್ನು ಪಡೆಯಲು ಮುಂದಾಗೋಣ ಎಂದರು.
      ಹೋರಾಟಗಾರ ಹೊಸಳ್ಳಿ ಮಲ್ಲೇಶ್ ಮಾತನಾಡಿ ಶಾಸಕರು ಹೋರಾಟಕ್ಕೆ ಮುಂದಾಗಿರುವುದು ಶುಭ ಸೂಚನೆ. ಜಿಲ್ಲೆಯ ಹೋರಾಟ ಕೇವಲ ರಾಜಕಾರಣಿಗಳಿಗೆ ಮತ್ತು ಸಂಘಟನೆಗಾರರಿಗೆ ಅಲ್ಲ ಜಿಲ್ಲಾ ಕೇಂದ್ರದ ಹೋರಾಟದ ವಿಷಯದಲ್ಲಿ ಎಲ್ಲರು ಭಿನ್ನಾಭಿಪ್ರಾಯ ಬದಿಗೊತ್ತಿ, ಸಂಪೂರ್ಣ ಹೋರಾಟಕ್ಕೆ ಮುಂದಾಗಬೇಕು. ಇದಕ್ಕೆ ಸಂಘಟನೆಗಳು ಶಾಸಕರಿಗೆ ಸಂಪೂರ್ಣ ಬೆಂಬಲ ಸಹಕಾರ ನೀಡುತ್ತೇವೆ ಎಂದರು. 
       ಮಾಜಿ ಪುರಸಭೆ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ ಕಳೆದ 20 ವರ್ಷಗಳಿಂದ ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಹಿಂದುಳಿದ ತಾಲ್ಲೂಕು ಜಿಲ್ಲೆ ಆದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಹರಪನಹಳ್ಳಿ ತಾಲ್ಲೂಕು ಮಳೆ ಆಶ್ರಿತ ಪ್ರದೇಶವಾಗಿರುವುದರಿಂದ ಕೇಂದ್ರ ಸ್ಥಾನದ ಅವಶ್ಯಕತೆ ಇದೆ. ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.
      ಮಾಜಿ ಪುರಸಭಾ ಅಧ್ಯಕ್ಷ ಡಿ.ರಹಿಮಾನ್ ಸಾಬ್ ಮಾತನಾಡಿ 1884ರ ಬ್ರಿಟೀಷರ ಕಾಲದಲ್ಲಿಯೂ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಬೆಂಬಲವ್ಯಕ್ತವಾಗಿದ್ದ ಇತಿಹಾಸ ವಿದೆ. ಹೋರಾಟಕ್ಕೆ ಶಾಸಕರು ಕೂಡ ಒಂದು ಶಕ್ತಿ ಅವರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದು, ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು. 
    ಈ ಸಂದರ್ಭದಲ್ಲಿ ನೀಲಗುಂದ ಗುಡ್ಡದ ಮಠದ ಚನ್ನವೀರ ಸ್ವಾಮಿ, ಕೂಲಹಳ್ಳಿ ಸಂಸ್ಥಾನ ಮಠದ ಚಿನ್ನಮಯ ಸ್ವಾಮಿ, ಗಂಗಾಧರ್ ಗುರುಮಠ್, ಪ್ರೋ.ತಿಮ್ಮಣ್ಣ, ಇದ್ಲಿ ರಾಮಪ್ಪ, ನಿಚ್ಚವ್ವನಹಳ್ಳಿ ಭೀಮಪ್ಪ, ಗುಡಿಹಳ್ಳಿ ಹಾಲೇಶ್ ಮಾತನಾಡಿದರು. ಈ ವೇಳೆ ಸಾಹಿತಿ ರಾಮನ್ ಮಲಿ, ಎಂ.ಪಿ.ನಾಯ್ಕ, ಟಿ. ವೆಂಕಟೇಶ್, ಚಟ್ನಹಳ್ಳಿ ರಾಜಣ್ಣ, ನಾಗರಾಜಪ್ಪ, ಶಿಕಾರಿಬಾಲಪ್ಪ, ಶ್ರೀಧರ್ ಶಟ್ಟಿ, ಹಳ್ಳಿಕೇರಿ ಬಸಣ್ಣ, ಸಿ. ಬಸಪ್ಪ, ಇತರೆ ಮುಖಂಡರುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link