ಬದ್ದತೆ ಇದ್ದರೆ ಉದ್ದಿಮೆಯಲ್ಲಿ ಯಶಸ್ಸು ಸಾಧ್ಯ

ಚಿತ್ರದುರ್ಗ

          ಉದ್ಯೋಗದಲ್ಲಿ ಬದ್ಧತೆಯಿಂದ ತೊಡಗಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂದು ಧರ್ಮಸ್ಥಳದ ಸೇವಾವಿಭಾಗ, ಕೇಂದ್ರ ಕಛೇರಿಯ ಪ್ರಾದೇಶಿಕನಿರ್ದೇಶಕ ಜಯಶಂಕರ ಶರ್ಮಾ ಅಭಿಪ್ರಾಯಪಟ್ಟರು.
ರುಡ್‍ಸೆಟ್ ಸಂಸ್ಥೆಯು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಸಮೃದ್ಧಿ ಸ್ವ ಉದ್ಯೋಗ ಯೋಜನೆ ಅಡಿಯಲ್ಲಿ 13 ದಿನಗಳ ಕಾಲಾವಧಿಯ ಗ್ರಾಮೀಣ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವುದರೊಂದಿಗೆ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

          ವೃತ್ತಿಯಲ್ಲಿ ಮೊದಲಿಗೆ ಬದ್ಧತೆಯಿಂದ ಸಮಯವನ್ನು ಸರಿಯಾದ ಸದ್ಭಳಕೆ ಮಾಡಿಕೊಳ್ಳಿರಿ, ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಕಲಿಯುವ ಮನಸ್ಸಿರಬೇಕು ಅಷ್ಟೆ, ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ನಿಮ್ಮಲ್ಲಿರುವ ಅನುಭವಗಳನ್ನು ಇತರರೊಂದಿಗೆ ಪರಸ್ಪರ ಹಂಚಿಕೊಳ್ಳುವುದರಿಂದ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ.ನಿಮ್ಮ ಉದ್ಯೋಗದಲ್ಲಿ ಆಗುತ್ತಿರುವ ಬದಲಾವಣಿಗಳನ್ನು ಗುರುತಿಸಿಕೊಂಡು ಬದಲಾದ ವಿಷಯಗಳನ್ನು ಉದ್ಯಮದಲ್ಲಿ ಅಳವಡಿಸಿಕೊಳ್ಳುತ್ತಾ ಸಾಗಿದರೆ ಉದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ.

        ನಿಮ್ಮಲ್ಲಿರುವ ಉದ್ಯಮಕ್ಕೆ ಮಾರಕವಾಗುವ ದ್ವೇಷ ಅಸೂಯೆ ಗುಣಗಳನ್ನು ಬಿಟ್ಟು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಿ. ಉದ್ಯಮ ಯಶಸ್ವಿಯಾಗಬೇಕಾದರೆ ಉದ್ಯಮಿಯ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಆರೋಗ್ಯವೇ ಭಾಗ್ಯ ಎನ್ನುವಂತೆ ಉತ್ತಮ ಆಹಾರ ಕ್ರಮವನ್ನು ಅನುಸರಿಸಿ ಆರೋಗ್ಯಪೂರ್ಣ ಉದ್ಯಮಶೀಲರಾಗಿರಿ ನೀವು ಉದ್ಯೋಗವನ್ನು ಮಾಡುವುದರ ಜೊತೆಗೆ ಇತರರಿಗೂ ಉದ್ಯೋಗವನ್ನು ಸೃಷ್ಠಿಸಿ. ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

         ಕೆನರಾ ಬ್ಯಾಂಕ್‍ನ ಎಲ್.ಡಿ.ಡಿ.ಎಮ್ ನಿಂಗೇಗೌಡ ,ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಉತ್ತಮ ಗ್ರಾಹಕಸೇವೆಯಿಂದ ಹೆಚ್ಚು ಲಾಭಗಳಿಸಲು ಸಾಧ್ಯ ತರಬೇತಿಯ ಅವಧಿಯಲ್ಲಿ ಕಲಿಸುವ ವಿಷಯಗಳನ್ನು ಉದ್ಯೋಗದಲ್ಲಿ ಮತ್ತು ಜೀವನದಲ್ಲಿ ಅಳವಡಿಸಿ. ಉದ್ಯೋಗವನ್ನು ಆರಂಭಿಸಲು ಬ್ಯಾಂಕ್‍ಗಳಲ್ಲಿ ಸಾಲಸೌಲಭ್ಯವನ್ನು ಪಡೆದುಕೊಳ್ಳಿ ಮತ್ತು ಸರಿಯಾದ ಸಮಯಕ್ಕೆ ಮರುಪಾವತಿಸಿ ಅಂದರೆ ಹೆಚ್ಚಿನ ಸೌಲಭ್ಯವನ್ನು ಪಡೆಯಬಹುದು. ತರಬೇತಿ ಅವಧಿಯಲ್ಲಿ ಎಲ್ಲರೂ ಸಕ್ರೀಯವಾಗಿ ಪಾಲ್ಗೋಂಡು ಯಶಸ್ವಿ ಉದ್ಯಮಿಗಳಾಗಿ ಎಂದರು.

        ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‍ನ ಚಿಫ್ ಮ್ಯಾನೇಜರ್ ಮುನಿರಾಜ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಗಣೇಶ್ ಬಿ, ಕಾರ್ಯಕ್ರಮದಲ್ಲಿ ಹಾಜರಿದ್ದರು ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿ ಸ್ವಾಗತಿಸಿದರು. ತೋಟಪ್ಪ ಎಸ್. ಗಾಣಿಗೇರ, ನಿರೂಪಿಸಿದರು ವಂದಿಸಿ ದರು. ಕಾರ್ಯಕ್ರಮದಲ್ಲಿ ಯೋಜನೆಯ ಫಲಾನುಭವಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link