ಆಗ್ನೇಯ ಪದವೀಧರರ ಕಣದಿಂದ ನಿವೃತ್ತನಾಗುವುದಿಲ್ಲ

ಮಧುಗಿರಿ

    ಗ್ರಾಮೀಣ ಭಾಗದಲ್ಲಿರುವ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್‍ನ ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ತಿಳಿಸಿದರು.

    ಪಟ್ಟಣದ ಯಾದವ ಸಮುದಾಯ ಭವನದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಮತದಾರರ ಆಶೀರ್ವಾದ ಇದ್ದರೆ ಮುಂದಿನ ದಿನಗಳಲ್ಲಿ ಪದವೀಧರರ, ವಿದ್ಯಾವಂತ ನಿರುದ್ಯೋಗಿ ಯುವಕರ ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‍ನಲ್ಲಿ ಧ್ವನಿಯಾಗುತ್ತೇನೆ. ಶಿಕ್ಷಣ ಕ್ಷೇತ್ರದಲ್ಲಿ ನನಗೆ ಅಪಾರ ಅನುಭವವಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ನೀಡುವ ವೇತನದ ಮಾದರಿಯಲ್ಲಿಯೇ ಖಾಸಗಿ ಶಾಲೆಗಳ ಶಿಕ್ಷಕರಿಗೆ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

    ನಾನು ಚುನಾವಣೆಗೂ ಮೊದಲು ಕಣದಿಂದ ನಿವೃತ್ತಿಯಾಗುವುದಾಗಿ ಕೆಲವರು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ನಾನು ಅಂತಹ ಜಾಯಮಾನದವನಲ್ಲ. ನಾನು ದಿ.ಎ.ಕೃಷ್ಣಪ್ಪ ಅವರೊಂದಿಗೆ ರಾಜಕೀಯ ಕಲಿತು ಬಂದವನು, ನನಗೂ ಚುನಾವಣೆ ಹೇಗೆ ಎದುರಿಸಬೇಕೆಂಬುದು ತಿಳಿದಿದೆ ಎಂದರು.

    ಜಿ.ಪಂ.ಸದಸ್ಯ ಜಿ.ಜೆ.ರಾಜಣ್ಣ ಮಾತನಾಡಿ, ಹಿಂದುಳಿದ ವರ್ಗದ ಮುಖಂಡರಾದ ಡಿ.ಟಿ.ಶ್ರೀನಿವಾಸ್ ರವರು ಧೈರ್ಯದಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಕೇವಲ ನಮ್ಮ ಸಮುದಾಯದವರೆ ಅಲ್ಲದೆ ಹಿಂದುಳಿದವರು, ದಲಿತರು ಹಾಗೂ ಎಲ್ಲಾ ಸಮುದಾಯದ ಪದವೀಧರರು ಮೊದಲ ಪ್ರಾಶಸ್ತ್ಯದ ಮತ ನೀಡುವುದರ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡಬೇಕೆಂದು ಮತಯಾಚಿಸಿದರು.
ಯಾದವ ಸಂಘದ ತಾಲ್ಲೂಕು ಅಧ್ಯಕ್ಷ ಚಿನ್ನಪ್ಪ, ಖಜಾಂಚಿ ಚಿಕ್ಕಣ್ಣ, ಪ್ರಾಂಶುಪಾಲ ಸಿ.ಕೃಷ್ಣಪ್ಪ, ಸಮುದಾಯದ ಮುಖಂಡರಾದ ಎಂ.ವಿ.ಮೂಡಲಗಿರೀಶ್, ಪ್ರೆಸ್ ಕರಿಯಣ್ಣ, ನಿರಂಜನ್‍ದಾಸ್, ರಘುಯಾದವ್, ಮುದ್ದೇಗೌಡ, ಸಿದ್ದಪ್ಪ, ಕಾಮರಾಜು ಹಾಗೂ ಮುಂತಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link