ಚಿತ್ರದುರ್ಗ
ದೇಶಕ್ಕೆ ಭ್ರಷ್ಟಾಚಾರ ರಹಿತ ಆಡಳಿತದ ಅಗತ್ಯವಿದೆ. ಮೈತ್ರಿ ಸರ್ಕಾರ ಕಿತ್ತೊಗೆಯುವ ತೀರ್ಪನ್ನು ಮತದಾರ ಕೊಟ್ಟಿದ್ದಾನೆ. ಹುಸಿ ಭರವಸೆಗಳನ್ನೇ ಜನರಿಗೆ ಕೊಡುತ್ತಾ ಬಂದಿದ್ದ ಸರ್ಕಾರಕ್ಕೆ ಜನರೇ ತೀರ್ಪು ಕೊಟ್ಟಿದ್ದಾರೆ ಎಂದರು ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ ತಿಳಿಸಿದರು.
ಸಂಸದರಾಗಿ ಆಯ್ಕೆಯಾದ ನಂತರ ಸರ್ಕಾರಿ ಕಾಲೇಜು ಆವರಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು 46 ಸಾವಿರ ಕೋಟಿಸಾಲ ಮನ್ನಾ ಮಾಡುತ್ತೇವೆ ಅಂತಾರೆ. ಆದ್ರೆ, ಚಿತ್ರದುರ್ಗದ ರೈತರಿಗೆ 10 ಸಾವಿರ ಕೋಟಿ ಕೊಟ್ಟಿದ್ದರೆ ಭದ್ರಾ ಮೇಲ್ದಂಡೆ ಯೋಜನೆ ಆಗುತ್ತಿತ್ತು. ಮುಖ್ಯಮಂತ್ರಿ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು
ಒಳ್ಳೆಯ ಆಡಳಿತ ಕೊಡಬೇಕು ಎಂದು ಜನರು ಆರಿಸಿ ಕಳಿಸುತ್ತಾರೆ. ಆದರೆ ವ್ಯಾಪಾರ ಮಾಡಲು ಅಲ್ಲ. ಈಗ ಇಡೀ ದೇಶ ಬಿಜೆಪಿ ಆಗಿದೆ. ಎಲ್ಲೆಲ್ಲೂ ಬಿಜೆಪಿ ಅಲೆ ಕಾಣುತ್ತಿದೆ, ಇದು ದೇಶ ಭಕ್ತರ ಚುನಾವಣೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








